Video Viral: ಉದಿತ್ ನಾರಾಯಣ್ ಕಿಸ್ಸಿಂಗ್ ವಿಡಿಯೋ: ಕಾಲೆಳೆದ ಸ್ನೇಹಿತ ಅಭಿಜೀತ್ ಭಟ್ಟಾಚಾರ್ಯ
ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಬಾಲಿವುಡ್ ಗಾಯಕ ಉದಿತ್ ನಾರಾಯಣ್ ಅವರ ವೈರಲ್ ವಿಡಿಯೋ ಹೆಚ್ಚು ಸುದ್ದು ಮಾಡುತ್ತಿದೆ. ಇಡೀ ವೃತ್ತಿ ಬದುಕಿನಲ್ಲಿ ಅನೇಕ ಪ್ರಸಿದ್ಧ ಹಾಡುಗಳನ್ನು ಹಾಡಿದ್ದಾರೆ. ಆ ಪೈಕಿ ಉದಿತ್ ಅವರ ಪ್ರಣಯ ಗೀತೆಗಳು ಯುವ ಪೀಳಿಗೆಗೆ ಹುಚ್ಚೆಬ್ಬಿಸಿದ್ದವು. ಇಂತಹ ಅದ್ಭುತ ಗಾಯಕ ಇತ್ತೀಚೆಗೆ ವೇದಿಕೆ ಮೇಲೆ ನಡೆದುಕೊಂಡ ರೀತಿ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸಂಬಂಧಿಸಿದಂತೆ ಅವರ ಸ್ನೇಹಿತ ಮತ್ತು ಗಾಯಕ ಅಭಿಜೀತ್ ಭಟ್ಟಾಚಾರ್ಯ ಪ್ರತಿಕ್ರಿಯಿಸಿದ್ದಾರೆ.
ಬಾಲಿವುಡ್ ಗಾಯಕ ಉದಿತ್ ನಾರಾಯಣ್ ಅವರು ಎಂದಿನಂತೆ ಸಂಗೀತ ಕಚೇರಿ ನಡೆಸಿದ್ದರು. ವೇದಿಕೆ ಮೇಲೆ ಹಾಡು ಹಾಡುವಾಗಲೇ ಅವರ ಮಹಿಳಾ ಅಭಿಮಾನಿಯು ವೇದಿಕೆ ಮುಂದೆ ಬಂದ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಂತೆ ಉದಿತ್ ನಾರಾಯಣ್ ಅವರ ಕೆನ್ನೆಗೆ ಮುತ್ತಿಕ್ಕಲು ಮುಂದಾಗುತ್ತಾರೆ.

ಅಷ್ಟರಲ್ಲೇ ಗಾಯಕ ಉದಿತ್ ನಾರಾಯಣ್ ಅವರೇ ಆ ಮಹಿಳಾ ಅಭಿಮಾನಿಯ ತುಟಿಗಳಿಗೆ ಮುತ್ತಿಕ್ಕಿಬಿಡುತ್ತಾರೆ. ಇದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಬಹುತೇಕ ಮಂದಿ ವ್ಯಾಪಕ ಟೀಕೆ ಮಾಡುತ್ತಿದ್ದಾರೆ. ಉದಿತ್ ಅವರ ಅಭಿಮಾನಿಗಳಿಗೆ ಈ ಘಟನೆ ಖುಷಿ ತಂದಿಲ್ಲ ಎನ್ನಲಾಗಿದೆ. ವೈರಲ್ ಆದ ವೀಡಿಯೊದ ನಂತರ ಅಭಿಜೀತ್ ಭಟ್ಟಾಚಾರ್ಯ ಅವರು ಸ್ನೇಹಿತನ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ಗಮನ ಸೆಲೆಯುತ್ತಿದೆ.
ಸ್ನೇಹಿತನ ಕಾಲೆಳೆದ ಅಭಿಜೀತ್ ಭಟ್ಟಾಚಾರ್ಯ
ಉದಿತ್ ನಾರಾಯಣ್ ವಿಡಿಯೋ ನೋಡಿ, 'ಮೇರಾ ಖಿಲಾಡಿ...' ಎಂದು ಪ್ರತಿಕ್ರಿಯಿಸಿದ್ದಾರೆ. ಉದಿತ್ ಮತ್ತು ಅಭಿಜೀತ್ ಭಟ್ಟಾಚಾರ್ಯ ಅವರು ದೀರ್ಘಕಾಲದ ಸ್ನೇಹಿತರಾಗಿದ್ದಾರೆ. ಹಾಡನ್ನು ಹಾಡುತ್ತಲೇ ವೇದಿಕೆ ಮೇಲೆ ಮುತ್ತಿಕ್ಕುವ ವಿಡಿಯೋ ನೋಡಿ ಮೇರಾ ಖಿಲಾಡಿ ಎಂದು ಸ್ನೇಹಿತರ ಕಾಲೆಳೆದಿದ್ದಾರೆ.
ಸ್ವತಃ ಉದಿತ್ ನಾರಾಯಣ್ ಅವರು ಸಹ ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಅಭಿಮಾನಿಗಳು ಮತ್ತು ನನ್ನ ಮಧ್ಯೆ ಮುರಿಯಲಾಗದ ಬಾಂಧವ್ಯ ಇದೆ. ಈ ವಿಡಿಯೋ ಹಳೆಯದ್ದು, ಈಗ ಏಕೆ ವೈರಲ್ ಆಗುತ್ತಿದೆಯೋ ಗೊತ್ತಿಲ್ಲ. ನಾನು ಅಂದು ವೇದಿಕೆ ಮೇಲೆ ಕೊಳಕು ನಡವಳಿಕೆ ಪ್ರದರ್ಶಿಸಿಲ್ಲ. ಅವರು ನನ್ನ ಅಭಿಮಾನಿಗಳು. ಘಟನೆಯಿಂದ ನನಗೆ ಅವಮಾನ, ಮುಜಗರ ಅನ್ನಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಹಿಳಾ ಅಭಿಮಾನಿಗಳಿಗೆ ಸರತಿಯಾಗಿ ಮುತ್ತು
ಸದ್ಯ ವೈರಲ್ ಆಗುತ್ತಿರುವ ಹಳೆಯದ್ದು ಎನ್ನಲಾಗುತ್ತಿದೆ. 'ಜನಪ್ರಿಯ ಹಾಡು ಟಿಪ್ ಟಿಪ್ ಬರ್ಸಾ ಪಾನಿ' ಹಾಡು ವೇದಿಕೆ ಮೇಲೆ ಹಾಡಲಾಗುತ್ತಿದೆ. ಈ ವೇಳೆ ಗಾಯಕ್ ಉದಿತ್ ನಾರಾಯಣ್ ಅವರು ವೇದಿಕೆ ಮೇಲೆ ಕೇವಲ ಒಬ್ಬರಿಗೆ ಮಾತ್ರವಲ್ಲದೇ, ಅನೇಕ ಮಹಿಳಾ ಅಭಿಮಾನಿಗಳಿಗೆ ಮುತ್ತಿಕ್ಕಿದ್ದಾರೆ. ಮೊದಲ ಮಹಿಳೆಗೆ ತುಟಿಗೆ ಚುಂಬಿಸಿದ ಬಳಿಕ ಅವರ ಹಿಂದೆಯೇ ಉದಿತ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಮಹಿಳಾ ಫ್ಯಾನ್ಸ್‌ಗೆ ಸರತಿ ಸಾಲಿನಲ್ಲಿ ಫೋಟೋಗೆ ಪೋಸ್ ಕೊಟ್ಟು ನಂತರ ಕೆನ್ನೆಗೆ ಮುತ್ತು ಕೊಡುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಹಾಡು ಹಾಡುವಾಗಲೇ ಒಬ್ಬೊಬ್ಬರಾಗಿ ಬರುವ ಮಹಿಳಾ ಅಭಿಮಾನಿಗಳಿಗೆ ಉದಿತ್ ನಾರಾಯಣ್ ಮುತ್ತಿಕ್ಕಿ ಸ್ಪಂದಿಸಿದ್ದಾರೆ. ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ.












Click it and Unblock the Notifications