ಗಂಡನನ್ನು ಖುಷಿಯಾಗಿಡಲು ಸಂಬಳ ಕೊಟ್ಟು ಪ್ರೇಯಸಿಯನ್ನು ನೇಮಿಸಿಕೊಂಡ ಪತ್ನಿ, ಹಸ್ಬೆಂಡ್ ಹ್ಯಾಪಿ!
ಬೆಂಗಳೂರು, ಅಕ್ಟೋಬರ್ 07: ತನ್ನ ಹೆಂಡತಿ ನನ್ನನ್ನು ಖುಷಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಗಂಡಂದಿರ ಆರೋಪಗಳ ನಡುವೆಯೇ ಪತ್ನಿಯಾದವಳು ತಾನು ಮದುವೆಯಾದ ಗಂಡನನ್ನು ಖುಷಿಯಾಗಿಡಲು ಹೀಗೆಲ್ಲಾ ಮಾಡುತ್ತಾರಾ ಎಂದು ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ.
ಗಂಡಂದಿರು ಅಯ್ಯೋ ಯಾಕಾದರೂ ಇವಳನ್ನು ಮದುವೆಯಾದೆನೋ ಎಂದು ಕೊರಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಇದಕ್ಕೆ ವ್ಯತಿರಿಕ್ತ ಉದಾಹರಣೆಯಂತಿದ್ದಾರೆ. ಥೈಲ್ಯಾಂಡ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಸಂತೋಷವಾಗಿರಿಸಲು ಪ್ರೇಯಸಿಯನ್ನು ನೇಮಿಸಿಕೊಂಡಿದ್ದಾಳೆ. 44 ವರ್ಷದ ಪತ್ತೀಮಾ ಚಮ್ನಾನ್, ಕೆಲವು ಸಮಯದಿಂದ ತನ್ನ ಪತಿಯೊಂದಿಗೆ ಮಲಗಿರಲಿಲ್ಲ. ಅದಕ್ಕೆ ತಾನು ಕೆಟ್ಟ ಹೆಂಡತಿ ಎಂಬಂತೆ ಭಾವಿಸಿ ಅದಕ್ಕಾಗಿ ಏನಾದರೂ ಪರಿಹಾರ ಮಾಡಬೇಕೆಂದು ಬಯಸಿದ್ದಳು.

ಅದಕ್ಕಾಗಿ ಪತ್ತೀಮಾ ತನ್ನ ಪತಿಗೆ ಪ್ರೇಯಸಿಯೊಬ್ಬಳನ್ನು ನೇಮಿಸಿಕೊಳ್ಳಲು ನಿರ್ಧರಿಸಿದಳು. ಕಳೆದ ವರ್ಷ ಜುಲೈನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರೇಯಸಿ ಕೆಲಸಕ್ಕೆ ಜಾಹೀರಾತು ನೀಡಿದ್ದಳು. ತನಗೆ ಕಾಲೇಜು ಡಿಪ್ಲೊಮಾ ಹೊಂದಿರುವ ಯುವತಿಯರು, ಒಂಟಿ ಮಹಿಳೆಯರು ಬೇಕಾಗಿದ್ದಾರೆ. ಅವರಿಗೆ 15,000 ಬಹ್ತ್ (ರೂ. 34,000) ವೇತನವನ್ನು ನೀಡುವುದಾಗಿ ಹೇಳಿದ್ದಳು.
ಮಿರರ್ ಪತ್ರಿಕೆ ಪ್ರಕಾರ, ಅಭ್ಯರ್ಥಿಯು ಆಕರ್ಷಕವಾಗಿ ಕಾಣಬೇಕು ಮತ್ತು ಚೆನ್ನಾಗಿ ಮಾತನಾಡಬೇಕು ಮತ್ತು ಮುಖ್ಯವಾಗಿ ಮಗುವನ್ನು ಹೊಂದಿರಬಾರದು ಎಂದು ಕಂಡಿಷನ್ ಹಾಕಿದ್ದಳು. ಪತ್ತೀಮಾ, "ನನ್ನ ಪತಿ ಏಕಾಂಗಿಯಾಗಿ ಕಷ್ಟಪಟ್ಟು ದುಡಿಯುತ್ತಿದ್ದಾರೆ. ಅವರು ಸಂತೋಷವಾಗಿರಲು ನಾನು ಬಯಸುತ್ತೇನೆ. ನಾನು ಮನೆಯಲ್ಲಿರಲು ಸ್ನೇಹಿತರನ್ನು ಸಹ ಹೊಂದಿರುತ್ತೇನೆ" ಎಂದು ಹೇಳಿದ್ದಾಳೆ. ಪತ್ತೀಮಾ ಮತ್ತು ಅವರ ಪತಿ ಪಟ್ಟಾಗೋರ್ನ್ ಕರಾವಳಿ ಪ್ರಾಂತ್ಯದ ಸಮುತ್ ಪ್ರಕಾನ್‌ನಲ್ಲಿ ಕುಟುಂಬದ ವ್ಯಾಪಾರವೊಂದನ್ನು ಮಾಡುತ್ತಿದ್ದಾರೆ.
ನಾನು ಒಳ್ಳೆಯ ಹೆಂಡತಿಯಲ್ಲ:
ತನ್ನ ಗಂಡ ದೀರ್ಘಕಾಲದ ಖಿನ್ನತೆಯೊಂದಿಗೆ ಹೋರಾಡುತ್ತಿದ್ದಾರೆ. ಅದಕ್ಕಾಗಿಯೇ ಅವರಿಗೆ ಸ್ವಲ್ಪ ಹೆಚ್ಚುವರಿ ಸಹಾಯದ ಅಗತ್ಯವಿದೆ. ತನ್ನ ಪತಿಯನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಅವರಿಗೆ ಒಳ್ಳೆಯ ಹೆಂಡತಿಯಲ್ಲ. ಪ್ರೇಯಸಿಯು ನನ್ನ ಪತಿಯನ್ನು ದೈಹಿಕವಾಗಿ ಸಂತೋಷಪಡಿಸುವುದು ಮುಖ್ಯ. ಅವನು ಒಬ್ಬ ಮನುಷ್ಯ ಮತ್ತು ಅದು ಬೇಕು, ಅವನಿಗೆ ಇನ್ನೂ ಹೆಚ್ಚಿನ ಶಕ್ತಿ ಇದೆ ಎಂದು ಹೇಳಿದ್ದಾಳೆ.
"ಅವನ ಪ್ರೇಯಸಿಯು ಸಹ ಅವನನ್ನು ಕಂಪನಿಯಲ್ಲಿಟ್ಟುಕೊಳ್ಳಲು ಮತ್ತು ಅವನನ್ನು ರಂಜಿಸಲು ಸಮರ್ಥರಾಗಿರಬೇಕು, ಆದ್ದರಿಂದ ಅವರು ಉತ್ತಮ ವ್ಯಕ್ತಿತ್ವವನ್ನು ಹೊಂದಿರಬೇಕು ಮತ್ತು ವಿನೋದಮಯವಾಗಿರಬೇಕು. ನಾನು ನನ್ನ ಪತಿಯೊಂದಿಗೆ ಅಷ್ಟಾಗಿ ಮಲಗಿಲ್ಲ. ಇದರಿಂದ ನಾನು ಒಳ್ಳೆಯ ಹೆಂಡತಿಯಲ್ಲ ಎಂದು ನನಗೆ ಅನಿಸುತ್ತದೆ" ಎಂದು ಅವರು ಹೇಳಿದಳು.
ಹಸ್ಬೆಂಡ್ ಹ್ಯಾಪಿ:
ಪ್ರೇಯಸಿಯನ್ನು ನೇಮಿಸಿಕೊಳ್ಳುವಲ್ಲಿ ಆಕೆಯ ಗಂಡ ಪಟ್ಟಗಾರ್ನ್ ಜಾಹೀರಾತಿನ ಬಗ್ಗೆ ತಿಳಿದಾಗ ಆಶ್ಚರ್ಯಚಕಿತರಾದನು. ಆದರೆ ಅವನು ಅವಳ ಯೋಚನೆಯನ್ನು ವಿರೋಧಿಸಲಿಲ್ಲ. ನೇಮಕಗೊಂಡ ವ್ಯಕ್ತಿಯನ್ನು ಕುಟುಂಬದಂತೆ ಪರಿಗಣಿಸಲಾಗುವುದು ಎಂದು ಆತ ಹೇಳಿದನು. ಕೊನೆಗೆ ಪತ್ತೀಮಾ 33 ವರ್ಷದ ಸುಂದರ ಮಹಿಳೆಯನ್ನು ತನ್ನ ಗಂಡನ ಪ್ರೇಯಸಿಯಾಗಿ ನೇಮಿಸಿಕೊಂಡಳು. ಆ ಮಹಿಳೆಯು ಹೆಂಡತಿಯ ಆಪ್ತ ಸ್ನೇಹಿತೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.












Click it and Unblock the Notifications