ಕಾಸು ಇಲ್ವಾ ಫೋನ್ ಪೇ ಮಾಡಿ ಎಂದ ಭಿಕ್ಷುಕ, ಬಾಲಕಿ ಕೆನ್ನೆ ಕಚ್ಚಿದ ಸೈಕೋ- ವಿಡಿಯೋ ವೈರಲ್

ಭಾರತದಲ್ಲಿ ಎಲ್ಲವೂ ಡಿಜಿಟಲ್ ಆಗಿದೆ. ಚಿಲ್ಲರೆ ಅಂಗಡಿಗಳಲ್ಲೂ ಕ್ಯೂಆರ್ ಕೋಡ್‌ಗಳನ್ನು ಬಳಸಲಾಗುತ್ತದೆ. ಸದ್ಯ ಭಿಕ್ಷೆ ಬೇಡಲು ಕೂಡ ಕ್ಯೂಆರ್‌ ಕೋಡ್ ಬಳಸುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಅಸ್ಸಾಂನ ಗುವಾಹಟಿಯಲ್ಲಿ ದೃಷ್ಟಿದೋಷ ಇರುವ ಭಿಕ್ಷುಕನೊಬ್ಬ ಭಿಕ್ಷೆ ಕೇಳುವ ವೇಳೆ ಕ್ಯೂಆರ್ ಕೋಡ್ ಹಿಡಿದು ಓಡಾಡುವುದು ಕಂಡು ಬಂದಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಗರ ಗಮನ ಸೆಳೆದಿದೆ. ದಶರಥ್ ಎಂಬ ಅಂಧ ಭಿಕ್ಷುಕ ಡಿಜಿಟಲ್ ಪಾವತಿಯ ಮೂಲಕ ಭಿಕ್ಷೆ ಸ್ವೀಕರಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

A video of a beggar asking for alms through a QR code has gone viral

ಟ್ರಾಫಿಕ್‌ನಲ್ಲಿ ಭಿಕ್ಷುಕ ಕ್ಯೂಆರ್‌ ಕೋಡ್ ಇರುವ ಬೋರ್ಡ್ ಹಾಕಿಕೊಂಡು ಕಾರಿನ ಬಳಿ ಹೋಗಿ ಭಿಕ್ಷೆ ಬೇಡುತ್ತಾನೆ. ಜೊತೆಗೆ ತನ್ನ ಖಾತೆಗೆ ಹಣ ಬಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಕಿವಿ ಮೊಬೈಲ್ ಫೋನ್ ಹಿಡಿದುಕೊಂಡಿದ್ದಾನೆ. ಈ ವಿಡಿಯೋವನ್ನು ಕಾಂಗ್ರೆಸ್ ನಾಯಕ ಗೌರವ್ ಸೋಮಾನಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಭಿಕ್ಷುಕರು ಡಿಜಿಟಲ್ ಬಳಸಿ ಭಿಕ್ಷೆ ಬೇಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಬಿಹಾರದ ಬೆಟ್ಟಿಯಾ ಎಂಬ ಭಿಕ್ಷುಕ ರೈಲು ನಿಲ್ದಾಣದಲ್ಲಿ ಕುತ್ತಿಗೆಯಲ್ಲು ಕ್ಯೂಆರ್ ಕೋಡ್ ಬೋರ್ಡ್ ಹಾಕಿಕೊಂಡು ಡಿಜಿಟಲ್ ಟ್ಯಾಬ್ಲೆಡ್‌ನೊಂದಿಗೆ ಡಿಜಿಟಲ್ ಮೋಡ್ ಮೂಲಕ ಪಾವತಿಸಲು ಜನರಿಗೆ ಆಯ್ಕೆಗಳನ್ನು ನೀಡುತ್ತಿರುವುದು ಸಹ ಸುದ್ದಿಯಾಗಿತ್ತು.

ಬಾಲಕಿಗೆ ಕೆನ್ನೆ ಕಚ್ಚಿದ ಪಾಗಲ್

ಮತ್ತೊಂದು ವೈರಲ್ ವಿಡಿಯೋದಲ್ಲಿ ಹುಚ್ಚನೊಬ್ಬ ಬಾಲಕಿಗೆ ಕೆನ್ನೆ ಕಚ್ಚಿದ್ದು ಕಂಡು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ. ಸೈಕೋ ವ್ಯಕ್ತಿಯೊಬ್ಬ ದಾರಿಯಲ್ಲಿ ತನ್ನ ಪಾಡಿಗೆ ಹೋಗುತ್ತಿದ್ದ ಬಾಲಕಿಯನ್ನು ಹಿಡಿದು ಕೆನ್ನೆ ಕಚ್ಚಿ ಓಡಿ ಹೋಗಿದ್ದಾನೆ. ಇದು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಘಟನೆ ಬಾಂಗ್ಲಾದೇಶದ ದಿನಾಜ್ ಪುರದಲ್ಲಿ ನಡೆದಿದ್ದು ಸೈಕೋ ವ್ಯಕ್ತಿಯೊಬ್ಬ ಶಾಲಾ ಬಾಲಕಿಗೆ ಕಿರುಕುಳ ನೀಡಿದ್ದಾರೆ.

ಈ ಭಯಾನಕ ದೃಶ್ಯ ವೈರಲ್ ಆಗಿ ಕೋಲಾಹಲವೇ ಸೃಷ್ಟಿಯಾಗಿತ್ತ. ಇದು ಭಾರೀ ಆಕ್ರೋಶಕ್ಕೆ ಗುರಿಯಾಗಿದೆ. ಸೈಕೋ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಹೇಂದ್ರಾ ವರ್ಮ ಎಂಬವವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋ ಶಾಲಾ ಬಾಕಿಕೆಯೊಬ್ಬಳು ದಾರಿಯಲ್ಲಿ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದೆಯಿಂದ ಬಂದ ವ್ಯಕ್ತಿ ಆಕೆಯನ್ನು ಹಿಡಿದು ಕೆನ್ನೆ ಕಚ್ಚಿ ಓಡಿ ಹೋಗುತ್ತಾನೆ. ಈ ವೇಳೆ ಬಾಲಕಿ ಕಿರಿಚಾಡುತ್ತಾಳೆ. ಘಟನೆ ಬಳಿಕ ಸಾರ್ವಜನಿಕರು ಆತನಿಗೆ ಸರಿಯಾಗಿ ಗೂಸಾ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+