ಗಾಜಿಗೆ ತಲೆ ಬಡಿಸಿಕೊಂಡ ಹುಡುಗಿ: ಮುಂದೆ ನೋಡಿ ನಡೆಯಮ್ಮ ಎಂದ ನೆಟ್ಟಗರು- ವಿಡಿಯೋ
ಸಾಮಾನ್ಯವಾಗಿ ಮಾಲ್, ದೊಡ್ಡ ಶಾಪ್ ಅಥವಾ ದುಬಾರಿ ರೆಸ್ಟಾರ್ಟ್‌ಗಳಲ್ಲಿ ಹೀಗೊಂದು ಅನುಭವ ನಿಮಗಾಗಿರಬಹುದು. ಮುಂದೆ ಸ್ಪಷ್ಟವಾದ ಮಾರ್ಗವಿದೆ ಎಂದು ನಿಮಗೆ ಅನಿಸಬಹುದು. ಆದರೆ ಮುಂದೆ ನಡೆದಾಗ ಗಾಜಿನ ಗೋಡೆ ನಿಮ್ಮನ್ನು ತಡೆದಿರಬಹುದು. ಕೆಲ ಬಾರಿ ಇದರಿಂದ ತಲೆಗೆ ಪಟ್ಟು ಕೂಡ ಆಗಿರಬಹುದು. ಇದು ನಿಮ್ಮಲ್ಲಿ ಅನೇಕರಿಗೆ ಅನುಭವಕ್ಕೆ ಬಂದಿರುತ್ತದೆ.
ಒಂದು ಬಾರಿ ಈ ರೀತಿ ಅನುಭವ ನಿಮಗಾದರೆ ಮತ್ತೊಮ್ಮೆ ನೀವು ಎಚ್ಚೆತ್ತುಕೊಳ್ಳುತ್ತೀರಿ. ಆದರೆ ಇಲ್ಲೊಬ್ಬ ಹುಡುಗಿ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಬಾರಿ ಹೊರ ಹೋಗುವ ಮಾರ್ಗವೆಂದು ಭಾವಿಸಿ ಗಾಜಿಗೆ ತಲೆ ಬಡಿಸಿಕೊಂಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ಕಂಡು ಬಂದ ದೃಶ್ಯದಲ್ಲಿ, ಹೊರ ಹೋಗುವ ಆತುರದಲ್ಲಿ ಇದ್ದ ಹುಡುಗಿ ಒಮ್ಮೆ ಗಾಜಿಗೆ ತಲೆ ಬಡಿಸಿಕೊಳ್ಳುತ್ತಾಳೆ. ಮತ್ತೊಮ್ಮೆ ಹುಡುಗಿ ಮುಂದೆ ಏನಿದೆ ಅಂತಲೂ ನೋಡುವುದಿಲ್ಲ. ಹಾಗೇ ನುಗ್ಗುತ್ತಾಳೆ. ಆಗಲೂ ಹುಡುಗಿಗೆ ಗಾಜು ತಾಗುತ್ತದೆ. ಎರಡು ಬಾರಿ ಹೀಗಾದರೂ ಹುಡುಗಿ ತನ್ನ ಮುಂದೆ ಗಾಜಿರುವುದನ್ನು ಸರಿಯಾಗಿ ವೀಕ್ಷಿಸುವುದೇ ಇಲ್ಲ. ಮೂರನೇ ಬಾರಿಯೂ ಗಾಜು ಬಡಿಸಿಕೊಳ್ಳುತ್ತಾಳೆ. ತಲೆ ಹಿಡಿದುಕೊಂಡೇ ಕೊನೆಗೆ ಹೊರ ಹೋಗುತ್ತಾಳೆ.
ವೈರಲ್ ವಿಡಿಯೋ ಇಲ್ಲಿದೆ:-
😳😳😳 pic.twitter.com/xKUXpdz97A
— cctv ediots 📷 (@cctv_videos) April 13, 2023
ಹೀಗೆ ಆತುರದಲ್ಲಿದ್ದ ಹುಡುಗಿ ಮುಂದೇನಿದೆ ಎನ್ನುವುದನ್ನೂ ನೋಡದೇ ಸಾಗುತ್ತಾಳೆ. ಇದನ್ನು ಅಲ್ಲಿದ್ದ ಮಕ್ಕಳೂ ಕೂಡ ವೀಕ್ಷಿಸುತ್ತಿರುತ್ತಾರೆ. ಆದರೆ ಹುಡುಗಿ ಕೆಲವೇ ಸಮಯದಲ್ಲಿ ಮೂರು ಬಾರಿ ಹೊರ ಹೋಗುವ ಮುನ್ನ ಗಾಜನ್ನು ತಲೆಗೆ ಬಡಿಸಿಕೊಳ್ಳುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಅಪಹಾಸ್ಯ ಮಾಡಿದ್ದಾರೆ. ಇನ್ನೂ ಕೆಲವರು ಈ ರೀತಿಯ ಅವಘಡಗಳನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ.
ಈ ಪಾರದರ್ಶಕ ಗಾಜಿನ ಮೇಲೆ ಕೆಲವು ರೀತಿಯ ಗುರುತು ಅಥವಾ ಸೂಚಕವನ್ನು ಹೊಂದಿರಬೇಕು. ಇದರಿಂದ ಜನರು ಈ ಫಲಕಗಳನ್ನು ದೂರದಿಂದ ನೋಡಬಹುದು ಮತ್ತು ತಲೆ ಹೊಡೆಯುವುದನ್ನು ತಪ್ಪಿಸಬಹುದು.

ಮತ್ತೊಂದು ವಿಡಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಬಸ್‌ನಲ್ಲಿ ಮಹಿಳೆಯರು ಸೀಟ್‌ಗಾಗಿ ಜಗಳವಾಡಿದ್ದಾರೆ. ಈ ಜಗಳದ ದೃಶ್ಯವನ್ನು ಸಹ ಪ್ರಯಾಣಿಕರು ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ದೆಹಲಿಯ ಡಿಟಿಸಿ ಬಸ್‌ನಲ್ಲಿ ಇಬ್ಬರು ಮಹಿಳೆಯರು ಪ್ರಯಾಣಿಸುತ್ತಿದ್ದು ಅವರು ಆಸನಕ್ಕಾಗಿ ಜಗಳವಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು ಸುಮಿತಿ ಚೌಧರಿ ಎಂಬ ಬಳಕೆದಾರರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 4 ನಿಮಿಷಗಳ ಸುದೀರ್ಘ ವೀಡಿಯೊದಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಹೊಡೆದಾಡಿಕೊಳ್ಳುವುದನ್ನು ಮತ್ತು ಬೆದರಿಕೆ ಹಾಕುವುದನ್ನು ಕಾಣಬಹುದು. ಡಿಟಿಸಿ ಬಸ್ಸಿನೊಳಗಿನ ಇತರ ಪ್ರಯಾಣಿಕರು ಅವರನ್ನು ಮನವೊಲಿಸುವದನ್ನು ಕಾಣಬಹುದು, ಆದರೆ ಅವರಲ್ಲಿ ಯಾರೂ ಕೇಳಲು ಸಿದ್ಧರಿಲ್ಲ.
ಈ ವಿಡಿಯೋವನ್ನು ಒಂದು ದಿನದ ಹಿಂದೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡ ನಂತರ, ಕ್ಲಿಪ್ 8.1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಹೆಚ್ಚುವರಿಯಾಗಿ, ವಿಡಿಯೊ 9,2000 ಲೈಕ್‌ಗಳನ್ನು ಸ್ವೀಕರಿಸಿದೆ.












Click it and Unblock the Notifications