Get Updates
Get notified of breaking news, exclusive insights, and must-see stories!

ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ, ಸೆಪ್ಟೆಂಬರ್ ತಿಂಗಳಲ್ಲೇ ಸಂಬಳ ಏರಿಕೆ

ನವದೆಹಲಿ, ಆಗಸ್ಟ್ 23: ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿರುವ ಸುದ್ದಿ ತಿಳಿದಿರಬಹುದು. ಇದರ ಜೊತೆಯಲ್ಲಿ ಸಂಬಳ ಕೂಡಾ ಏರಿಕೆಯಾಗುವ ಸುದ್ದಿ ಬಂದಿದೆ. ಸರ್ಕಾರಿ ನೌಕರರಿಗೆ ಶೇ 4ರಷ್ಟು ಡಿಎ ಹೆಚ್ಚಳಕ್ಕೆ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಲಾಗಿದ್ದು, ಸದ್ಯದ ಮಾಹಿತಿಯಂತೆ ಡಿಎ ಶೇ 17ರಿಂದ ಶೇ 28ಕ್ಕೇರಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಂಬಳ ಹಾಗೂ ಡಿಎ ಎರಡೆರಡು ಧಮಾಕ ಸರ್ಕಾರಿ ನೌಕರರಿಗೆ ಕಾದಿದೆ.

ಕೊರೊನಾವೈರಸ್ ಸಾಂಕ್ರಾಮಿಕದ ಕಾಲದಲ್ಲಿ ಕಳೆದ ಎರಡು ವರ್ಷಗಳಿಂದ ಡಿಎ ಹೆಚ್ಚಳ ಮಾಡಲಾಗಿರಲಿಲ್ಲ. ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಉದ್ಭವಿಸಿದ ಅಸಾಧಾರಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಹೆಚ್ಚುವರಿ ಕಂತುಗಳ ತುಟ್ಟಿ ಭತ್ಯೆ [ಡಿಎ] ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು [ಡಿಆರ್] 01.01.2020, 01.07.2020 ಮತ್ತು 01.01.2021, ಸ್ಥಗಿತಗೊಳಿಸಲಾಗಿತ್ತು.

ಸದ್ಯದ ಲೆಕ್ಕಾಚಾರದಂತೆ ಜನವರಿ 1 (4%), ಜುಲೈ 1 2020(3%) ಹಾಗೂ ಜನವರಿ 1, 2021 (4%) ಗೆ ಮೂರು ಬಾರಿ ಏರಿಕೆಯಾಗಿ ಶೇ 25ಕ್ಕೇರಿದೆ. ಸೆಪ್ಟೆಂಬರ್ 1, 2021ಕ್ಕೆ ಪರಿಷ್ಕರಣೆಗೊಳ್ಳಲಿದೆ. ಆದರೆ, 18 ತಿಂಗಳ ಬಾಕಿ ಮೊತ್ತ ಸಿಗುವುದಿಲ್ಲ. ಕೇಂದ್ರ ಬೊಕ್ಕಸಕ್ಕೆ 12,150 ಕೋಟಿ ರು ಹೆಚ್ಚುವರಿ ಹೊರೆ ಬೀಳಲಿದೆ. ಡಿಎ ಹೆಚ್ಚಳದಿಂದಾಗಿ 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 65.26 ಲಕ್ಷ ಪಿಂಚಣಿದಾರರಿಗೆ ನೆರವು ಲಭಿಸಲಿದೆ.

 ಕೆಲಸದ ಅವಧಿ, ಗೃಹಭತ್ಯೆ

ಕೆಲಸದ ಅವಧಿ, ಗೃಹಭತ್ಯೆ

ವೇತನ ಸಂಹಿತೆಯ ಕರಡು ಪ್ರತಿಯಂತೆ ಉದ್ಯೋಗಿಗಳು ದಿನಕ್ಕೆ 9 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ವೇತನವನ್ನು ನಿರ್ಧರಿಸಲು ಮೂರು ಭೌಗೋಳಿಕ ವರ್ಗೀಕರಣಗಳನ್ನು ಸೂಚಿಸಲಾಗಿತ್ತು. ಗೃಹಭತ್ಯೆಯನ್ನು ನಗರಕ್ಕೆ ಅನುಗುಣವಾಗಿ ವಿಂಗಡಿಸುವುದರ ಬಗ್ಗೆ ಇನ್ನೂ ಯಾವುದೇ ಸೂಚನೆ ಇಲ್ಲಿ ತನಕ ಬಂದಿಲ್ಲ. ರೈಲ್ವೆ ಇಲಾಖೆಯಲ್ಲಿ ಮಾತ್ರ ಎರಡು ಪಾಳಿಯಲ್ಲಿ ಕೆಲಸ ಮಾಡಲು ಹೊಸ ಸಚಿವರು ಕೆಲವು ವಿಭಾಗಕ್ಕೆ ಅನ್ವಯವಾಗುವಂತೆ ಆದೇಶ ನೀಡಿದ್ದರು. ಇನ್ನು ವಾರದಲ್ಲಿ ಎರಡು ದಿನ ರಜೆ ಬದಲಿಗೆ ಮೂರು ದಿನ ರಜೆ ಅಥವಾ ವಾರಕ್ಕೆ 4 ದಿನಗಳು ಮಾತ್ರ ಕಾರ್ಯ ನಿರ್ವಹಿಸುವ ಬಗ್ಗೆ ಚಿಂತನೆ ನಡೆದಿತ್ತು. ಆದರೆ, ಇದು ಸದ್ಯಕ್ಕೆ ಕಾರ್ಯಸಾಧುವಲ್ಲ ಎಂದು ಕೈಬಿಡಲಾಗಿದೆ.

 ಗ್ರಾಹಕ ದರ ಸೂಚಿ

ಗ್ರಾಹಕ ದರ ಸೂಚಿ

ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. ಈ ಏರಿಕೆಯ ಅನುಕೂಲವನ್ನು 48.34 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.26 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ. ಡಿಸೆಂಬರ್ ತಿಂಗಳಿನ ಗ್ರಾಹಕ ದರ ಸೂಚಿ (consumer price index) ಶೇ4.59 ರಷ್ಟಾದರೆ, ತುಟ್ಟಿಭತ್ಯೆ ಪ್ರಮಾಣ ಕೂಡಾ ಶೇ 3ರ ಬದಲಿಗೆ ಶೇ 4ಕ್ಕಿಂತ ಅಧಿಕವಾಗುವ ನಿರೀಕ್ಷೆಯಿತ್ತು. ಆದರೆ, ಇದೆಲ್ಲವನ್ನು ಮೀರಿ ಮುಂದಿನ ಅವಧಿ ಜನವರಿ 2020ಕ್ಕೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಲಾಗುತ್ತದೆ. ಜುಲೈ 2021ಕ್ಕೆ ಹೊಂದಾಣಿಕೆ ರಹಿತ ಸಿಪಿಐ ಶೇ 5.4ರಷ್ಟಿದೆ

 3.7 ಫಿಟ್ಮೆಂಟ್ ಫಾರ್ಮುಲಾದ ಬೇಡಿಕೆ

3.7 ಫಿಟ್ಮೆಂಟ್ ಫಾರ್ಮುಲಾದ ಬೇಡಿಕೆ

ಕೇಂದ್ರದ ಕಾರ್ಮಿಕ ಸಚಿವಾಲಯದ ಆಂತರಿಕ ಸಮಿತಿಯು ಕಳೆದ ವರ್ಷ ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿಯಂತೆ, ಪ್ರಕಾರ ಕನಿಷ್ಠ ವೇತನ 375 ರೂ., ಕನಿಷ್ಠ ಮಾಸಿಕ ವೇತನ 9,750 ರೂ ಹಾಗೂ ನಗರ ಮೂಲದ ಕಾರ್ಮಿಕರಿಗೆ 1,430 ರೂ. ವಸತಿ ಭತ್ಯೆಯನ್ನು ನೀಡಬೇಕೆಂದು ಸೂಚಿಸಲಾಗಿದೆ. ಕನಿಷ್ಠ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆ ಇನ್ನೂ ಈಡೇರಿಲ್ಲ. ಕನಿಷ್ಠ ವೇತನ 21 ಸಾವಿರ ರು ನಿಂದ 26 ಸಾವಿರ ರು ತನಕ ಏರಿಕೆ ಮಾಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿದ್ದರೂ ಈ ಬಾರಿ ಬಜೆಟ್ ನಲ್ಲಿ ಘೋಷಣೆಯಾಗುವುದಿಲ್ಲ.

 ತುಟ್ಟಿಭತ್ಯೆ ಹೆಚ್ಚಳ ಮಾಡುವುದು ಹೇಗೆ?

ತುಟ್ಟಿಭತ್ಯೆ ಹೆಚ್ಚಳ ಮಾಡುವುದು ಹೇಗೆ?

ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.

ತುಟ್ಟಿಭತ್ಯೆ ಹೆಚ್ಚಳ ಮಾಡುವುದು ಹೇಗೆ? ಕೇಂದ್ರ ಸರ್ಕಾರಿ ನೌಕರರ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕಳೆದ 12 ತಿಂಗಳಿಗೆ 115.76/115.76‍‍X100. ಸಾರ್ವಜನಿಕ ವಲಯದ ಸಿಬ್ಬಂದಿ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕೊನೆ 3 ತಿಂಗಳಿಗೆ 126.33/126.33‍‍X100.

2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. ಅಂದಿನ ಇಂದಿನವರೆಗೂ(ಈಗ ದರ ಶೇ 28ಕ್ಕೇರಿದೆ) ಬೇಡಿಕೆ ಮುಂದಿಡಲಾಗುತ್ತಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ ಎಂದು ವಾದಿಸುತ್ತಿದ್ದಾರೆ.

 ಗೃಹಭತ್ಯೆ ಕೂಡಾ ಏರಿಕೆ

ಗೃಹಭತ್ಯೆ ಕೂಡಾ ಏರಿಕೆ

ಡಿಎ ಶೇ 25ಕ್ಕೆ ಹೆಚ್ಚಳವಾದರೆ ಗೃಹಭತ್ಯೆ (HRA) ಕೂಡಾ ಏರಿಕೆಯಾಗುತ್ತದೆ. ಸದ್ಯ HRA ಶೇ 27ಕ್ಕೇರಿಸಲಾಗಿದೆ ಎಂದು ಝೀ ನ್ಯೂಸ್ ವರದಿ ಮಾಡಿದೆ. ನಗರ ಶ್ರೇಣಿಕೃತ ಎಕ್ಸ್, ವೈ ಹಾಗೂ ಝಡ್ ಕೆಟಗೆರಿ ಅನ್ವಯ ಕ್ರಮವಾಗಿ ಎಕ್ಸ್ ವರ್ಗಕ್ಕೆ ಮೂಲ ವೇತನದ ಶೇ 27ರಷ್ಟು , ವೈ ವರ್ಗಕ್ಕೆ ಮೂಲ ವೇತನದ ಶೇ 18ರಷ್ಟು ಹಾಗೂ ಮೂಲ ಝಡ್ ವರ್ಗಕ್ಕೆ ಮೂಲ ವೇತನದ ಶೇ 9ರಷ್ಟು ಸಿಗಲಿದೆ. 5 ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯುಳ್ಳ ಪಟ್ಟಣವಾದರೆ ಝಡ್ ವರ್ಗದಿಂದ ವೈ ವರ್ಗಕ್ಕೆ ಬಡ್ತಿ ಹೊಂದಿದಂತೆ ಎಂದುಕೊಳ್ಳಬಹುದು.

ಕನಿಷ್ಠ ಗೃಹಭತ್ಯೆ ಮೂರು ಕೆಟಗೆರಿಗೆ 5,400 ರು, 3,600ರು ಹಾಗೂ 1,800 ರು ಇದೆ. ತುಟ್ಟಿ ಭತ್ಯೆ ಶೇ 50ಕ್ಕೂ ಅಧಿಕವಾದರೆ ಗೃಹಭತ್ಯೆಯನ್ನು ಕ್ರಮವಾಗಿ ಶೆ 30, ಶೇ 20 ಹಾಗೂ ಶೇ 10ಕ್ಕೆ ಇಳಿಸಲಾಗುತ್ತದೆ.

ಸಾರಾಂಶ: 7ನೇ ವೇತನ ಆಯೋಗದ ಅನ್ವಯ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ 18,000 ರು ಆಗಿದೆ. ಜೂನ್ 2021ರ ತನಕ ಶೇ 17ರಂತೆ ತುಟ್ಟಿಭತ್ಯೆ 3,060 ರು ಸಂದಾಯವಾಗಿದೆ. ಜುಲೈ 2021ರಿಂದ ಶೇ 28ರಂತೆ 5,040ರು ಲಭಿಸಿದೆ. ತಿಂಗಳ ಸಂಬಳದ ಜೊತೆಗೆ 1,980ರು ಅಧಿಕ ಮೊತ್ತ ಸೇರಿಸಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+