BMW Car: ಐಷಾರಾಮಿ ಬಿಎಂಡಬ್ಲೂ ಕಂಪನಿಯ ಹೊಸ ಕಾರು ಬಿಡುಗಡೆ-ವಿಶೇಷತೆ, ದರಗಳ ಮಾಹಿತಿ ತಿಳಿಯಿರಿ

BMW Car: ಜರ್ಮನಿಯ ಐಷಾರಾಮಿ ಬಿಎಂಡಬ್ಲ್ಯೂ ಕಾರು ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ತರುತ್ತಲೇ ಇರುತ್ತದೆ. ಇದೀಗ ಭಾರತದಲ್ಲಿ BMW ಫೇಸ್‌ಲಿಫ್ಟೆಡ್ M4 ಪ್ರತಿಸ್ಪರ್ಧಿಯಾಗಿ ಹೊಸದಾಗಿ ಎಕ್ಸ್‌ಡ್ರೈವ್ ಅನ್ನು ಬಿಡುಗಡೆ ಮಾಡಿದೆ. ಹಾಗಾದರೆ ಇದು ಏನೆಲ್ಲ ವಿಶೇಷತೆಗಳನ್ನು ಒಳಗೊಂಡಿದೆ ಹಾಗೂ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಂ4 ಕಾಂಪಿಟಿಷನ್ ಎಕ್ಸ್‌ಡ್ರೈವ್ (M4 Competition M xDrive) ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಕಾರು ಕಂಪ್ಲೀಟ್ ಬಿಲ್ಟ್-ಅಪ್ (ಸಿಬಿಯು) ಮಾದರಿಯಲ್ಲಿ ದೇಶದಲ್ಲಿ ಲಭ್ಯವಿದ್ದು, ಬಿಎಂಡಬ್ಲ್ಯು ಡೀಲರ್ ಶಿಪ್ ನೆಟ್‌ವರ್ಕ್‌​​ನಲ್ಲಿ ಮತ್ತು ಕಂಪನಿಯ ಆನ್‌ಲೈನ್ ಶಾಪ್ ವೆಬ್‌ಸೈಟ್‌​ ಮೂಲಕ ಬುಕ್ ಮಾಡಬಹುದು. ಈ ಎಕ್ಸ್‌ಡ್ರೈವ್ ಕಾರಿನ ಎಕ್ಸ್​ ಶೋ ರೂಮ್ ಬೆಲೆ 1,53,00,000 ರೂಪಾಯಿ ಆಗಿದೆ.

2024 BMW M4 competition xdrive launched in india know price details

ಈ ಕಾರು ಮೆಟಾಲಿಕ್ ಪೇಂಟ್​ವರ್ಕ್ ಮಾದರಿಯ ಸ್ಕೈ ಸ್ಕ್ರೇಪರ್ ಗ್ರೇ, ಪೋರ್ಟಿಮಾವೊ ಬ್ಲೂ, ಬ್ಲ್ಯಾಕ್ ಸಫೈರ್, ಸಾವೊ ಪಾಲೊ ಯೆಲ್ಲೋ, ಟೊರೊಂಟೊ ರೆಡ್, ಬ್ರೂಕ್ಲಿನ್ ಗ್ರೇ, ಐಲ್ ಆಫ್ ಮ್ಯಾನ್ ಗ್ರೀನ್, ಅವೆಂಚುರಿನ್ ರೆಡ್ ಮತ್ತು ಆಲ್ಪೈನ್ ವೈಟ್ ಬಣ್ಣಗಳಲ್ಲಿ ಹಾಗೂ ಮೆಟಾಲಿಕ್ ಟಾಂಜನೈಟ್ ಬ್ಲೂ ಮತ್ತು ಡ್ರಾವಿಟ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ.

ಹೊಸ ಕಾರಿನಲ್ಲಿ ಬಿಎಂಡಬ್ಲ್ಯು ಎಂ ಟ್ವಿನ್ ಪವರ್ ಟರ್ಬೊ S58 6 ಸಿಲಿಂಡರ್ ಇನ್-ಲೈನ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ 3.0-ಲೀಟರ್ ಸಾಮರ್ಥ್ಯದ ಎಂಜಿನ್ ಡೈನಾಮಿಕ್ ಪವರ್ ಡೆಲಿವರಿ ಮತ್ತು ಸಿಗ್ನೇಚರ್ ಎಂ ಸೌಂಡ್ ಅನ್ನು ಹೊಂದಿದೆ. ಇದನ್ನು ಇಂಟೆಲಿಜೆಂಟ್ ಫೋರ್-ವ್ಹೀಲ್ ಡ್ರೈವ್ ಎಂ ಎಕ್ಸ್‌ಡ್ರೈವ್‌ನೊಂದಿಗೆ ಸಂಯೋಜಿಸಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಇದರ ಇಂಜಿನ್‌ ಕೇವಲ 3.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗೋತ್ಕರ್ಷದೊಂದಿಗೆ 530 BH ಮತ್ತು 650 Nm (ನ್ಯೂಟನ್ ಮೀಟರ್) ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಸುರಕ್ಷತೆಗಾಗಿ ಹೊಸ ಬಿಎಂಡಬ್ಲ್ಯು ಕಾರಿನಲ್ಲಿ ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಹೆಡ್ ಮತ್ತು ಸೈಡ್ ಏರ್ ಬ್ಯಾಗ್‌ಗಳನ್ನು ಹಾಗೂ ಹಿಂಭಾಗದ ಸೀಟ್‌ಗಳಿಗೆ ಹೆಡ್ ಏರ್ ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಕೆ ಮಾಡಲಾಗಿದೆ.

ಜರ್ಮನಿಯ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಗುಣಮಟ್ಟದ ಸ್ಪೋರ್ಟ್ಸ್ ಸೆಡಾನ್‌ಗಳು ಮತ್ತು ಮೋಟಾರ್ ಸೈಕಲ್‌ಗಳಿಗೆ ಹೆಸರುವಾಸಿ ಆಗಿದ್ದು, ವಿಶ್ವದ ಪ್ರಮುಖ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಕಂಪನಿಯ ಪ್ರಧಾನ ಕಚೇರಿ ಮ್ಯೂನಿಚ್‌ನಲ್ಲಿದೆ.

BMW XDrive ವಿಶೇಷತೆ: ಜರ್ಮನ್ ಕಾರು ತಯಾರಕರು ಈ ಕಾರಿನ ವಿನ್ಯಾಸವನ್ನು ಮಾಡಿದ್ದಾರೆ. ಇದು ಈಗ ಹೊಸ DRLಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಈ ಹಿಂದೆ M4 CSLನೊಂದಿಗೆ ಹೋಲಿಕೆ ಮಾಡಿ ನೋಡಿದರೆ, ಇದು ಲೇಸರ್ ಲೈಟ್ ಗೈಡ್‌ಗಳನ್ನು ಒಳಗೊಂಡಿರುವ ಹೊಸ ಲ್ಯಾಂಪ್‌ಗಳನ್ನು ಒಳಗೊಂಡಿದ್ದು, ಇನ್ನು ಇದರಲ್ಲಿನ ಹೊಸ ವಿನ್ಯಾಸದ BMW ಲೋಗೊವು ಗ್ರಾಹಕರನ್ನಯ ತನ್ನೆಡೆಗೆ ಸೆಳೆಯುತ್ತಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+