ನಕಲಿ‌ ಚಿನ್ನ, ಅಸಲಿ ಸೀಲು: ಹೀಗೊಂದು ಗೋಲ್ಡ್ ವಂಚನೆ ಬಯಲಿಗೆ

ಬೆಂಗಳೂರು, ಡಿಸೆಂಬರ್ 05: ಚಿನ್ನದ ಶುದ್ಧತೆ ಬಗ್ಗೆ ನಕಲಿ ಸೀಲು ಮಾಡಿ ಕಳಪೆ ಚಿನ್ನವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಚಿನ್ನವನ್ನು ಖರಗಿಸುತ್ತಿದ್ದ ಆರೋಪಿಗಳು, ಅದಕ್ಕೆ ನಕಲಿ ಸೀಲ್ ಹಾಕಿ ಅಸಲಿ ಚಿನ್ನ ಎಂದು ನಂಬಿಸಿ ಕಳಪೆ ಗುಣಮಟ್ಟದ ಚಿನ್ನವನ್ನು ಕರಗಿಸಿ ಅದಕ್ಕೆ ನಕಲಿ ಸೀಲ್ ಹಾಕಿ ಮರಾಟ ಮಾಡುತ್ತಿದ್ದ ನಾಲ್ವರು ಈಗ ಜೈಲು ಪಾಲಾಗಿದ್ದಾರೆ.

ನಿಖಿಲ್, ಗೌರವ್, ಸುಮೀರ್ ಶೇಕ್‌, ಗೌರವ್ ಬಿನ್ ಫಡ್ಮೀಸ್ ಬಂಧಿತ ಆರೋಪಿಗಳು. ಇವರು ನಗರ್ತ ಪೇಟೆಯ ಅಂಗಡಿಯೊಂದರಲ್ಲಿ ನಕಲಿ ಸೀಲ್ ಹೊಡೆದಿದ್ದ ಕಳಪೆ ಚಿನ್ನ ಮಾರಾಟ ಮಾಡಲು ಯತ್ನಿಸಿದ್ದರು. ಅಂಗಡಿ ಮಾಲೀಕರು ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಅವರ ಬಳಿ ನಕಲಿ ಸೀಲು ಹಾಕಿ ಕಳಫೆ ಚಿನ್ನ ಅಸಲಿ ಚಿನ್ನವನ್ನಾಗಿ ನಂಬಿಸಿ ಮಾರಾಟ ಮಾಡುತ್ತಿದ್ದ ಸಂಗತಿ ಹೊರ ಬಂದಿದೆ.

Fake Seal Gold Deal : Four Arrested by CCB Police

ಯಾವುದೇ ಪರವಾನಗಿ ಪಡೆಯದೇ ಆರೋಪಿಗಳು ಚಿನ್ನವನ್ನು ಕರಗಿಸಿ ಬಿಸ್ಕೆಟ್ ಗಳನ್ನು ತಯಾರಿಸುತ್ತಿದ್ದರು. ಚಿನ್ನದ ಶುದ್ಧತೆಯ ಬಗ್ಗೆ ನಕಲಿ ಸೀಲು ಹಾಕುತ್ತಿದ್ದರು. ಬಂಧಿತರಿಂದ ಒಂದೂವರೆ ಕೆ.ಜಿ ಚಿನ್ನ ಮತ್ತು 98 ಸಾವಿರ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Fake Seal Gold Deal : Four Arrested by CCB Police

ಅಂತೂ ಕಳಪೆ ಚಿನ್ನಕ್ಕೆ ಶುದ್ಧ ಚಿನ್ನದ ಸೀಲು ಹೊಡೆದು ದುಬಾರಿ ಬೆಲೆಗೆ ಚಿನ್ನ ಮಾರಾಟ ಮಾಡಿ ದುಡ್ಡು ಮಡಲು ಹೋಗಿದ್ದಾರೆ. ಆದರೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ಕು ಆರೋಪಿಗಳನ್ನು ಬಂಧಿಸಿದ್ದು ಒಂದೂವರೆ ಕೆ.ಜಿ ಚಿನ್ನ ವಶಪಡಿಸಿಕೊಂಡಿದ್ದಾರೆ .ಚಿನ್ನದ ಮೂಲದ ಬಗ್ಗೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+