Fact Check: ಜಮಾತ್ ಇ ಅಹ್ಲೆಹದೀತ್ ಮುಖಂಡನ ಹತ್ಯೆ, ಆರೋಪಿಗಳು ಖುಲಾಸೆ?
ನವದೆಹಲಿ, ಡಿಸೆಂಬರ್ 14: ಜಮ್ಮು ಕಾಶ್ಮೀರದಲ್ಲಿ ನಡೆದ ಜಮಾತ್ ಇ ಅಹ್ಲಿಹದಾದೀತ್ ಮುಖ್ಯಸ್ಥ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಗರ ರಾಷ್ಟ್ರೀಯ ತನಿಖಾ ಸಂಸ್ಥೆಯು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಆದರೆ ಎನ್‌ಐಎ ಈ ಕುರಿತು ಸ್ಪಷ್ಟನೆ ನೀಡಿದ್ದು, ಆರೋಪಿಗಳನ್ನು ಖುಲಾಸೆ ಮಾಡಿಲ್ಲ ಯಾರೋ ಇಂತಹ ವದಂತಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಹೇಳಿದೆ.
ಜನವರಿಯಲ್ಲಿ ಭಾರತದ ಎಲ್ಲಾ ಗೊತ್ತುಪಡಿಸಿದ ಎನ್‌ಐಎ ವಿಶೇಷ ನ್ಯಾಯಾಲಯಗಳು ಇಲ್ಲಿಯವರೆಗೆ 11 ಪ್ರಕರಣಗಳಲ್ಲಿ ತೀರ್ಪು ಪ್ರಕಟಿಸಿವೆ. ಮತ್ತು ಎನ್‌ಐಎ ಶೇ.100ರಷ್ಟು ಅಪರಾಧ ನಿರ್ಣಯವನ್ನು ಪಡೆಯಲು ಸಮರ್ಥವಾಗಿದೆ.

ವದಂತಿಗಳು ಮಾಹಿತಿಯನ್ನು ತಪ್ಪುದಾರಿಗೆಳೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯಗಳು ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ನಡೆಸುತ್ತದೆ.
ಜಮ್ಮು ಕಾಶ್ಮೀರದಲ್ಲಿ ಗೃಹ ಸಚಿವಾಲಯ ಸ್ಥಾಪಿಸಿರುವ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಪ್ರತಿಯೊಂದು ಪ್ರಕರಣದ ವಿಚಾರಣೆ ನಡೆಸಲಾಗುತ್ತದೆ. ಹಾಗೆಯೇ ಆರೋಪಿಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ.
ಜಮ್ಮು ಕಾಶ್ಮೀರದ ಎನ್‌ಐಎ ಐವರು ಆರೋಪಿಗಳನ್ನು ಖುಲಾಸೆಗೊಳಿಸಿದೆ ಎಂದು ಎಲ್ಲೆಡೆ ಸುದ್ದಿ ಹರಿದಾಡಿತ್ತು. ಇದೆಲ್ಲವೂ ಸುಳ್ಳು ಎಂದು ಎನ್‌ಐಎ ಸ್ಪಷ್ಟಪಡಿಸಿದೆ.

Fact Check
ಕ್ಲೇಮು
ಎನ್‌ಐಎ ಜಮಾತ್ ಇ ಅಹ್ಲಿಹದೀತ್ ಮುಖಂಡನ ಹತ್ಯೆ ಮಾಡಿರುವ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ.
ಪರಿಸಮಾಪ್ತಿ
ಎನ್‌ಐಎಯು ಜಮಾತ್ ಇ ಅಹ್ಲಿಹದೀತ್ ಮುಖಂಡನನ್ನು ಹತ್ಯೆ ಮಾಡಿದರವನ್ನು ಖುಲಾಸೆಗೊಳಿಸಿಲ್ಲ ಇದು ಸತ್ಯಕ್ಕೆ ದೂರವಾದದ್ದು.












Click it and Unblock the Notifications