Fact Check: ಯುಜಿಸಿ ನೆಟ್ ಪರೀಕ್ಷೆಯಲ್ಲಿ ನೆಗೆಟಿವ್ ಅಂಕ ಇರುತ್ತದೆಯೇ?
ನವದೆಹಲಿ, ಸೆಪ್ಟೆಂಬರ್ 24: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ಯುಜಿಸಿ ಎನ್‌ಇಟಿ ಪರೀಕ್ಷೆ 2020 ನೆಗೆಟಿವ್ ಮಾರ್ಕ್ಸ್‌ಗಳನ್ನು ಒಳಗೊಂಡಿರುತ್ತದೆ ಎಂದು ವೆಬ್‌ಸೈಟ್ ಒಂದು ಪ್ರಕಟಿಸಿದೆ.
ಈ ವರ್ಷದ ಯುಜಿಸಿ ನೆಟ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ನೀಡುವ ಪ್ರತಿ ತಪ್ಪು ಉತ್ತರಕ್ಕೆ ಅಂಕಗಳನ್ನು ನೆಗೆಟಿವ್ ಮಾಡಲಾಗುತ್ತದೆ. ಈ ಸಂಬಂಧ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ಲೇಖನದಲ್ಲಿ ಹೇಳಲಾಗಿದೆ. ಆದರೆ ಈ ವರದಿ ಸತ್ಯವಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಹೇಳಿಕೆ ಸುಳ್ಳಾಗಿದ್ದು, ವರದಿಯಲ್ಲಿ ತಿಳಿಸಿರುವಂತೆ ಯುಜಿಸಿ ನೆಟ್ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ನೆಗೆಟಿವ್ ಅಂಕಗಳು ಇರುವುದಿಲ್ಲ. ಈ ರೀತಿಯ ಸುಳ್ಳು ಮಾಹಿತಿಗಳನ್ನು ನಂಬಬೇಡಿ ಎಂದು ಪಿಐಬಿ ಮನವಿ ಮಾಡಿದೆ.

ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಎರಡೂ ಪತ್ರಿಕೆಗಳು ಆಬ್ಜೆಕ್ಟಿವ್ ಮಾದರಿ, ಬಹು ಆಯ್ಕೆಯ ಉತ್ತರದ ಪ್ರಶ್ನೆಗಳನ್ನು ಹೊಂದಿರುತ್ತದೆ. ಮೊದಲ ಪತ್ರಿಕೆಯಲ್ಲಿನ ಪ್ರಶ್ನೆಗಳು ಅಭ್ಯರ್ಥಿಯ ಶಿಕ್ಷಣ ಅಥವಾ ಸಂಶೋಧನಾ ಅರ್ಹತೆಯನ್ನು ಮೌಲ್ಯಮಾಪನ ಮಾಡುತ್ತದೆ. ಎರಡನೆಯ ಪತ್ರಿಕೆಯು ಅಭ್ಯರ್ಥಿಯು ಆಯ್ಕೆ ಮಾಡಿಕೊಂಡ ವಿಷಯದ ಆಧಾರದಲ್ಲಿ ಇರಲಿದ್ದು, ಅದಕ್ಕೆ ಪೂರಕವಾದ ಅಭ್ಯರ್ಥಿಗಳ ಜ್ಞಾನವನ್ನು ನಿರ್ಣಯಿಸಲಿದೆ. ಪ್ರತಿ ಸರಿಯಾದ ಉತ್ತರಕ್ಕೆ ಎರಡು ಅಂಕ ಇರಲಿದೆ.

Fact Check
ಕ್ಲೇಮು
ಎನ್‌ಟಿಎ ಯುಜಿಸಿ ನೆಟ್ ಪರೀಕ್ಷೆಯಲ್ಲಿ ನೆಗೆಟಿವ್ ಅಂಕಗಳು ಇರಲಿವೆ.
ಪರಿಸಮಾಪ್ತಿ
ಎನ್‌ಟಿಎ ಯುಜಿಸಿ ನೆಟ್ ಪರೀಕ್ಷೆಯಲ್ಲಿ ನೆಗೆಟಿವ್ ಅಂಕಗಳು ಇರುವುದಿಲ್ಲ.












Click it and Unblock the Notifications