Fact Check: ರೈತರ ಪ್ರತಿಭಟನೆಗೆ ಕಮಲಾ ಹ್ಯಾರಿಸ್ ಬೆಂಬಲ
ನವದೆಹಲಿ, ಡಿಸೆಂಬರ್ 3: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಸೇರಿದಂತೆ ಅನೇಕ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಟ್ರುಡೋ ಅವರ ಹೇಳಿಕೆ ಅನಪೇಕ್ಷಿತ ಮತ್ತು ತಪ್ಪು ಮಾಹಿತಿಯಿಂದ ಕೂಡಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಭಾರತದಲ್ಲಿನ ರೈತರ ಪ್ರತಿಭಟನೆಗೆ ಬೆಂಬಲ ನೀಡುವ ವಿಶ್ವ ನಾಯಕರ ಜತೆಗೆ ಸೇರಿಕೊಂಡಿದ್ದಾರೆ ಎಂಬ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಮಲಾ ಹ್ಯಾರಿಸ್ ಮಾಡಿದ್ದಾರೆ ಎನ್ನಲಾದ ಟ್ವೀಟ್‌ನ ಸ್ಕ್ರೀನ್ ಶಾಟ್ ವೈರಲ್ ಆಗಿದೆ. 'ತಮ್ಮ ಜೀವನೋಪಾಯಕ್ಕೆ ಮಾರಕವಾದ ಹೊಸ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭಾರತ ಸರ್ಕಾರ ಹತ್ತಿಕ್ಕುತ್ತಿರುವುದನ್ನು ಕಂಡು ನಮಗೆ ಆಘಾತವಾಗಿದೆ. ಜಲಫಿರಂಗಿ ಮತ್ತು ಅಶ್ರುವಾಯುಗಳನ್ನು ಬಳಸುವ ಬದಲು ಭಾರತ ಸರ್ಕಾರವು ರೈತರೊಂದಿಗೆ ಮುಕ್ತ ಮಾತುಕತೆಗೆ ತೊಡಗಬೇಕಾದ ಅಗತ್ಯವಿದೆ' ಎಂದು ಅದರಲ್ಲಿ ಹೇಳಲಾಗಿದೆ.
ಈ ಟ್ವೀಟ್‌ನ ಸ್ಕ್ರೀನ್‌ಶಾಟ್ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಬಳಕೆದಾರ ಅಕಾಲ್ ಸಹಾಯ್ ಟಿವಿ ಎಂಬ ಖಾತೆ, 'ರೈತರ ಪ್ರತಿಭಟನೆಗೆ ಅಮೆರಿಕದ ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬೆಂಬಲ ನೀಡಿದ್ದಾರೆ. ರೈತರನ್ನು ಬೆಂಬಲಿಸುವ ಜಸ್ಟಿನ್ ಟ್ರುಡೋ ಅವರ ಹೇಳಿಕೆಯಿಂದ ಅಸಮಾಧಾನಗೊಂಡಿದ್ದವರ ಆಲೋಚನೆ ಈಗ ಏನು?' ಎಂದು ಪ್ರಶ್ನಿಸಿತ್ತು. ಮುಂದೆ ಓದಿ.

ಜ್ಯಾಕ್ ಹ್ಯಾರಿಸ್ ಟ್ವೀಟ್
ಆದರೆ ಈ ರೀತಿ ಕಮಲಾ ಹ್ಯಾರಿಸ್ ಅವರು ಟ್ವೀಟ್ ಮಾಡಿಲ್ಲ. ವಾಸ್ತವವಾಗಿ ಕೆನಡಾದ ಸಂಸದ ಜ್ಯಾಕ್ ಹ್ಯಾರಿಸ್ ಅವರು ಈ ಟ್ವೀಟ್ ಮಾಡಿದ್ದರು. ಆದರೆ ಯಾರೋ ಆ ಟ್ವೀಟ್ ಕಮಲಾ ಹ್ಯಾರಿಸ್ ಮಾಡಿದ್ದಂತೆ ತಿದ್ದಿದ್ದರು. ಇದನ್ನು ನಂಬಿದ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಹಂಚಿಕೊಂಡಿದ್ದಾರೆ.

ಕಮಲಾ ಹ್ಯಾರಿಸ್ ಹೇಳಿಕೆ ನೀಡಿಲ್ಲ
ಕಮಲಾ ಹ್ಯಾರಿಸ್ ಅವರ ಟ್ವಿಟ್ಟರ್ ಖಾತೆಯಲ್ಲಿ ಭಾರತದಲ್ಲಿನ ರೈತರ ಪ್ರತಿಭಟನೆಗಳ ಬಗ್ಗೆ ಯಾವುದೇ ಟ್ವೀಟ್ ಕಂಡುಬಂದಿಲ್ಲ. ಹಾಗೆಯೇ ಅವರು ಪ್ರತಿಭಟನೆ ಕುರಿತಾಗಿ ಯಾವುದೇ ಹೇಳಿಕೆ ನೀಡಿರುವ ಕುರಿತು ವಿಶ್ವಾಸನೀಯ ಮಾಧ್ಯಮಗಳಲ್ಲಿ ವರದಿಯಾಗಿಲ್ಲ.

ಅದೇ ದಿನ, ಅದೇ ಸಮಯ
ವೈರಲ್ ಆಗಿರುವ ಕಮಲಾ ಹ್ಯಾರಿಸ್ ಟ್ವೀಟ್‌ನಲ್ಲಿ ದಿನವನ್ನು ನವೆಂಬರ್ 28 ಮತ್ತು ಸಮಯವನ್ನು ರಾತ್ರಿ 12.25 ಎಂದು ತೋರಿಸಲಾಗಿದೆ. ಇದೇ ವೇಳೆಗೆ ಸರಿಯಾಗಿ ಜ್ಯಾಕ್ ಹ್ಯಾರಿಸ್ ಟ್ವೀಟ್ ಮಾಡಿದ್ದರು. ಕಮಲಾ ಹ್ಯಾರಿಸ್ ಅವರು ಜ್ಯಾಕ್ ಹ್ಯಾರಿಸ್ ಅವರ ಟ್ವೀಟ್ ಅನ್ನು ನಕಲು ಮಾಡಿ ಅದೇ ಸಮಯದಲ್ಲಿ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿರಲು ಸಾಧ್ಯವಿಲ್ಲ. ಹೀಗಾಗಿ ಇದು ಜ್ಯಾಕ್ ಹ್ಯಾರಿಸ್ ಮಾಡಿದ ಟ್ವೀಟ್‌ನ ನಕಲು ಎನ್ನುವುದು ಖಚಿತವಾಗಿದೆ.

ರೈತರ ಬಗ್ಗೆ ಕಮಲಾ ಟ್ವೀಟ್
ನವೆಂಬರ್ 27ರಂದು ಟ್ವೀಟ್ ಮಾಡಿದ್ದ ಕಮಲಾ ಹ್ಯಾರಿಸ್, 'ನಮ್ಮ ದೇಶದಾದ್ಯಂತ ಲಕ್ಷಾಂತರ ಜನರ ಮೇಜಿನ ಮೇಲೆ ಆಹಾರವನ್ನು ಇರಿಸಲು ಕಠಿಣ ಪರಿಶ್ರಮಪಟ್ಟ ನಮ್ಮ ಕೃಷಿ ಕೆಲಸಗಾರರು ಮತ್ತು ಆಹಾರ ಬ್ಯಾಂಕ್ ಸಿಬ್ಬಂದಿಗೆ ಕೃತಜ್ಞಳಾಗಿದ್ದೇನೆ' ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತದ ಅನೇಕ ಟ್ವಿಟ್ಟರ್ ಬಳಕೆದಾರರು ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳ ಫೋಟೊಗಳನ್ನು ಹಂಚಿಕೊಂಡಿದ್ದರು.

Fact Check
ಕ್ಲೇಮು
ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಸರ್ಕಾರ ನಿಭಾಯಿಸಿದ ರೀತಿಯನ್ನು ಕಮಲಾ ಹ್ಯಾರಿಸ್ ಖಂಡಿಸಿದ್ದಾರೆ.
ಪರಿಸಮಾಪ್ತಿ
ಈ ಟ್ವೀಟ್ ಕೆನಡಾ ಸಂಸದ ಜ್ಯಾಕ್ ಹ್ಯಾರಿಸ್ ಅವರದ್ದಾಗಿದ್ದು, ಕಮಲಾ ಹ್ಯಾರಿಸ್ ಅವರ ಹೆಸರಿನಲ್ಲಿ ಕಾಣುವಂತೆ ತಿದ್ದಲಾಗಿದೆ.
Rating
-
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ











Click it and Unblock the Notifications