ಪ್ರೇಕ್ಷಕರಿಗೆ ಕ್ಷಮಾಪಣಾ ಪತ್ರ ಬರೆದ ಜೀ ಕನ್ನಡ ಚಾನಲ್, ಕಾರಣವೇನು ?
Zee Kannada: ಕನ್ನಡ ಪ್ರಮುಖ ವಾಹಿಗಳಲ್ಲಿ ಒಂದಾಗಿರುವ ಜೀ ಕನ್ನಡ ಚಾನಲ್ ಪ್ರೇಕ್ಷಕರಿಗೆ ವಿಭಿನ್ನವಾದ ಕ್ಷಮಾಪಣಾ ಪತ್ರ ಬರೆದಿದೆ. ಈ ಕ್ಷಮಾಪಣಾ ಪತ್ರವು ಇದೀಗ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಈ ರೀತಿ ಚಾನೆಲ್‌ವೊಂದು ಪ್ರೇಕ್ಷಕರ ಬಳಿ ಭಿನ್ನ ಮಾದರಿಯಲ್ಲಿ ಕ್ಷಮಾಪಣಾ ಪತ್ರವನ್ನು ಬರೆದಿರುವುದಾದರೂ ಯಾಕೆ, ಏನಿದೆ ಆ ಪತ್ರದಲ್ಲಿ ಅಂತ ನೋಡೋಣ.
ಕಿರುತೆರೆಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಲ್ಲೇ ಹೊಸ ಮಾದರಿಯ ಕ್ರಿಯೇಟಿವ್ ಐಡಿಯಾಗಳಿಗೆ ಸಾಕ್ಷಿ ಆಗಿರುವ ಜೀ ಕನ್ನಡ ಚಾನಲ್ ಇದೀಗ ಪ್ರೇಕ್ಷಕರ ಬಳಿ ಕ್ಷಮಾಪಣೆ ಕೇಳಿದೆ. ಆದರೆ ಈ ಕ್ಷಮಾಪಣೆ ಯಾವುದೋ ತಪ್ಪು ಅಥವಾ ಎಡವಟ್ಟಿಗಲ್ಲ ಎನ್ನುವುದು ವಿಶೇಷ. ಕ್ಷಮಾಪಣಾ ಪತ್ರದ ಹೆಸರಿನಲ್ಲಿ ಚಾನೆಲ್ ತನ್ನ ಸೃಜನಶೀಲತೆಯನ್ನು ಪ್ರದರ್ಶಿಸಿದೆ.

ಜೀ ಕನ್ನಡ ಚಾನಲ್ ಕ್ಷಮಾಪಣಾ ಪತ್ರ
ವೈವಿಧ್ಯಮಯ, ವಿಶೇಷ, ವಿಭಿನ್ನ ಕಾರ್ಯಕ್ರಮಗಳ ಮೂಲಕ ಮನರಂಜನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಿಮ್ಮ ಹೆಮ್ಮೆಯ ಜೀ ಕನ್ನಡ ಚಾನಲ್ ನಮ್ಮೆಲ್ಲರ ಮನಗೆದ್ದಿರುವುದು ಗೊತ್ತೇ ಇದೆ. ನಿಮ್ಮ ಪ್ರಶಂಸೆಯ ಜೊತೆಗೆ ಜೀ ಕನ್ನಡ ಚಾನಲ್ ಶುರುವಾದ ನಂತರ ಮನೋರಂಜನೆಯಲ್ಲೇ ಮುಳುಗುವ ನಾವು ರಿಮೋಟ್‌ನೇ ಮರೆತು ಬಿಡುತ್ತೀವಿ, ಚಾನಲ್ ಬದಲಾಯಿಸುವುದೇ ಇಲ್ಲ ಎನ್ನುವ ಪ್ರೀತಿಯ ಆರೋಪ ಕೇಳಿಬಂದಿದೆ.
ನಮ್ಮ ಅದ್ಭುತ ಮನರಂಜನಾ ಕಾರ್ಯಕ್ರಮಗಳ ಮೂಲಕ ನಿಮಗೆ ಬೇರೆ ಚಾನಲ್ ಗಳನ್ನು ಮರೆಯುವಂತೆ ಮಾಡಿದ್ದಕ್ಕಾಗಿ ದಯವಿಟ್ಟು ಕ್ಷಮೆಯಿರಲಿ. ನಿಮ್ಮ ಕ್ಷಮೆಯ ಜೊತೆಜೊತೆಗೇ ನಿಮ್ಮ ಪ್ರೀತಿಯ ಆರೋಪವನ್ನು ನಾವು ಇನ್ನೂ ಹೆಚ್ಚು ಮಾಡುತ್ತೇವೆ ಎನ್ನುವ ಭರವಸೆ ನೀಡುತ್ತೇವೆ. ಧನ್ಯವಾದಗಳು.
ಇಂತಿ ನಿಮ್ಮ ಜೀ ಕನ್ನಡ
ಈ ರೀತಿಯ ಪತ್ರವೊಂದನ್ನು ಜೀ ಕನ್ನಡ ಚಾನಲ್ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ಈ ಪತ್ರಕ್ಕೆ ಇದೀಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಲವು ಕನ್ನಡಿಗರು ಈ ಹೊಸ ಮಾದರಿಯ ಸೃಜನಶೀಲತೆಗೆ ಭೇಷ್ ಎಂದಿದ್ದಾರೆ.












Click it and Unblock the Notifications