Yuva Rajkumar: ತಾತ ಹಾಗೂ ಚಿಕ್ಕಪ್ಪನ ನೆಚ್ಚಿನ ತಾಣಕ್ಕೆ ಯುವ ಭೇಟಿ-ಫೋಟೋಗೆ ಮುಗಿಬಿದ್ದ ಅಭಿಮಾನಿಗಳು
ಚಾಮರಾಜನಗರ, ಮಾರ್ಚ್, 02: ಡಾ.ರಾಜ್ ಕುಮಾರ್ ಕುಟುಂಬದ ಕುಡಿ ಯುವ ರಾಜ್ ಕುಮಾರ್ ಅವರು ಇಂದು (ಮಾರ್ಚ್ 02) ಗಾಜನೂರಿನ ಮನೆಗೆ ಭೇಟಿ ಕೊಟ್ಟು ತಾತಾ ಹಾಗೂ ಅಪ್ಪು ಅವರ ನೆಚ್ಚಿನ ತಾಣ ಆಲದಮರದ ತೋಪಿಗೆ ತೆರಳಿ ವಿಶ್ರಮಿಸಿದ್ದಾರೆ.
ಇನ್ನು, ನೆಚ್ಚಿನ ನಟನನ್ನು ಕಾಣಲು ಅಭಿಮಾನಿಗಳು ಮುಗಿಬಿದ್ದಿದ್ದು, ಸೆಲ್ಪಿ ತೆಗೆದುಕೊಳ್ಳಲು ತಾಮುಂದು-ನಾಮುಂದು ಎಂಬಂತೆ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಗಾಜನೂರಿನ ಮನೆ ಸಮೀಪ ಇರುವ ಆಲದಮರ ತೋಪು ಅಣ್ಣಾವ್ರ ನೆಚ್ಚಿನ ತಾಣವಾಗಿತ್ತು. ತವರಿಗೆ ಬಂದಾಗಲೆಲ್ಲಾ ಹೆಚ್ಚಿನ ಸಮಯವನ್ನು ಆಲದಮರದ ಬಳಿ ಕಳೆಯುತ್ತಿದ್ದರು. ಇನ್ನು, ಪುನೀತ್ ರಾಜ್‍ಕುಮಾರ್ ಕೂಡ ಸಾಕಷ್ಟು ಬಾರಿ ಆಲದಮರದ ಬಳಿ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು.

"ಯುವ" ಸಿನಿಮಾದ ಮೊದಲ ಹಾಡು ಕೆಲವೇ ಕ್ಷಣಗಳಲ್ಲಿ ಬಿಡುಗಡೆ
ಯುವ ರಾಜ್‍ಕುಮಾರ್ ಹಾಗೂ "ಸಿಂಗಾರ ಸಿರಿ" ಸಪ್ತಮಿ ಗೌಡ ಜೋಡಿಯಾಗಿ ನಟನೆ ಮಾಡಿರುವ ಬಹುನಿರೀಕ್ಷಿತ "ಯುವ" ಸಿನಿಮಾದ ಮೊದಲ ಹಾಡಿನ ಬಿಡುಗಡೆ ಇನ್ನೂ ಕೆಲವೇ ಕ್ಷಣಗಳಲ್ಲಿ ಚಾಮರಾಜನಗರದಲ್ಲಿ ಆಗಲಿದೆ.
"ಯುವ" ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದು, ಮೊದಲ ಹಾಡಿನ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಸಂತೋಷ್ ಆನಂದ್ರಾಮ್ ಅವರು ನಿರ್ದೇಶನ ಮಾಡಿದ್ದಾರೆ. ಅವರ ಸಿನಿಮಾಗಳಲ್ಲಿ ಹಾಡಿಗೆ ಬಹಳ ಮಹತ್ವ ನೀಡಲಾಗಿರುತ್ತದೆ. ಹಾಗೆಯೇ ಇದೀಗ ಇಂದು (ಮಾರ್ಚ್ 02) 'ಯುವ' ಚಿತ್ರದ ಮೊದಲ ಹಾಡು ಚಾಮರಾಜನಗರದಲ್ಲಿ ಬಿಡುಗಡೆಯಾಗಲಿದೆ.












Click it and Unblock the Notifications