Yuva: ಯುವ ರಾಜಕುಮಾರ್ ಹೊಸ ಸಿನಿಮಾ ಅಪ್ಡೇಟ್, ನಾಲ್ವರ ಕಾಂಬಿನೇಷನ್‌ನಲ್ಲಿ YUVA-3! ಸೆ.14ಕ್ಕೆ ಥೀಮ್ ಫೋಸ್ಟರ್

ಬೆಂಗಳೂರು: ದೊಡ್ಮನೆ ಕುಡಿ ನಟ ಯುವ ರಾಜಕುಮಾರ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಫ್ಯಾನ್ಸ್ ಕಾಡುತ್ತಿತ್ತು, ಅದಕ್ಕೀತ ಉತ್ತರ ಸಿಕ್ಕಿದೆ. 'ಎಕ್ಕಾ' ಬಳಿಕ ಯುವ ಅವರು ಅಳೆದು ತೂಗಿ ಕಥೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದೀಗ ಅವರ ಮುಂದಿನ ಮೂರನೇ ಸಿನಿಮಾ (YUVA 3) ಕುರಿತು ಬಿಗ್ ಅಪ್ಡೇಟ್ ಸಿಕ್ಕಿದೆ. ಇದೇ ಸೆಪ್ಟಂಬರ್ 11ರಂದು ಥೀಮ್ ಪೋಸ್ಟ್ ರಿಲೀಸ್ ಮಾಡುವುದಾಗಿ ಯುವ, ನಿರ್ದೇಶಕ ತರುಣ್ ಸುಧೀರ್ ತಂಡ ಅಧಿಕೃತ ಮಾಹಿತಿ ನೀಡಿದೆ.

ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದ 'ಯುವ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಯುವ ರಾಜ್ ಕುಮಾರ್ ಅವರು ಎಂಟ್ರಿ ಕೊಟ್ಟಿದ್ದರು. ಬಳಿಕ ರೋಹಿತ್ ಪದಕಿ ನಿರ್ದೇಶನದ 'ಎಕ್ಕಾ' ಸಿನಿಮಾ ಬಳಿಕ ಯುವ ಅವರು, ಸೃಜನಾತ್ಮಕ ಬರಹಗಾರ ಮತ್ತು ನಿರ್ದೇಶಕ ಜಡೇಶ್ ಕೆ.ಹಂಪಿ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ. ಅವರೊಂದಿಗೆ ನಿರಂತರವಾಗಿ ಚರ್ಚೆ ನಡೆಸಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಅದೆಲ್ಲವು ಇದೀಗ ಅಧಿಕೃತವಾಗಿದೆ.

Yuva Rajkumar 3rd Film

ವಿಶೇಷವೆಂದರೆ ಯುವ ಮೂರನೇ ಸಿನಿಮಾಗಾಗಿ ಯುವ ಸೇರಿದಂತೆ ನಿರ್ದೇಶಕ ತರುಣ್ ಸುಧೀರ್, ಜಡೇಶ್ ಕೆ.ಹಂಪಿ ಮತ್ತು ಜಗದೀಶ್ ಗೌಡ ಸೇರಿ ಒಟ್ಟು ನಾಲ್ವರ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಮೂಡಿ ಬರುತ್ತಿದೆ.

3ನೇ ಸಿನಿಮಾದ ಅಪ್ಡೇಟ್ ಪೊಸ್ಟ್‌ನಲ್ಲಿ ಏನಿದೆ?

'ಯುವ 3' ಹೆಸರಿನಲ್ಲಿ ಪೊಸ್ಟರ್ ವೊಂದನ್ನು ನಟ ಯುವ ರಾಜ್ ಕುಮಾರ್ ಹಾಗೂ ತರುಣ್ ಸುಧೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸೆಪ್ಟಂಬರ್ 14ರಂದು ಬೆಳಗ್ಗೆ 11.11ಗಂಟೆಗೆ ಯುವ ಮುಂದಿನ ಸಿನಿಮಾದ ಅಧಿಕೃತ ಘೋಷಣೆ ಆಗಲಿದೆ. ಅಂದು ಥೀಮ್ ಪೊಸ್ಟ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

'ನಿಮಗೆ ನಾಲ್ವರ ಮುಖಗಳ ಪರಿಚಯವಿದೆ. ಆದರೆ ಈ ನಾಲ್ವರ ಕಾಂಬಿನೇಷನ್ ಜಂಟಿ ಪ್ರಯತ್ನ ಹೊಸತು' ಎಂದು ನಿರ್ದೇಶಕ ತರುಣ್ ಅವರು ತಿಳಿಸಿದ್ದಾರೆ. ಯುವ ಸಹ ಪೋಸ್ಟರ್ ಜೊತೆಗೆ 'ನೀವು ನಿರೀಕ್ಷಿಸದ ನಾಲ್ವರಿಂದ ಮರೆಯಲಾಗದ ಜಂಟಿ ಪ್ರಯತ್ನ' ಎಂದು ಬರೆದುಕೊಂಡಿದ್ದಾರೆ. 'ನಾಲ್ವರ ಪ್ರಯಾಣ ಜೊತೆಯಾದರೆ ಹೊಸ ಕಥೆ ಆರಂಭವಾಗುತ್ತದೆ' ಅಂತಲೂ ಪೋಸ್ಟರ್ ಮೇಲೆ ಹಾಕಲಾಗಿದೆ. ಈ ಮೂಲಕ ಹೊಸ ಪ್ರಯತ್ನಕ್ಕೆ ಟೀಂ ಸಜ್ಜಾಗಿರುವುದು ಗೊತ್ತಾಗುತ್ತದೆ.

ಹೊಸ ಲೂಕ್‌ನಲ್ಲಿ ಮಿಂಚಲಿದ್ದಾರೆ ಯುವ?

'ಯುವ, ಎಕ್ಕಾ' ಸಿನಿಮಾದಲ್ಲಿ ಗಡ್ಡ ಬಿಟ್ಟಿದ್ದ ಯುವನನ್ನು ಪ್ರೇಕ್ಷಕರು ನೋಡಿದ್ದರು. ಸದ್ಯದ ಪೋಸ್ಟರ್‌ನಲ್ಲಿ ಯುವ ಗಡ್ಡ ಟ್ರಿಮ್ ಮಾಡಿದ್ದಾರೆ. ಮೂರನೇ ಸಿನಿಮಾದಲ್ಲಿ ಹೊಸ ಅವತಾರದಲ್ಲಿ ಕಾಣಿಸುವ ಸಾಧ್ಯತೆ ಇದೆ ಅಂತಲೂ ಹೇಳಲಾಗುತ್ತಿದೆ. ಸದ್ಯ YUVA -3 ಸಿನಿಮಾದ ಹೆಸರು, ನಾಯಕಿ ನಟಿ, ಚಿತ್ರೀಕರಣ ಆರಂಭ, ನಿರ್ಮಾಪಕರ ಯಾರು ಎಂಬುದರು ಕುರಿತು ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಯುವ ಈ ಬಾರಿ ಹೊಸ ಬಗೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಯಾರು ಈ ಜಡೇಶ್ ಕೆ.ಹಂಪಿ?

ನಿರ್ದೇಶಕ ತರುಣ್ ಸುದೀರ್ ಅವರು ನಟ ದರ್ಶನ್ ಅವರಿಗೆ 'ಕಾಟೇರ, ರಾಬರ್ಟ್', ಸುದೀಪ್ ಅವರ 'ರನ್ನ' ಹಾಗೂ 'ಚೌಕ' ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇತ್ತ ನಿದೇಶಕ ಮತ್ತು ಬರಗಾರ ಜಡೇಶ್ ಕೆ.ಹಂಪಿ ಅವರು 'ಕಾಟೇರ' ಸಿನಿಮಾದ ಬರಗಾರರಾಗಿ ಕೆಲಸ ಮಾಡಿದ್ದಾರೆ. 'ಲ್ಯಾಂಡ್ ಲಾರ್ಡ್, ಗುರು ಶಿಷ್ಯರು, ಜಂಟಲ್ ಮನ್, ರಾಜಹಂಸ' ಸಿನಿಮಾಗಳನ್ನು ನಿರೂಪಿಸಿ ಸೈ ಅನ್ನಿಸಿಕೊಂಡಿದ್ದಾರೆ. ತಮ್ಮ ವಿಶಿಷ್ಟ ಬರಗಾರಿಕೆಯಿಂದ ಗುರುತಿಸಿಕೊಂಡಿದ್ದಾರೆ. ಗ್ರಾಮೀಣ ಮತ್ತು ಭಾವನಾತ್ಮಕವಾಗಿ ಕಥೆ ನಿರೂಪಿಸುವ ಸಾಮರ್ಥ್ಯ ಹೊಂದಿದವರಾಗಿದ್ದು, ಸಮಕಾಲೀನ ಪ್ರೇಕ್ಷಕರ ನಾಡಿ ಮಿಡಿತ ಅರಿತವರಾಗಿದ್ದಾರೆ. ಅವರ ಬರವಣಿಗೆಗೆ ಮನಸೋತ ಯುವ ಅವರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+