ಬರೋಬ್ಬರಿ 122 ಕೋಟಿ ಲೂಟಿ ಮಾಡಿದ 2 ಕೋಟಿ ಬಜೆಟ್‌ನ ಹನುಮಾನ್ ಅಂಶ್ ಸಿನಿಮಾ: ಇದು 21 ವರ್ಷದ ಯುವತಿಗೆ ಸಿಕ್ಕ ಗೆಲವು

ಚಿತ್ರರಂಗದ ಯಾವುದೇ ಹಿನ್ನೆಲೆ ಇಲ್ಲದ, ಸಿನಿಮಾ ಮೇಕಿಂಗ್ ಬಗ್ಗೆ ಗಂಧ-ಗಾಳಿಯೂ ಗೊತ್ತಿಲ್ಲದ ಕೇವಲ 21 ವರ್ಷದ ಯುವತಿಯೊಬ್ಬಳು ನಿರ್ಮಿಸಿದ ಸಿನಿಮಾವೊಂದು ಇಂದು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಕೇವಲ 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಹನುಮಾನ್ ಅಂಶ್ ಎನ್ನುವ ಈ ಸಿನಿಮಾ, ಇದೀಗ ಬಿಡುಗಡೆಯಾದ 31 ದಿನಗಳಲ್ಲಿ 122 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದೊಡ್ಡ ದೊಡ್ಡ ಸೂಪರ್‌ಸ್ಟಾರ್‌ಗಳ ಚಿತ್ರಗಳಿಗೂ ಸೆಡ್ಡುಹೊಡೆದಿದೆ.

ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ಈ ಹನುಮಾನ್ ಅಂಶ್ ಎನ್ನುವ ಭಕ್ತಿಪ್ರಧಾನ ಸಿನಿಮಾವನ್ನ ನಿರ್ಮಿಸಿದ ಆ ಯುವತಿಯ ಹೆಸರು ಅನುಪ್ರಿಯಾ ನಗರ್.

Hanuman Ansh Box Office Collection 21-Year-Old Student s Rs 2 Crore Film Crosses Rs 122 Crore

ಯುನಿವರ್ಸಿಟಿ ಅಸೈನ್‌ಮೆಂಟ್ ಸಿನಿಮಾವಾಗಿ ಬದಲಾದ ರೋಚಕ ಕಥೆ

ಅನುಪ್ರಿಯಾ ನಗರ್ ಇಂಗ್ಲೆಂಡಿನ ಬಾಥ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ. ಆಕೆಗೆ ಸಿನಿಮಾ ನಿರ್ಮಾಣ ಮಾಡುವ ಯಾವುದೇ ಉದ್ದೇಶವಿರಲಿಲ್ಲ. ಆದರೆ ಆಕೆಗೆ ನೀಡಲಾಗಿದ್ದ ಒಂದು ಯುನಿವರ್ಸಿಟಿ ಅಸೈನ್‌ಮೆಂಟ್ ಈ ಸಿನಿಮಾದ ಹುಟ್ಟಿಗೆ ಕಾರಣವಾಯಿತು.

ಹೂಡಿಕೆ ಮತ್ತು ಬ್ಯಾಂಕಿಂಗ್ ಕುರಿತ ಮಾಡ್ಯೂಲ್‌ಗಾಗಿ ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಬಗ್ಗೆ ಅಧ್ಯಯನ ಮಾಡುವಾಗ, ಸ್ಟೀವ್ ಜಾಬ್ಸ್ ಅವರು ಭಾರತದ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರಿಂದ ಪ್ರೇರಣೆ ಪಡೆದಿದ್ದ ವಿಚಾರ ಅನುಪ್ರಿಯಾಗೆ ತಿಳಿಯಿತು.

ವಿದೇಶಿ ವ್ಯಕ್ತಿಯೊಬ್ಬ ಭಾರತೀಯ ಗುರುವಿನಿಂದ ಪ್ರಭಾವಿತನಾಗಿದ್ದನ್ನ ಕಂಡು ಅಚ್ಚರಿಗೊಂಡ ಆಕೆ, ನೀಮ್ ಕರೋಲಿ ಬಾಬಾ ಅವರ ಬಗ್ಗೆಯೇ ಹೆಚ್ಚಿನ ಸಂಶೋಧನೆ ಮಾಡಲು ಶುರುಮಾಡಿದಳು. ಆರಂಭದಲ್ಲಿ ಇದೊಂದು ಪುಸ್ತಕವಾಗಬಹುದು ಎಂದುಕೊಂಡಿದ್ದ ಅನುಪ್ರಿಯಾ, ಆಕಸ್ಮಿಕವಾಗಿ ನಿರ್ದೇಶಕ ವಿಶಾಲ್ ಚತುರ್ವೇದಿ ಅವರನ್ನ ಭೇಟಿಯಾದ ಬಳಿಕ ಈ ಸಂಶೋಧನೆಯೇ 'ಹನುಮಾನ್ ಅಂಶ್' ಸಿನಿಮಾವಾಗಿ ಮಾರ್ಪಟ್ಟಿತು.

10 ಲಕ್ಷ ರೂಪಾಯಿಗಳಿಂದ 122 ಕೋಟಿ ರೂ. ಗಡಿ ದಾಟಿದ ಕಲೆಕ್ಷನ್

ಆಗಸ್ಟ್ 7ರಂದು ಯಾವುದೇ ದೊಡ್ಡ ಪ್ರಚಾರವಿಲ್ಲದೆ ತೆರೆಕಂಡ ಈ ಸಿನಿಮಾ, ಬಿಡುಗಡೆಯಾದ ಮೊದಲ ದಿನ ಕೇವಲ 10 ಲಕ್ಷ ರೂಪಾಯಿ ಗಳಿಸಿತ್ತು. ಮೊದಲ ಎರಡು ವಾರಗಳ ಕಲೆಕ್ಷನ್ ತೀರಾ ಕಳಪೆಯಾಗಿತ್ತು. ಆದರೆ, ಪ್ರೇಕ್ಷಕರ ಬಾಯಿಂದ ಬಾಯಿಗೆ ಚಿತ್ರದ ಬಗ್ಗೆ ಹಬ್ಬಿದ ಪಾಸಿಟಿವ್ ವಿಮರ್ಶೆ ಚಿತ್ರದ ಇಡೀ ಚಿತ್ರಣವನ್ನೇ ಬದಲಾಯಿಸಿತು.

3ನೇ ವಾರದಲ್ಲಿ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಈ ಚಿತ್ರ, 4ನೇ ವಾರದಲ್ಲಿ ಭಾರಿ ಜಿಗಿತ ಕಂಡು ಪ್ರತಿದಿನ ಕೋಟ್ಯಂತರ ರೂಪಾಯಿ ಬಾಚಿಕೊಳ್ಳಲು ಶುರುಮಾಡಿತು. ಇದೀಗ ಬಿಡುಗಡೆಯಾಗಿ ಒಂದು ತಿಂಗಳ (31 ದಿನ) ಬಳಿಕ ಈ ಚಿತ್ರವು ಭಾರತದಲ್ಲಿ ನಿವ್ವಳವಾಗಿ 122 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿ ಹೊಸ ಇತಿಹಾಸ ಸೃಷ್ಟಿಸಿದೆ.

ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್‌ಗೂ ಪ್ರೇರಣೆಯಾದ ನೀಮ್ ಕರೋಲಿ ಬಾಬಾ

'ಮಹಾರಾಜ್-ಜೀ' ಎಂದೇ ಕರೆಸಿಕೊಳ್ಳುವ ನೀಮ್ ಕರೋಲಿ ಬಾಬಾ ಅವರ ಪ್ರಭಾವ ಕೇವಲ ಭಾರತೀಯರಿಗಷ್ಟೇ ಸೀಮಿತವಾಗಿರಲಿಲ್ಲ. 1974ರಲ್ಲಿ ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಭಾರತಕ್ಕೆ ಬಂದು ಬಾಬಾ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ಬಳಿಕ ಅವರ ಸಲಹೆಯಂತೆ ಫೇಸ್ ಬುಕ್ (ಮೆಟಾ) ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಕೂಡ ಕೈಂಚಿ ಧಾಮ್‌ಗೆ ಭೇಟಿ ನೀಡಿ ಆಧ್ಯಾತ್ಮಿಕ ಪ್ರೇರಣೆ ಪಡೆದಿದ್ದರು. ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಸೇರಿದಂತೆ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಕೂಡ ಇವರ ಪರಮ ಭಕ್ತರು.

ಕೇವಲ 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಯಾವುದೇ ಅದ್ಧೂರಿ ಸೆಟ್ ಅಥವಾ ಗ್ರಾಫಿಕ್ಸ್ ಇಲ್ಲದಿದ್ದರೂ ಕೇವಲ ಕಥೆ ಹಾಗೂ ಮೇಕಿಂಗ್ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದೆ.

ಇದೀಗ ಖ್ಯಾತ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು 'ಹೊಂಬಾಳೆ ಓವರ್‌ಸೀಸ್' ಮೂಲಕ ಸೆಪ್ಟೆಂಬರ್ 11ರಂದು ಅಂತರಾಷ್ಟ್ರೀಯ ಮಟ್ಟದಲ್ಲೂ ಈ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ಭಾರತೀಯ ಚಿತ್ರರಂಗದ ಅತಿ ದೊಡ್ಡ ಬ್ಲಾಕ್‌ಬಸ್ಟರ್ ಹಿಟ್‌ಗಳಲ್ಲಿ ಒಂದಾಗಿ ಹನುಮಾನ್ ಅಂಶ್ ಹೊರಹೊಮ್ಮಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+