Yash: ಲಂಡನ್‌ಗೆ ಹಾರಲಿದ್ದಾರೆ 'ಯಶ್ ಜತೆ ಕಿಯಾರಾ-ನಯನತಾರಾ': 200 ದಿನದ ಶೂಟಿಂಗ್ ಅಪ್ಡೇಟ್ ಇಲ್ಲಿದೆ
ಬೆಂಗಳೂರು, ಜೂನ್ 15: ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್, ಪ್ಯಾನ್ ಇಂಡಿಯಾದ ರಾಕಿ ಭಾಯ್ ಸದ್ಯ 'ಟಾಕ್ಸಿಕ್' ಸಿನಿಮಾದಲ್ಲಿ ಬ್ಯೂಸಿ ಇದ್ದಾರೆ. KGF ಸರಣಿ ಬಳಿಕ ಗೀತು ಮೋಹನ್ ದಾಸ ಅವರೊಂದಿಗೆ ಕಂಪ್ಲೀಟ್ ಆಕ್ಷನ್ ಸಿನಿಮಾನದಲ್ಲಿ ನಟ ಯಶ್ ನಟಿಸಲಿದ್ದಾರೆ. ಸದ್ಯ ಎಲ್ಲೆಲ್ಲಿ ಎಷ್ಟು ದಿನ ಶೂಟಿಂಗ್ ನಡೆಯಲಿದೆ. ಯಾರೆಲ್ಲ ಇರಲಿದ್ದಾರೆ ಎಂಬ ಅಪ್ಡೇಟ್ ಅನ್ನು ಚಿತ್ರತಂಡ ತಿಳಿಸಿದೆ.
ಕನ್ನಡದ ನಟ ಯಶ್ ಅವರು ಕೆಜಿಎಫ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದು ನಿಮಗೆಲ್ಲ ಗೊತ್ತೆ ಇದೆ. ಇದೀಗ ಅವರು ನೆಕ್ಸ್ಟ್ ಲೆವೆಲ್ ಸಿನಿಮಾಗಾಗಿ ತೊಡಗಿಕೊಂಡಿದ್ದಾರೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಅವರೊಂದಿಗೆ ಔಟ್-ಅಂಡ್-ಔಟ್ ಆಕ್ಷನ್ ಚಿತ್ರ ಮಾಡಲು ಕೈಜೋಡಿಸಿದ್ದಾರೆ. ಈ ಬಗ್ಗೆ ಪಿಂಕ್ ವಿಲ್ಲಾ ವರದಿ ಮಾಡಿದೆ.

ಹೊಸ ಮಾಹಿತಿ ಪ್ರಕಾರ, ಟಾಕ್ಸಿಕ್ ಚಿತ್ರೀಕರಣಕ್ಕಾಗಿ ನಟ ಯಶ್ ಹಾಗೂ ನಟಿಯರಾದ ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಅವರು ಬಹುಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರಿಬ್ಬರದ್ದು ಆಸಕ್ತಿದಾಯಕ ಪಾತ್ರ ಎನ್ನಲಾಗಿದೆ. ಇದೀಗ ಸದ್ದಿಲ್ಲದೇ ನಯನತಾರಾ ಮತ್ತು ಯಶ್ ದೇಶದ ಕೆಲವೆಡೆ ಟಾಕ್ಸಿಕ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.
ಲಂಡನ್‌ನಲ್ಲಿ ಎಷ್ಟು ದಿನ ಶೂಟಿಂಗ್?
ಗೀತು ಮೋಹನ್ ದಾಸ್ ಅವರ ಟೀಮ್ ಒಟ್ಟು ಟಾಕ್ಸಿಕ್ ಚಿತ್ರೀಕರಣವನ್ನು 200 ದಿನಗಳನ್ನು ಮೀಸಲಿಟ್ಟಿದ್ದಾರೆ. ಈ ಪೈಕಿ ಚಿತ್ರೀಕರಣ ಪ್ರಾರಂಭವಾಗಿದೆ. ಒಟ್ಟು ದಿನಗಳ ಪೈಕಿ ಬಹಪಾಲು ಚಿತ್ರೀಕರಣ ಲಂಡನ್ ನಲ್ಲಿ ನಡೆಯಲಿದೆ. ಹೀಗಾಗಿ ನಟ ಯಶ್, ಕಿಯಾರಾ ಅಡ್ವಾನಿ ಮತ್ತು ನಯನತಾರಾ ಅವರು ಲಂಡನ್‌ಗೆ (ಯುನೈಟೆಡ್ ಕಿಂಗ್ಡಮ್) ಶೀಘ್ರವೇ ಹಾರಲಿದ್ದಾರೆ ಎಂಬ ಅಪ್ಡೇಟ್ ಮಾಹಿತಿ ವರದಿ ಆಗಿದೆ.

ಟಾಕ್ಸಿಕ್ ಸಿನಿಮಾ ತಂಡ ಭಾರತದ ಕೆಲವೆಡೆ ಶೂಟಿಂಗ್ ಆರಂಭಿಸಿದೆ. ಇದೀಗ ಲಂಡನ್ ಹಾಗೂ ಅಲ್ಲಿನ ಸುತ್ತಮುತ್ತಲಿನ ಶೂಟಿಂಗ್‌ಗಾಗಿ ತೆರಳಲಿದೆ. ಇದಕ್ಕಾಗಿ ಗೀತು ಮೋಹನ್ ದಾಸ್ ಸೇರಿದಂತೆ ಇಡೀ ಚಿತ್ರತಂಡ ವೇಳಾಪಟ್ಟಿ ಹಾಕಿಕೊಂಡಿದೆ. ವಿದೇಶದಲ್ಲಿ ಬರೋಬ್ಬರಿ ನಾಲ್ಕು ತಿಂಗಳು ಕಾಲ (150 ದಿನ) ಶೂಟಿಂಗ್ ಮಾಡಲು ನಿರ್ಧರಿಸಲಾಗಿದೆ.
'ಟಾಕ್ಸಿಕ್' ಪ್ರಮುಖ ದೃಶ್ಯಗಳ ಚಿತ್ರೀಕರಣ
ಇಲ್ಲಿ 'ಟಾಕ್ಸಿಕ್'ನ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣ ಮಾಡಲಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಯಶ್ ಸ್ಟೈಲಿಶ್ ಡಾನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದು ಕೆಜಿಎಫ್ ಸರಣಿ ಪಾತ್ರಕ್ಕಿಂತಲೂ ತುಂಭಾ ವಿಭಿನ್ನವಾಗಿದೆ. ಈ ಅಂಡರ್‌ವರ್ಲ್ಡ್ ಡಾನ್ ಪಾತ್ರವು ತುಂಬಾ ಸಮಕಾಲೀನ ಪಾತ್ರವಾಗಿದೆ. ಅಂತಾರಾಷ್ಟ್ರೀಯ ಡಾನ್ ಅಂತಲೂ ಹೇಳಲಾಗುತ್ತಿದೆ.
ಮುಂದಿನ ವರ್ಷ 'ಟಾಕ್ಸಿಕ್' ಬಿಡುಗಡೆ
ನಟ ಯಶ್ ಪರಫೆಕ್ಟ್ ಮ್ಯಾನ್ ಎಂಬುದು ಅವರ ಈ ಹಿಂದಿನ ಸಿನಿಮಾಗಳಲ್ಲಿ ನೋಡಿದ್ದೇವೆ. ಟಾಕ್ಸಿಕ್ ಚಿತ್ರ ತಂಡದಲ್ಲೂ ಅದು ಮುಂದುವರಿದಿದೆ. ಇಡೀ ತಂಡವು ಚಿತ್ರೀಕರಣ, ಎಷ್ಟು ಹಂತದ ಚಿತ್ರೀಕರಣ ಆಗಿದೆ ಎಂದೆಲ್ಲರ ಬಗ್ಗೆ ಗೌಪ್ಯತೆ ಕಾಪಾಡಿಕೊಂಡು ಬಂದಿದೆ. ಇದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರೀಕರಣ ನಿಖರ ಸಮಯವನ್ನು ಗೌಪ್ಯವಾಗಿ ಇಡಲಾಗಿದೆ.
ಇಂಟರ್‌ನ್ಯಾಷನಲ್ ಡಾನ್ ಪಾತ್ರದಲ್ಲಿ ಯಶ್ ಕಾಣಿಸುತ್ತಿದ್ದಾರೆ ಎನ್ನಲಾಗಿದೆ. ಇದರಲ್ಲಿ ಅನೇಕ ಸಾಹಸಮಯ ದೃಶ್ಯಗಳು ಇರಲಿದ್ದು. ಸಿನಿಮಾ ಅಂದುಕೊಂಡಂತೆ ಶೂಟಿಂಗ್ ಮುಗಿಸಿ ಮುಂದಿನ ವರ್ಷ 2025 ರಂದು ಏಪ್ರಿಲ್ 10ಕ್ಕೆ ಬಿಡುಗಡೆಗೊಳ್ಳಲಿದೆ.
ಇನ್ನೂ ಚಿತ್ರದಲ್ಲಿ ಯಶ್, ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ಅನೇಕ ಕಲಾವಿದರ ಇರಲಿದ್ದಾರೆ. ಹುಮಾ ಖುರೇಷಿ ಸಹ ಉತ್ತಮ ಪಾತ್ರ ನಿರ್ವಹಿಸಲಿದ್ದಾರೆ. ಅವರೊಂದಿಗೆ ಇತರ ಕೆಲವು ನಟರು ಸಹ ಸೇರಿಕೊಳ್ಳಲಿದ್ದಾರೆ. ಯಶ್ ಟಾಕ್ಸಿನ್ ಸಿನಿಮಾವು ದೊಡ್ಡ ತಾರಾಗಣ ಹೊಂದಿರುವ ಸಿನಿಮಾ ಆಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇನ್ನೂ ನಟ ಯಶ್ ಅವರ ಸಿನಿಮಾದ ಅಪ್ಡೇಟ್ ಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಕೆಜಿಎಫ್ ಸಿನಿಮಾಗಳ ಬಳಿಕ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳು ಇದ್ದಾರೆ. ಅವರೆಲ್ಲರು ಟಾಕ್ಸಿಕ್ ಸಿನಿಮಾದ ಅಪ್ಡೇಟ್, ಚಿತ್ರೀಕರಣ ಮಾಹಿತಿ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ.












Click it and Unblock the Notifications