ಯಶ್ ಜೊತೆ ಭರ್ಜರಿ ಹಸಿಬಿಸಿ ದೃಶ್ಯ, ರೊಮ್ಯಾನ್ಸ್ ಮಾಡಿದ್ದು ಯಾರು ಅಂದ್ರೆ...
ಟಾಕ್ಸಿಕ್... ಟಾಕ್ಸಿಕ್... ಟಾಕ್ಸಿಕ್... ಹೀಗೆ ಎಲ್ಲಿ ನೋಡಿದರೂ & ಕೇಳಿದರೂ ಕನ್ನಡದ ಸಿನಿಮಾ ಟಾಕ್ಸಿಕ್ ಬಗ್ಗೆ ಚರ್ಚೆ ಜೋರಾಗಿದೆ. ತಮಿಳು, ತೆಲುಗು, ಮಲಯಾಳಂ ಮಾತ್ರವೇ ಅಲ್ಲ ಹಿಂದಿ ಸಿನಿಮಾ ರಂಗ ಕೂಡ ಇದೀಗ ಟಾಕ್ಸಿಕ್ ಟೀಸರ್ ಅಬ್ಬರದ ಎದುರು ಧೂಳ್, ಧೂಳ್ ಆಗಿ ಹೋಗುತ್ತಿದೆ. ಯಶ್ ಅವರ ಬಹು ನಿರೀಕ್ಷಿತ ಸಿನಿಮಾ ಆಗಿರುವ ಟಾಕ್ಸಿಕ್ ಈಗ ಭರ್ಜರಿ ಎಂಟ್ರಿ ಕೊಡುತ್ತಿದೆ. ಹಾಗಾದರೆ ಯಶ್ ಜೊತೆ ಭರ್ಜರಿ ಹಸಿಬಿಸಿ ದೃಶ್ಯ, ರೊಮ್ಯಾನ್ಸ್ ಮಾಡಿದ್ದು ಯಾರು ಗೊತ್ತಾ?
ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾ ಟೀಸರ್ ದೊಡ್ಡ ಮಟ್ಟಿಗೆ ಹವಾ ಎಬ್ಬಿಸಿ ದಾಖಲೆ ಧೂಳ್ ಧೂಳ್ ಮಾಡಲು ಮುಂದೆ ನುಗ್ಗುತ್ತಿದೆ. ಟಾಕ್ಸಿಕ್ ಸಿನಿಮಾ ಟೀಸರ್ ಯಶ್ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ರಿಲೀಸ್ ಆಗಿದ್ದು, ಟೀಸರ್ ರಿಲೀಸ್ ಆದ ಸುಮಾರು 20 ಗಂಟೆಯಲ್ಲಿ ಭರ್ಜರಿ 47 ಮಿಲಿಯನ್ ವೀವ್ಸ್ ಪಡೆದಿದೆ. ಹಾಗೇ 1 ಮಿಲಿಯನ್‌ಗೂ ಹೆಚ್ಚು ಲೈಕ್ಸ್ ಕೂಡ ಗಿಟ್ಟಿಸಿಕೊಂಡಿದೆ. ಇನ್ನೂ ಒಂದು ವಾರ ಟಾಕ್ಸಿಕ್ ಟೀಸರ್ ಹೀಗೆಯೇ ದೊಡ್ಡ ಸೌಂಡ್ ಮಾಡುತ್ತಾ ಟ್ರೆಂಡ್ ಕ್ರಿಯೇಟ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಫ್ಯಾನ್ಸ್ ಭರ್ಜರಿಯಾಗಿ ಯಶ್ ಅವರ ಹುಟ್ಟುಹಬ್ಬ ಸಂಭ್ರಮಿಸುತ್ತಿದ್ದಾರೆ. ಅದರಲ್ಲೂ ಟೀಸರ್‌ನಲ್ಲಿ ಇದ್ದ ಹಸಿಬಿಸಿ ದೃಶ್ಯಗಳು ಇದೀಗ ಹಲ್‌ಚಲ್ ಎಬ್ಬಿಸಿವೆ.













Click it and Unblock the Notifications