Yash Toxic Movie ಯಶ್ ಥರ ಆಗ್ಬೇಕಂದ್ರೆ ನಾನು ಇನ್ನೊಂದು ಜನ್ಮವೆತ್ತ ಬೇಕು, ಲೇಡಿ ಸೂಪರ್‌ಸ್ಟಾರ್ Nayanthara ಹೀಗಂದಿದ್ಯಾಕ?
Yash Toxic Movie: ಸೌತ್‌ನ ಲೇಡಿ ಸೂಪರ್‌ಸ್ಟಾರ್ ನಯನತಾರಾ ಕನ್ನಡ ಇಂಡಸ್ಟ್ರಿಗೆ ಬಲಗಾಲಿಟ್ಟು ಒಳಗೆ ಬಂದಿದ್ದಾರೆ. ಅವರನ್ನು ಇಲ್ಲೀ ತನಕ ಕರೆತಂದಿದ್ದು ಯಶ್. ಈಗಾಗಲೇ ʼಟಾಕ್ಸಿಕ್ʼ (Toxic) ಸಿನಿಮಾದಲ್ಲಿನ ಅವರ ಲುಕ್ ರಿವೀಲ್ ಆಗಿದೆ. ಯಶ್‌ನ ಬ್ಯಾಡ್ ಆಸ್ ಸಿಸ್ಟರ್ ಆಗಿ ಅವರು ಖತರ್‌ನಾಕ್ ರೋಲ್ ಪ್ಲೇ ಮಾಡುತ್ತಿದ್ದಾರೆ. ಉಳಿದ ಕಡೆ ಆದರೆ ಅಷ್ಟೇ ಆಗೋದು, ತನಗೊಪ್ಪಿಸಿದ ರೋಲ್ ಮಾಡಿ ಮುಗಿಸಿ ತಾನಾಯ್ತು ತನ್ನ ಪಾಡಾಯ್ತು ಅಂತಿರ್ತಾರೆ. ಆದರೆ ಯಶ್ ಅವರ ಟಾಕ್ಸಿಕ್ ಅಡ್ಡಕ್ಕೆ ಹೋಗಿ ಬಂದಮೇಲೆ ಅವರಿಗೆ ಒಂಥರಾ ಬೇರೆಯದೇ ಫೀಲ್ ಆಗಿದೆ. ಈ ರೀತಿಯ ಅಸಾಮಿಗಳೂ ಇರ್ತಾರ ಅಂತ ಅವರು ಯಶ್ ಕಂಡು ನಿಬ್ಬೆರಗಾಗಿದ್ದಾರೆ. ತಾನು ಅಂಥಾ ಮತ್ತೊಬ್ಬ ವ್ಯಕ್ತಿಯನ್ನು ನೋಡಿಲ್ಲ. ಅವರ ಹಾಗೆ ಆಗ್ಬೇಕು ಅಂದರೆ ನಾನು ಇನ್ನೊಂದು ಜನ್ಮವನ್ನೇ ಎತ್ತಿ ಬರಬೇಕು ಅಂತ ಹಾಡಿ ಹೊಗಳಿದ್ದಾರೆ.

ಟಾಕ್ಸಿಕ್ ರಿಲೀಸ್‌ನಂದೇ ನಯನತಾರಾ ಇನ್ನೊಂದು ಸಿನಿಮಾ
ವಿಶೇಷ ಅಂದರೆ ಸ್ಟಾರ್ ನಾಯಕ, ನಾಯಕಿಯರು ಬೇರೆ ಬೇರೆ ಭಾಷೆಗಳಲ್ಲಿ ನಟಿಸಿದ್ದರೂ ಅವರ ಸಿನಿಮಾಗಳು ಒಂದೇ ವಾರ ರಿಲೀಸ್ ಆಗೋದು ಬಹಳ ಅಪರೂಪ. ಇದರಿಂದ ಪ್ರೇಕ್ಷಕರು ಡಿವೈಡ್ ಆಗುವ ಸಾಧ್ಯತೆ ಇರುವ ಕಾರಣ ಒಂದು ಸಿನಿಮಾದ ಡೇಟ್ ಅನ್ನು ಪೋಸ್ಟ್‌ಪೋನ್ ಮಾಡುತ್ತಾರೆ. ಆದರೆ ನಯನತಾರಾ ಇದಕ್ಕೆ ಯಾಕೋ ಮನಸ್ಸು ಮಾಡಿಲ್ಲ. ಅವರು ನಾಯಕಿಯಾಗಿ ನಟಿಸಿರುವ ತಮಿಳು ಸಿನಿಮಾ ʼಹಾಯ್ʼ ಕೂಡ ಇದೇ ವಾರ ರಿಲೀಸ್ ಆಗುತ್ತಿದೆ. ಸಾಮಾನ್ಯವಾಗಿ ಸಿನಿಮಾ ಪ್ರಮೋಶನ್‌ಗಳಿಂದ ದೂರ ಇರುವ ನಯನತಾರಾ ಈ ಬಾರಿ ಮಾತ್ರ ತನ್ನ ಎರಡೂ ಸಿನಿಮಾಗಳ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. 'ದಾದಾʼದಂಥಾ ಎಮೋಶನಲ್ ಸಿನಿಮಾ ಮಾಡಿದ ಕೆವಿನ್ ನಯನತಾರಾ ನಟನೆಯ ʼಹಾಯ್ʼ ಸಿನಿಮಾದ ಹೀರೋ.
ಹಾಯ್ ಸಿನಿಮಾ ಪ್ರಮೋಶನ್‌ನಲ್ಲೂ ಯಶ್ ಹೊಗಳಿದ ನಯನತಾರಾ
ಬೆಂಗಳೂರಿನಲ್ಲಿ ನಡೆದ ʼಟಾಕ್ಸಿಕ್ʼ ಟ್ರೇಲರ್ ಲಾಂಚ್ ಇವೆಂಟ್‌ನಲ್ಲಿ ನಯನತಾರಾ ಭಾಗವಹಿಸಿದ್ದರು. ಬಹಳ ಡಿಗ್ನಿಫೈಡ್ ಆಗಿ ಕಾಣಿಸಿಕೊಂಡ ಅವರು ಪ್ರಾಮಾಣಿಕವಾಗಿ ನೇರ ನುಡಿಗಳಿಂದ ಗಮನ ಸೆಳೆದರು. ಅದರಲ್ಲೂ ಯಶ್ ಬಗ್ಗೆ ಅವರು ಆಡಿದ ಮಾತು ಕನ್ನಡಿಗರು ತೆಲುಗು ಸ್ಟಾರ್ ನಟಿಯ ಬಗ್ಗೆ ಕ್ರೇಜ್ ಬೆಳೆಸಿಕೊಳ್ಳುವ ಹಾಗೆ ಮಾಡಿತ್ತು. ಅಷ್ಟಕ್ಕೇ ಮುಗಿದರೆ ಬೇರೆ ಮಾತು. ಆದರೆ ಅವರು ʼಹಾಯ್ʼ ಸಿನಿಮಾ ಪ್ರಮೋಶನ್‌ನಲ್ಲೂ ಯಶ್ ಬಗ್ಗೆ ಮಾತನಾಡಿದ್ದಾರೆ. ʼಯಶ್ ಅದೆಂಥಾ ದೈತ್ಯ ಕೆಲಸಗಾರ ಅಂದರೆ ಅವರ ಹಾಗೆ ಕೆಲಸ ಮಾಡಬೇಕು ಅಂದರೆ ನಾನು ಇನ್ನೊಂದು ಜನ್ಮ ಎತ್ತಿ ಬರಬೇಕುʼ ಅನ್ನುವ ಮಾತು ಹೇಳಿದ್ದಾರೆ.
ರಿಯಲ್‌ನಲ್ಲೂ ಯಶ್ ಅವರದು ಲಾರ್ಜರ್ ದ್ಯಾನ್ ಲೈಫ್ ಪರ್ಸನಾಲಿಟಿ
ಯಾವತ್ತೂ ಸಿನಿಮಾ ಪ್ರಮೋಶನ್‌ಗಳಲ್ಲಿ ಕಾಣಿಸಿಕೊಳ್ಳದ ನಯನತಾರಾ ʼಟಾಕ್ಸಿಕ್ʼ ಸಿನಿಮಾ ಪ್ರಮೋಶನ್ ಇವೆಂಟ್‌ನಲ್ಲಿ ಕಾಣಿಸಿಕೊಳ್ಳಲು ಕಾರಣ ಯಶ್. ಈ ಸಿನಿಮಾದ ನಿರ್ಮಾಪಕರೂ ಆಗಿದ್ದ ʼಯಶ್ʼ ಕಾಲ್ ಮಾಡಿ ಪ್ರೀತಿಯಿಂದ ಇವೆಂಟ್‌ಗೆ ಆಹ್ವಾನಿಸಿದಾಗ ಲೇಡಿ ಸೂಪರ್‌ಸ್ಟಾರ್‌ಗೆ ನೋ ಅನ್ನಲಾಗಲಿಲ್ಲವಂತೆ. ಹೀಗೆ ತನ್ನ ದಶಕಗಳ ಪರಿಪಾಠವನ್ನು ತಪ್ಪಿಸಿ ಟಾಕ್ಸಿಕ್ ಇವೆಂಟ್‌ನಲ್ಲಿ ಭಾಗವಹಿಸಿ ಯಶ್ ಕೆಲಸ ಮಾಡುತ್ತಿದ್ದ ರೀತಿಯನ್ನು ಹಾಡಿ ಹೊಗಳಿದ್ದರು. ʼಯಶ್ ಲಾರ್ಜರ್ ದ್ಯಾನ್ ಲೈಫ್ ಪಾತ್ರವಾಗಿ ಸಿನಿಮಾದಲ್ಲಷ್ಟೇ ಕಾಣಿಸಿಕೊಳ್ಳೋದಲ್ಲ. ರಿಯಲ್ ಲೈಫ್‌ನಲ್ಲೂ ಅವರು ಹಾಗೇ ಇದ್ದಾರೆ. ಅವರ ಹಾಗೆ ಸಿನಿಮಾಕ್ಕಾಗಿ ದುಡಿಯುವವರನ್ನು ನಾನು ಈವರೆಗೆ ನೋಡಿಲ್ಲʼ ಎಂದು ಅಚ್ಚರಿ, ಮೆಚ್ಚುಗೆ ಬೆರೆಸಿ ಹೇಳಿದ್ದರು.
ಯಶ್ ಸೆಂಟರ್ ಆಫ್ ಅಟ್ರಾಕ್ಷನ್
ಮೊನ್ನೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮ ನೋಡಿದರೆ ಗೊತ್ತಾಗುತ್ತದೆ, ಅಕ್ಕಪಕ್ಕದ ರಾಜ್ಯಗಳಲ್ಲಿ ಯಶ್ ಬಗೆಗಿನ ಕ್ರೇಜ್ ಹೇಗಿದೆ ಅಂತ. ಇದೇ ವಾರ ಟಾಕ್ಸಿಕ್ ರಿಲೀಸ್ ಇದೆ. ಇನ್‌ಸ್ಟಾಗ್ರಾಂ ಸೇರಿದಂತೆ ಸೋಷಲ್ ಮೀಡಿಯಾದಲ್ಲೆಲ್ಲ ಯಶ್ ಅವರೇ ತುಂಬಿಕೊಂಡಿದ್ದಾರೆ. ನಯನತಾರಾ ಅವರು ನಟಿಸಿರುವ ʼಹಾಯ್ʼ ಸಿನಿಮಾ ಕುರಿತ ಸಂದರ್ಶನದಲ್ಲೂ ನಿರೂಪಕಿ ಅವರಿಗೆ ಯಶ್ ಬಗೆಗೆ ಪ್ರಶ್ನೆ ಕೇಳಿದ್ದಾರೆ. ʼಯಶ್ ಅನ್ನು ರಾಕಿ ಭಾಯ್ ಅಂತಾರೆ. ಅವರಿಗಿರುವ ಲಾರ್ಜರ್ ದ್ಯಾನ್ ಲೈಫ್ ಇಮೇಜ್ ಅನ್ನು ಅವರು ನಿಜಜೀವನದಲ್ಲೂ ಸತ್ಯವಾಗಿಸಿದ್ದಾರೆ. ಅವರ ಹಾಗೆ ರಾತ್ರಿ ಹಗಲು ಸಿನಿಮಾಕ್ಕಾಗಿ ದುಡಿಯುವ ಮತ್ತೊಬ್ಬ ಆಕ್ಟರ್ ಅನ್ನು ನಾನು ನೋಡಿಲ್ಲ. ತನಗೇನು ಬೇಕು ಅನ್ನುವ ಬಗ್ಗೆ ಅವರಿಗೆ ಬಹಳ ಸ್ಪಷ್ಟತೆ ಇದೆ. ನಂಬಲು ಅಸಾಧ್ಯವಾದ ವಿಜನ್ ಅವರಿಗಿದೆ. ಫ್ಯಾಮಿಲಿ ಮತ್ತು ಸಿನಿಮಾದ ಕೆಲಸವೇ ಅವರ ಜಗತ್ತು. ಅದನ್ನು ಬಿಟ್ಟರೆ ಬೇರೆ ಏನೂ ಅವರಿಗೆ ತಿಳಿಯದು. ಅದು ಕೆಲಸ ಅಂದರೆ ಹೇಗಂತೀರ, ಅದನ್ನು ನೋಡಿದರೆ ನಮ್ಮಂಥವರಿಗೆಲ್ಲ ಭಯವೇ ಆಗಿ ಬಿಡುತ್ತದೆ. ಇವರ ಬಗ್ಗೆ ಮಾತನಾಡಬೇಕು ಅಂದರೆ ಇನ್ನೂ ಎರಡು ಗಂಟೆ ಮಾತನಾಡಬಹುದು. ಇವರ ಹಾಗೆ ಇರಬೇಕು ಅಂದರೆ ನಾನು ಇನ್ನೊಂದು ಜನ್ಮ ಎತ್ತಿ ಬರಬೇಕು.ʼ ಎಂದು ಕಾರ್ಯಕ್ರಮದಲ್ಲಿ ನಯನತಾರಾ ಯಶ್ ಅವರನ್ನು ಕೊಂಡಾಡಿದ್ದಾರೆ. ಇದೀಗ ಎಲ್ಲೆಡೆ ವೈರಲ್ ಆಗಿದೆ.


Click it and Unblock the Notifications
