Yash 19: ಯಶ್ ಮುಂದಿನ ಸಿನಿಮಾಗೆ ಇವರೇ ನಿರ್ದೇಶಕರು! ನಾಯಕಿ, ಸಹ ನಟರು ಇವರೇನಾ?

ಒಂದೂವರೆ ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಯಶ್ 19ನೇ ಸಿನಿಮಾ ಯಾವಾಗ ಎನ್ನುವ ಯಕ್ಷಪ್ರಶ್ನೆಗೆ ಉತ್ತರ ಕೊಡಲು ಸಿದ್ದವಾಗಿದ್ದಾರೆ. ಡಿಸೆಂಬರ್ 8ರಂದು ತಮ್ಮ ಹೊಸ ಸಿನಿಮಾ ಟೈಟಲ್ ಘೋಷಣೆ ಮಾಡುವುದಾಗಿ ಹೇಳುವ ಮೂಲಕ ಯಶ್ ಸುದ್ದಿಯಾಗಿದ್ದಾರೆ.

ಹಾಗಾದ್ರೆ ಯಶ್ ಮುಂದಿನ ಸಿನಿಮಾ ಹೇಗಿರುತ್ತೆ, ನಿರ್ದೇಶಕರು ಯಾರು, ಯಾರೆಲ್ಲಾ ಸಿನಿಮಾದಲ್ಲಿ ಇರ್ತಾರೆ ಎನ್ನುವ ಪ್ರಶ್ನೆಗಳು ಮೂಡುವುದು ಸಹಜ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಯಶ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತಾದರೂ, ಅವರು ಇಂಡಿಯನ್ 2 ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲಿಗೆ ಯಶ್ ಮುಂದಿನ ಸಿನಿಮಾಗೆ ಶಂಕರ್ ನಿರ್ದೇಶಕರಲ್ಲ ಎನ್ನುವುದು ಸಾಬೀತಾಗಿದೆ.

 Yash 19 Update : Who is Director of Yash 19, Actress, Casting Details

ಮತ್ತೊಂದು ಮೂಲಗಳ ಪ್ರಕಾರ ಯಶ್‌ ಮುಂದಿನ ಸಿನಿಮಾವನ್ನು ಮಹಿಳಾ ನಿರ್ದೇಶಕರು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಮಲಯಾಳಂ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಯಶ್ ಮುಂದಿನ ಸಿನಿಮಾ ನಿರ್ದೇಶಿಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿವೆ.

1986ರಲ್ಲಿ ನಟಿಯಾಗಿ ಮಲಯಾಳಂ ಸಿನಿಮಾ ರಂಗವನ್ನು ಪ್ರವೇಶ ಮಾಡಿದ ಗೀತು ಮೋಹನ್‌ದಾಸ್ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2014ರಲ್ಲಿ ಲಿಯಾರ್ಸ್ ಡೈಸ್ ಎನ್ನುವ ಹಿಂದಿ ಚಿತ್ರವನ್ನು ನಿರ್ದೇಶಿಸಿದ್ದರು, ಈ ಚಿತ್ರಕ್ಕೆ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿದೆ. 2019ರಲ್ಲಿ 'ಮೂತೊನ್' ಚಿತ್ರವನ್ನು ನಿರ್ದೇಶಿಸಿದ್ದರು. ಈ ಸಿನಿಮಾ ಕೂಡ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಡಾಲಿ ಧನಂಜಯ್ ನಟನೆ?

ಇನ್ನು ಯಶ್ ಸಿನಿಮಾದಲ್ಲಿ ಡಾಲಿ ಧನಂಜಯ್ ಕೂಡ ಇರ್ತಾರ ಎನ್ನುವ ಕುತೂಹಲ ಇದೆ. ಜೊತೆಗೆ ನವಾಜುದ್ದಿನ್ ಸಿದ್ದಿಕಿ ಕೂಡ ಅಭಿನಯಿಸುವ ಸಾಧ್ಯತೆ ಇದೆ. ಇನ್ನು ನಾಯಕಿಯಾಗಿ ಸಂಯುಕ್ತ ಮೆನನ್ ಕಾಣಿಸಿಕೊಳ್ತಾರ ಎನ್ನುವ ಪ್ರಶ್ನೆ ಕೂಡ ಇದೆ. ಐಎಂಡಿಬಿ.ಕಾಂ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ. ಯಶ್ ಮುಂದಿನ ಸಿನಿಮಾಗೆ ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದು, ನವಾಜುದ್ದಿನ್ ಸಿದ್ಧಿಕಿ, ಡಾಲಿ ಧನಂಜಯ್ ಜೊತೆಗೆ ಮಲಯಾಳಂ ನಟ ಶೈನ್ ಟಾಮ್ ಚಾಕೊ ಕೂಡ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದೆ.

ಎಲ್ಲಾ ಪ್ರಶ್ನೆಗಳಿಗೂ ಡಿಸೆಂಬರ್ 8ರಂದು ಉತ್ತರ

ಇನ್ನು ಎಲ್ಲಾ ಪ್ರಶ್ನೆಗಳಿಗೂ ಡಿಸೆಂಬರ್ 8ರಂದು ಉತ್ತರ ಸಿಗಲಿದೆ. ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿರುವುದು ಖಚಿತವಾಗಿದೆ. ದುಬಾರಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ ಎಂದು ಹೇಳಲಾಗಿದೆ.

ಕೆಜಿಎಫ್ 2 ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಕೋಟ್ಯಂತ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ಯಶ್, ಮುಂದಿನ ಸಿನಿಮಾ ಬಗ್ಗೆ ಬಾರಿ ತಲೆ ಕೆಡಿಸಿಕೊಂಡಿದ್ದರು. ಸಾಕಷ್ಟು ತಯಾರಿ ಮಾಡಿಕೊಂಡೇ ಮುಂದಿನ ಸಿನಿಮಾ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ.

ಅಭಿಮಾನಿಗಳ ನಿರೀಕ್ಷೆ ಡಬಲ್ ಆಗಿದ್ದು, ಅವರ ಚಿತ್ರದ ಬಗ್ಗೆ ಹಲವು ಪ್ರಶ್ನೆಗಳಿಗೆ ಟೈಟಲ್ ಲಾಂಚ್ ಮಾಡಿದ ಬಳಿಕ ಉತ್ತರ ಸಿಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+