Yash 19: ಗೀತು ಮೋಹನ್‌ದಾಸ್ ನಿರ್ದೇಶನ? ಮೂವರು ನಾಯಕಿಯರು!

ಕೆಜಿಎಫ್ ಚಿತ್ರಗಳ ಭರ್ಜರಿ ಯಶಸ್ಸಿನ ಬಳಿಕ ಯಶ್ ಮುಂದಿನ ಚಿತ್ರಕ್ಕೆ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಯಶ್ 19 ಸಿನಿಮಾ ಯಾವಾಗ ಎನ್ನುವ ಯಶ್ ಅಭಿಮಾನಿಗಳ ದೀರ್ಘಕಾಲದ ಪ್ರಶ್ನೆಗೆ ಉತ್ತರ ನೀಡುವ ಸಮಯ ಬಂದಿದೆ. ಡಿಸೆಂಬರ್ 8ರಂದು ಯಶ್ ಹೊಸ ಸಿನಿಮಾದ ಟೈಟಲ್ ಘೋಷಣೆಯಾಗಲಿದ್ದು, ಒಂದಷ್ಟು ಮಾಹಿತಿ ಸಿಗಲಿದೆ.

ಕೆಜಿಎಫ್ 2 ಸಿನಿಮಾ ವಿಶ್ವಮಟ್ಟದಲ್ಲಿ ಯಶಸ್ಸು ಕಂಡ ನಂತರ ಯಶ್ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಲು ಯಶ್ ಸಾಕಷ್ಟು ಸಮಯ ತೆಗೆದುಕೊಂಡಿದ್ದು, ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ.

Yash 19: Geetu Mohandas Directorial with Three Leading Ladies, Filming Soon

ಯಶ್ ಸಿನಿಮಾ ಘೋಷಣೆಗೂ ಮುನ್ನವೇ ಹಲವು ಸುದ್ದಿಗಳು ಹರಿದಾಡುತ್ತಿವೆ. ಕೆಲವು ಮೂಲಗಳ ಪ್ರಕಾರ ಚಿತ್ರಕ್ಕೆ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುವುದು ಖಚಿತವಾಗಿದೆ. ಗೀತು ಮೋಹನ್‌ದಾಸ್ ಮಲಯಾಳಂ, ಹಿಂದಿ ಸಿನಿಮಾ ನಿರ್ದೇಶನ ಮಾಡಿದ್ದು, ರಾಷ್ಟ್ರಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ.

ಮೂವರು ನಾಯಕಿಯರು?

ಪಿಂಕ್‌ವಿಲ್ಲಾ ಎನ್ನುವ ವೆಬ್‌ಸೈಟ್‌ ವರದಿ ಮಾಡಿರುವ ಪ್ರಕಾರ, ಯಶ್ ಮುಂದಿನ ಸಿನಿಮಾದಲ್ಲಿ ಮೂವರು ನಟಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈಗಾಗಲೇ ತಾರಾ ಬಳಗವನ್ನು ಫೈನಲ್ ಮಾಡಲಾಗಿದ್ದು, ಅದ್ದೂರಿ ತಾರಾಗಣ ಇರಲಿದೆ ಎಂದು ಹೇಳಲಾಗಿದೆ.

ಯಶ್ 19 ಚಿತ್ರದಲ್ಲಿ ಪ್ರಮುಖ ಪಾತ್ರಗಳಿಗಾಗಿ 3 ನಟಿಯರು ಬರುತ್ತಾರೆ ಎಂದು ವರದಿಯಾಗಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಯಶ್ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದೆ. ಇನ್ನೂ ಕೆಲವು ವದಂತಿಗಳ ಪ್ರಕಾರ ಸಾಯಿ ಪಲ್ಲವಿ ಚಿತ್ರದ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ.

ಒಂದು ವರ್ಷದಿಂದ ಸತತ ಕೆಲಸ

ಯಶ್ ಭಾರಿ ಯಶಸ್ಸಿನ ನಂತರ ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ಗೀತು ಮೋಹನ್‌ದಾಸ್ ಆಯ್ಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ದೊಡ್ಡ ನಿರ್ದೇಶಕ ಹಿಂದೆ ಬೀಳುವ ಬದಲು ಉತ್ತಮ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕಳೆದ ಒಂದು ವರ್ಷದಿಂದ ಎಲ್ಲಾ ವಿಚಾರಗಳಲ್ಲಿ ಗೀತು ಮೋಹನ್‌ದಾಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಈಗ ಅಂತಿಮವಾಗಿ ಚಿತ್ರದ ಶೂಟಿಂಗ್‌ಗೆ ಸಜ್ಜಾಗಿದ್ದಾರೆ.

ಹಾಲಿವುಡ್ ಮಾದರಿಯ ಆಕ್ಷನ್

ಯಶ್ 19 ಸಿನಿಮಾ ಆಕ್ಷನ್ ಥ್ರಿಲ್ಲರ್ ಆಗಿರುವ ಕಾರಣ, ಯಶ್ ಇದಕ್ಕಾಗಿ ಭಾರಿ ಸಿದ್ದತೆ ಮಾಡಿಕೊಂಡಿದ್ದಾರೆ. ಹಾಲಿವುಡ್ ತಂತ್ರಜ್ಞರು, ನಿರ್ದೇಶಕರನ್ನು ಭೇಟಿ ಮಾಡಿದ್ದಾರೆ, ಆಕ್ಷನ್ ದೃಶ್ಯಗಳಿಗಾಗಿ ಅಮೆರಿಕದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಭಾರತ ಚಿತ್ರರಂಗದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಆಕ್ಷನ್ ದೃಶ್ಯಗಳನ್ನು ತೆರೆ ಮೇಲೆ ತರಲು ಸಿದ್ದತೆ ಮಾಡಿದ್ದಾರೆ. ಇನ್ನು ಇದುವರೆಗೂ ಯಾವ ಸಿನಿಮಾ ಕೂಡ ಚಿತ್ರೀಕರಣ ಮಾಡದ ಸ್ಥಳಗಳನ್ನು ಈ ಚಿತ್ರಕ್ಕಾಗಿ ಹುಡುಕಾಟ ನಡೆಸಲಾಗಿದೆ. ಯಶ್, ಗೀತು ಮೋಹನ್‌ದಾಸ್ ಈಗಾಗಲೇ ಚಿತ್ರೀಕರಣ ಸ್ಥಳವನ್ನು ಫೈನಲ್ ಮಾಡಿದ್ದಾರೆ ಎಂದು ವರದಿಯಾಗಿದೆ.

ಚಿತ್ರದ ಟೈಟಲ್ ಘೋಷಣೆಯಾದ ಬಳಿಕ ಡಿಸೆಂಬರ್ ತಿಂಗಳಿನಲ್ಲೇ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದ್ದು, ಬಹುತೇಕ 2025ರಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದು ವರದಿಗಳು ಹೇಳಿವೆ.

ಗೀತು ಮೆನನ್ ಲೈಯರ್ಸ್ ಡೈಸ್ ಮತ್ತು ದಿ ಎಲ್ಡರ್ ಒನ್ ನಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ, ಭಾರತದಲ್ಲಿ 2 ರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ವಿಶ್ವದಾದ್ಯಂತ 6 ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+