ಯಮುನಾ ಶ್ರೀನಿಧಿ V/S ಗೌತಮಿ ಜಾದವ್ ಕನ್ನಡ ಜಟಾಪಟಿ: ಯಾವುದು ಸತ್ಯ? ಯಾವುದು ಸುಳ್ಳು?
ಬಿಗ್ ಬಾಸ್ ಮನೆಯೊಳಗೆ ಇರುವ ನಟಿ ಗೌತಮಿ ಜಾದವ್ ಕನ್ನಡವನ್ನು ನಿರ್ಲಕ್ಷಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನ ನಾಡಗೀತೆ ಹಾಡಿಲ್ಲ. ಕನ್ನಡದಲ್ಲಿ ಇರುವ ಟಾಸ್ಕ್ ಪುಸ್ತಕ ಓದುವುದಿಲ್ಲ. ಕರ್ನಾಟಕದಲ್ಲಿ ಅವಕಾಶ ಬೇಕು? ಕನ್ನಡ ಬೇಡವಾ ಎನ್ನುವ ಹಿರಿಯ ನಟಿ ಯಮುನಾ ಶ್ರೀನಿಧಿ ಪ್ರಶ್ನೆ ಹಾಗೂ ಆರೋಪಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ನಟಿ ಗೌತಮಿ ಜಾದವ್ ಉತ್ತರ ನೀಡಿದ್ದಾರೆ. ಅಲ್ಲದೇ ಕನ್ನಡದ ಬಗ್ಗೆ ತಮಗಿರುವ ಅಭಿಮಾನವನ್ನು ಸ್ಪಷ್ಟಪಡಿಸಿದ್ದಾರೆ.
ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ನಾನು ಬಿಗ್ ಬಾಸ್ ಮನೆಯಲ್ಲಿ ನೂರ ಹನ್ನೊಂದು ದಿನ ಕನ್ನಡವನ್ನೇ ಮಾತನಾಡಿದ್ದೇನೆ. ಕನ್ನಡ ರಾಜ್ಯೋತ್ಸವ ದಿನ ನಾನು ನಾಡಗೀತೆ ಹಾಡಿದ್ದೇನೆ ಎನ್ನುವ ವಿಡಿಯೋ ಕೂಡ ಬಂದಿದೆ. ನನಗೆ ಎಲ್ಲೆಲ್ಲಿ ಗೊತ್ತಿತ್ತು ಅಲ್ಲಲ್ಲಿ ನಾಡಗೀತೆ ಹಾಡಿದ್ದೇನೆ. ಗೊತ್ತಿಲ್ಲದೇ ಇರುವ ಜಾಗದಲ್ಲಿ ಸುಮ್ಮನಿದ್ದೆ. ಈಗ ನಮಗೆ ಯಾವುದೋ ಒಂದು ವಿಚಾರ ಗೊತ್ತು ಅಂದರೆ ಮಾತ್ರ ಮಾಡಬೇಕಾಗುತ್ತದೆ. ಗೊತ್ತಿಲ್ಲದೇ ಅದನ್ನು ಪ್ರಯತ್ನಿಸಿ ತಪ್ಪು ಮಾಡಬಾರದು'.

'ಅದರಲ್ಲೂ ನಾಡಗೀತೆ ಆಗಿರುವುದರಿಂದ ಗೊತ್ತಿಲ್ಲದೇ ತಪ್ಪು ತಪ್ಪು ಹಾಡುವುದಕ್ಕಿಂತ ನನಗೆ ಎಲ್ಲೆಲ್ಲಿ ಗೊತ್ತಿತ್ತು ಅಲ್ಲಲ್ಲಿ ಹಾಡಿದ್ದೇನೆ. ಯಮುನಾ ಅವರು ಯಾಕೆ ಹೀಗೆ ಹೇಳಿದ್ದಾರೆ ಗೊತ್ತಿಲ್ಲ. ಅವರು ಸರಿಯಾಗಿ ನೋಡಿಲ್ಲ ಅನಿಸುತ್ತದೆ. ನಾನು ಕುಳಿತು ಆ ಎಪಿಸೋಡ್ ನೋಡುತ್ತೇನೆ. ನನ್ನ ಪ್ರಕಾರ ನಾನು ನಾಡಗೀತೆಯನ್ನು ಮಧ್ಯೆ ಮಧ್ಯೆ ಹಾಡಿದ್ದೇನೆ' ಎಂದರು.

'ನಾನು ಒಪ್ಪಿಕೊಳ್ಳುತ್ತೇನೆ ನಾಡಗೀತೆ ಪೂರ್ತಿಯಾಗಿ ನನಗೆ ಹಾಡಲು ಬರುವುದಿಲ್ಲ. ಹಾಗಂತ ಕನ್ನಡ ಬರುವುದಿಲ್ಲ ಅಂತಾ ಅಲ್ಲ. ಕನ್ನಡವನ್ನು ಪ್ರೀತಿಸಲ್ಲ ಅಂತಲ್ಲ. ನಾನು ಕನ್ನಡದ ಪ್ರಾಜೆಕ್ಟ್‌ಗಳನ್ನೇ ಮಾಡಿಕೊಂಡು ಇಲ್ಲಿಯವರೆಗೂ ಬಂದಿರುವುದು. ಎಷ್ಟೋ ಮನಸ್ಸುಗಳಿಗೆ ತಲುಪಿರುವುದು. ಬಿಗ್ ಬಾಸ್ ಕನ್ನಡ ಸೀಜನ್ 11 ಪೂರ್ತಿ ಕನ್ನಡ ಮಾತನಾಡಿದ್ದೇನೆ. ಕನ್ನಡದ ಬಗ್ಗೆ ಪ್ರೀತಿ ಇದೆ. ಅದನ್ನು ಹೇಳಿಕೊಂಡು ಏನೋ ಮಾಡಬೇಕು ಎನ್ನುವುದು ನನಗಿಲ್ಲ. ಇಂತಹ ವಿಚಾರದಲ್ಲಿ ಬೇರೆಯವನ್ನು ದೂಷಿಸುವುದು ತಪ್ಪಾಗುತ್ತದೆ. ಯಮುನಾ ಅವರಿಗೆ ನನ್ನ ಮೇಲೆ ಸಣ್ಣ ಕೋಪ ಯಾಕೆ ಅಂತಾ ಗೊತ್ತಿಲ್ಲ' ಎಂದು ನಟಿ ಗೌತಮಿ ಜಾದವ್ ಹೇಳಿದ್ದಾರೆ.












Click it and Unblock the Notifications