Rashmika Mandanna: ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಗುಡ್ ನ್ಯೂಸ್: ಮುಂದಿನ ವರ್ಷ ಮದುವೆ, ಹುಡುಗ ಯಾರು ಗೊತ್ತಾ?
ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಗಲಿದೆ. ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ನಟಿ ರಶ್ಮಿಕಾ ಮಂದಣ್ಣ ಅವರು ಸ್ಯಾಂಡಲ್ವುಡ್ನಿಂದ ಟಾಲಿವುಡ್, ಟಾಲಿವುಡ್ನಿಂದ ಬಾಲಿವುಡ್ ನಲ್ಲಿ ನಟಿಸಿದ್ದಾರೆ.
ಕನ್ನಡದ ಕಿರಿಕ್ ಪಾರ್ಟಿ ಎಂಬ ಒಂದೇ ಒಂದು ಚಿತ್ರದ ಅತ್ಯದ್ಭುತವಾದ ಗೆಲುವು ರಶ್ಮಿಕಾ ಮಂದಣ್ಣ ಅವರು ಬಹುಭಾಷೆಯಲ್ಲಿ ಸರಣಿ ಸಿನಿಮಾಗಳನ್ನ ನೀಡುತ್ತಾ ಬಂದಿರುವ ನಟಿ ರಶ್ಮಿಕಾ ಮಂದಣ್ಣ ಅವರು ಸಖತ್ ಬ್ಯುಸಿಯಾಗಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿರೋ ನಟಿ ಕೆಲವು ವರ್ಷಗಳಿಂದ ವಿಜಯ ದೇವರಕೊಂಡ ಜೊತೆಗೆ ಬಹಳ ಆತ್ಮೀಯರಾಗಿ ಕಾಣಿಸಿಕೊಂಡಿದ್ದಾರೆ.

ಇನ್ನೂ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಅವರು ಡೇಟಿಂಗ್ ಮಾಡುತ್ತಿದ್ದಾರೆ. ಇವರು ಜೊತೆಯಾಗಿ ವಿದೇಶದಲ್ಲಿ ತಿರುಗಾಡಿದ್ದಾರೆ ಎಂಬ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವುದು ಹೊಸತೇನಲ್ಲ. ಅಲ್ಲದೇ ದೀಪಾವಳಿ ಹಬ್ಬವನ್ನು ರಶ್ಮಿಕಾ ಮಂದಣ್ಣ ಅವರಿ ವಿಜಯ ದೇವರಕೊಂಡ ಅವರ ಜೊತೆ ಆಚರಿಸಿಕೊಂಡಿದ್ದರು ಎನ್ನಲಾಗಿತ್ತು. ಇದರ ನಡುವೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಮದುವೆಯಾಗುವುದು ನಿಜವಂತೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ರಶ್ಮಿಕಾ ಮಂದಣ್ಣ ಅವರ ಮದುವೆಯ ಕುರಿತು ಸಂಖ್ಯಾಶಾಸ್ತ್ರಜ್ಞೆ ಮೀತಾ ಅವರು ನ್ಯೂಸ್ ಫಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಮದುವೆಯಾಗುತ್ತಾ ಎನ್ನುವ ವಿಚಾರದ ಕುರಿತು ಮಾತನಾಡಿರುವ ಮೀತಾ ಅವರ ಜನುಮದಿನದ ನಂಬರ್ ಆರು ನಮ್ಮ ಸಂಖ್ಯಾಶಾಸ್ತ್ರದ ಪ್ರಕಾರ ಈ ವರ್ಷ ಆರನೇ ನಂಬರ್ ಚೆನ್ನಾಗಿಲ್ಲ. ಆರನೇ ತಾರೀಖು ಆರನೇ ತಿಂಗಳು ಅಷ್ಟೊಂದು ಅದೃಷ್ಟವನ್ನು ತಂದು ಕೊಟ್ಟಿಲ್ಲ. ಆದರೆ ಬರುವ ವರ್ಷ ಆರನೇ ತಾರೀಖು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗದಿಂದಲೇ ಅವರು ತಮ್ಮ ವೃತ್ತಿಯನ್ನು ಶುರು ಮಾಡಿ, ಇಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಆ ನಂತರ ಮುರಿದುಕೊಂಡು ಅಲ್ಲಿ ಹೋದವರು. ಅವರ ವ್ಯೆಯಕ್ತಿಕ ಬದುಕಿನ ಬಗ್ಗೆ ನಕಾರಾತ್ಮಕವಾದ ಮಾತುಗಳನ್ನಾಡಲು ನನಗೆ ಇಷ್ಟ ಇಲ್ಲ. ಗೊತ್ತಿಲ್ಲ ಮುಂದಿನ ವರ್ಷ ಇಬ್ಬರ ಮದುವೆ ಆಗಬಹುದು ಎಂದು ಹೇಳಿದ್ದಾರೆ.
ಇನ್ನೂ ಪುಷ್ಪ 2 ಚಿತ್ರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ 'ಕಿಸ್ಸಿಕ್' ಐಟಂ ಸಾಂಗ್ ನ ಲಿರಿಕಲ್ ಸಾಂಗ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಜೊತೆ ರಶ್ಮಿಕಾ ಮಂದಣ್ಣ ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಮದುವೆಗೆ ರಶ್ಮಿಕಾ ವೇದಿಕೆಯಲ್ಲಿ ಮಾತನಾಡಿದ್ದಾರೆ. ರಶ್ಮಿಕಾ ಸ್ವಲ್ಪ ಹೊತ್ತು ಯೋಚಿಸಿ ನಂತರ ನಗುತ್ತಲೇ 'ಅವರು ನಿಮಗೆಲ್ಲ ಗೊತ್ತು' ಎಂದು ಸುಳಿವು ನೀಡಿದರು.
ನೀವು ಚಿತ್ರರಂಗದ ಯಾರನ್ನಾದರೂ ಮದುವೆಯಾಗುತ್ತೀರಾ? ಅಥವಾ ಹೊರಗಿನವರಾ? ಎಂದು ಕಾರ್ಯಕ್ರಮದ ವೇದಿಕೆಯಲ್ಲಿಯೇ ರಶ್ಮಿಕಾ ಅವರಿಗೆ ಪ್ರಶ್ನೆಯನ್ನ ಕೇಳಲಾಗಿತ್ತು. ಈ ವೇಳೆ ಅದು ಎಲ್ಲರಿಗೂ ತಿಳಿದಿರುವ ವಿಷಯ' ಎಂದು ರಶ್ಮಿಕಾ ನಸುನಕ್ಕರು. ʻನಮಗೆ ಗೊತ್ತಿಲ್ಲ. ಒಂದು ಸಣ್ಣ ಸುಳಿವು ಕೊಡಿʼ ಎಂದು ಮತ್ತೆ ಪ್ರಶ್ನಿಸಿದಾಗ.. ಹಾಗೆ ಹೇಳುವುದು ಬೇಡ. ನಾನೇ ಖುದ್ದಾಗಿ ಒಂದು ದಿನ ಎಲ್ಲವನ್ನೂ ಹೇಳುತ್ತೇನೆ ಎಂದು ನಗುತ್ತಲೇ ರಶ್ಮಿಕಾ ತಿಳಿಸಿದರು.












Click it and Unblock the Notifications