ಮಜಾ ಟಾಕೀಸ್ ಶೋ ಅಂತ್ಯವಾಗಿದ್ದೇಕೆ: ನಟ ಸೃಜನ್ ಲೋಕೇಶ್ ಹೇಳಿದ್ದೇನು ?
Majaa Talkies Comedy Show: ಕನ್ನಡ ಪ್ರಮುಖ ಕಾಮಿಡಿ ಶೋಗಳಲ್ಲಿ ಒಂದಾಗಿರುವ ಹಾಗೂ ಸುದೀರ್ಘ 10 ವರ್ಷಗಳಿಂದ ಕನ್ನಡಿಗರನ್ನು ರಂಜಿಸುತ್ತಿರುವ ಮಜಾ ಟಾಕೀಸ್ ಶೋ ಅಂತ್ಯವಾಗುತ್ತಿದೆ. ಮಜಾ ಟಾಕೀಸ್ ಶೋ ಕನ್ನಡದಲ್ಲಿ ಹೊಸ ಹಾಗೂ ವಿನೂತನ ಮಾದರಿಯ ಕಾಮಿಡಿ ಶೋ ಆಗಿತ್ತು. ಕಳೆದ ಒಂದು ದಶಕದ ಅವಧಿಯಿಂದಲೂ ಈ ಶೋ ಕನ್ನಡಿಗರನ್ನು ರಂಜಿಸಿಕೊಂಡು ಬರುತ್ತಿದೆ. ಅಪರ್ಣಾ ಅವರಂತಹ ನಟಿ ಹಾಗೂ ನಿರೂಪಕಿ ಈ ಕಾರ್ಯಕ್ರಮಕ್ಕೆ ಜೀವ ತುಂಬಿದ್ದರು. ಆದರೆ, ಈಚೆಗೆ ಹೊಸ ಸೀಸನ್ ಪ್ರಾರಂಭವಾದ ಬೆನ್ನಲ್ಲೇ ಮಜಾ ಟಾಕೀಸ್ ಶೋ ಅಂತ್ಯವಾಗುತ್ತಿದೆ. ಇದರೊಂದಿಗೆ ದಶಕಗಳ ಸಂಭ್ರಮ ಮುಕ್ತಾಯವಾಗುತ್ತಿದೆ. ಈ ಬಗ್ಗೆ ನಟ ಸೃಜನ್ ಲೋಕೇಶ್ ಅವರು ಮಾತನಾಡಿದ್ದಾರೆ. ಅಲ್ಲದೇ ಇದರೊಂದಿಗೆ ಗುಡ್‌ನ್ಯೂಸ್ ವೊಂದನ್ನೂ ಅವರು ಕೊಟ್ಟಿದ್ದಾರೆ. ಇದರ ಎಲ್ಲಾ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ನಟ ಸೃಜನ್ ಲೋಕೇಶ್ ಅವರು ನಡೆಸಿಕೊಡುತ್ತಿರುವ ಕನ್ನಡದ ಪ್ರಮುಖ ಶೋ ಮಜಾ ಟಾಕೀಸ್. ಕಲರ್ಸ್ ಕನ್ನಡದಲ್ಲಿ ಈ ಶೋ ಮೂಡಿ ಬರುತ್ತಿತ್ತು. ಆದರೆ, ಇದೀಗ ಏಕಾಏಕಿ ಶೋ ಮುಕ್ತಾಯವಾಗುತ್ತಿದೆ. ಇದು ಈ ಕಾರ್ಯಕ್ರಮ ವೀಕ್ಷಕರಿಗೆ ಬೇಸರ ಮೂಡಿಸಿದೆ. 10 ವರ್ಷಗಳಷ್ಟು ದಾಖಲೆ ಇರುವ ಈ ಶೋ ಅಪಾರ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಮಜಾ ಟಾಕೀಸ್ ಶೋ ಅಂತ್ಯವಾಗಲಿದೆ ಅಂತ ಸೃಜನ್ ಲೋಕೇಶ್ ಅವರೇ ಹೇಳಿದ್ದಾರೆ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಕಾರ್ಯಕ್ರಮ ಬರುತ್ತಿತ್ತು. ಇದೀಗ ಈ ಕಲರ್ಸ್ ಕನ್ನಡ ಲೈವ್‌ನಲ್ಲಿ ಸೃಜನ್ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಪ್ರೀತಿಯ ಕನ್ನಡಿಗರಿಗೆ ತಲೆಬಾಗಿ ಧನ್ಯವಾದ ಸೃಜನ್!
ಪ್ರೀತಿಯ ಕನ್ನಡಿಗರಿಗೆ ತಲೆಬಾಗಿ ಧನ್ಯವಾದ ಹೇಳುತ್ತೇನೆ ಎಂದು ಸೃಜನ್ ಲೋಕೇಶ್ ಅವರು ಹೇಳಿದ್ದಾರೆ. ಇದರೊಂದಿಗೆ ಮತ್ತೊಂದು ಗುಡ್‌ನ್ಯೂಸ್ ಅನ್ನೂ ಅವರು ಕೊಟ್ಟಿದ್ದಾರೆ. ಪ್ರೀತಿಯ ಕನ್ನಡಿಗರಿಗೆ ನಾನು ತಲೆಬಾಗಿ ಧನ್ಯವಾದ ಹೇಳುತ್ತೇನೆ. ನೀವಿಲ್ಲದೆ ನಾವು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಹೌದು ನಾವು ಮಜಾ ಟಾಕೀಸ್ ಕಾರ್ಯಕ್ರಮವನ್ನು ಮುಕ್ತಾಯ ಮಾಡುತ್ತಿದ್ದೇವೆ ಅಂತ ಸೃಜನ್ ಹೇಳಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ನಾವು ಒಳ್ಳೆಯ ಕಾರ್ಯಕ್ರಮಗಳ ಮೂಲಕ ನಿಮ್ಮುಂದೆ ಬರಲಿದ್ದೇವೆ. ಅಲ್ಲದೇ ಮುಂದುವರಿದು, ಸಿನಿಮಾ ಬಿಡುಗಡೆಯ ಬಗ್ಗೆ ಮಾತನಾಡಿದ್ದಾರೆ. ಜಿಎಸ್‌ಟಿ ಸಿನಿಮಾ ಇಷ್ಟರಲ್ಲೇ ಬಿಡುಗಡೆ ಆಗಲಿದೆ ಎನ್ನುವ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ದಶಕಗಳಿಂದ ನಡೆದುಕೊಂಡು ಬಂದಿದ್ದ ಕಾರ್ಯಕ್ರಮ!
ಇನ್ನು ಮಜಾ ಟಾಕೀಸ್ ಶೋ ಕಳೆದ ಒಂದು ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಇಂದ್ರಜಿತ್ ಲಂಕೇಶ್, ಯೋಗರಾಜ್ ಭಟ್ ಹಾಗೂ ರಜನಿ ಪ್ರಮುಖವಾಗಿದ್ದರು. ಅವರೊಂದಿಗೆ ಅಪರ್ಣಾ, ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್, ತರಂಗ ವಿಶ್ವ, ನವೀನ್ ಪಡೀಲ್, ಪವನ್, ವಿ. ಮನೋಹರ್, ಮಿಕ್ರಿ ದಯಾನಂದ್, ಮಿಮಿಕ್ರಿ ಗೋಪಿ ಹಾಗೂ ರಾಘವೇಂದ್ರ ಅವರು ಸೇರಿದಂತೆ ಹಲವು ಕಲಾವಿದರು ಈ ಶೋನಲ್ಲಿ ಪಾಲ್ಗೊಂಡಿದ್ದರು. ಈ ಶೋಗೆ ಜೀವ ತುಂಬಿದ್ದರು.












Click it and Unblock the Notifications