Sudeep: ಕಿಚ್ಚ ಸುದೀಪ್ ಡಾನ್ಸ್ ಮಾಡೋದನ್ನು ಬಿಟ್ಟಿದ್ಯಾಕೆ?: ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ
ಇತ್ತೀಚಿಗಿನ ಸಿನಿಮಾಗಳಲ್ಲಿ ನಟ ಕಿಚ್ಚ ಸುದೀಪ್ ಯಾಕೆ ಡಾನ್ಸ್ ಮಾಡುವುದಿಲ್ಲ ಎನ್ನುವುದರ ಬಗ್ಗೆ ಸ್ವತಃ ಸುದೀಪ್ ಮಾತನಾಡಿದ್ದಾರೆ. ಅನುಶ್ರೀ ಆ್ಯಂಕರ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, ಡಾನ್ಸ್ ಅನ್ನು ನಾನು ವೈಯಕ್ತಿಕವಾಗಿ ಖುಷಿಯಿಂದ ಮಾಡಲ್ಲ. ಆದರೆ ನಾನು ಕೆಟ್ಟ ಡಾನ್ಸರ್ ಅಂತೂ ಅಲ್ಲ ಎಂದರು.
'ನನಗೆ ಡಾನ್ಸ್ ಮಾಡೋಕೆ ಇಷ್ಟ ಇಲ್ಲ ಅಷ್ಟೇ. ಯಾಕೆಂದರೆ ನಾನು ಡಾನ್ಸ್ ಮಾಡುವ ಹೀರೋಗಳನ್ನು ನೋಡಿದ್ದೇನೆ. ಶಿವಣ್ಣ ಅವರಿಗೆ ಇವತ್ತಿಗೂ ಆರಾಮಾಗಿ ಕುಳಿತುಕೊಳ್ಳಲು ಬಿಡ್ತಿಲ್ಲ. ಇನ್ನು ಅಪ್ಪು ಅವರ ಸಿನಿಮಾಗಳಲ್ಲಿ ನೀವು ನೋಡಬಹುದು ಮೊದಲಿಗೆ ಡಾನ್ಸ್ ಇರಲೇಬೇಕು'.

'ಒಂದು ಸಲ ನಾನು ಅವರ ಹತ್ತಿರನೂ ಮಾತನಾಡಿದ್ದೆ ಚೆನ್ನಾಗಿ ಡಾನ್ಸ್ ಮಾಡ್ತೀರಾ ಅಂತಾ. ಅದಕ್ಕೆ ಅವರು ನೀವು ಮಾಡಲ್ವಾ ಅಂತಾ ಕೇಳಿದರು ಅದಕ್ಕೆ ನಾನು ನನ್ನ ಜಂಗಲ್ ಮೇ ಸಿಂಗಲ್ ಶೇರ್ ಹಾಡು ನೋಡಿ ನಡೆದುಕೊಂಡು ಹೋಗಿನೇ ಮುಗಿಸಿದ್ದೇನೆ ಅಂತಾ ಹೇಳಿದೆ. ಅಂದು ನನ್ನ ನಿರ್ಧಾರ ಇನ್ನೂ ಸ್ಟ್ರಾಂಗ್ ಆಯ್ತು'.
'ನಮ್ಮ ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್ ಕುಮಾರ್ ಅವರು ಅದ್ಭುತವಾಗಿ ಡಾನ್ಸ್ ಮಾಡಿಲ್ಲ. ವಿಷ್ಣು ವರ್ಧನ್ ಸರ್ ಅವರು ಮಾಡಿಲ್ಲ. ಅಂಬರೀಷ್ ಅಣ್ಣ ಅವರು ಮಾಡಿಲ್ಲ. ಅನಂತ್ ನಾಗ್ ಅವರಂತೂ ಮಾಡೇ ಇಲ್ಲ. ಇಷ್ಟು ಹಿರಿಯವರೇ ಮಾಡಿಲ್ಲ ಅಂದ ಮೇಲೆ ನಾನ್ಯಾಕೆ ಮಾಡಬೇಕು. ಹಿರಿಯರು ಏನು ಹೇಳಿಕೊಡುತ್ತಾರೋ ನಾನು ಅದನ್ನು ಮಾಡುತ್ತೇನೆ. ಅವರ ರೀತಿಯೇ ನಡೆದುಕೊಂಡು ಹೋಗುತ್ತಿದ್ದೇನೆ' ಎಂದು ಸುದೀಪ್ಹೇಳಿದರು.

'ಮೊದಲು ಸಿನಿಮಾದಲ್ಲಿ ಡಾನ್ಸ್ ಮಾಡಲು ಬೇರೆ ಹೀರೋಗಳ ಸಿನಿಮಾ ತೋರಿಸಿ ಸರ್ ನೋಡಿ ಅವರೆಲ್ಲಾ ಡಾನ್ಸ್ ಮಾಡಿ ಶೋ ಹೌಸ್ ಫುಲ್ ಆಗುತ್ತಿದೆ ಅನ್ನುತ್ತಿದ್ದರು. ಆಗ ನಾನು ಹೌದಾ..ನಾನು ಮಾಡ್ತೀನಿ ಅಂತಾ ಮಾಡುತ್ತಿದೆ. ಮೊದಲೆಲ್ಲಾ ಅವರು ತೋರಿಸಿ ಇವರನ್ನು ಒಪ್ಪಿಸೋದು, ಇವರನ್ನು ತೋರಿಸಿ ಅವರನ್ನು ಒಪ್ಪಿಸುವುದು ನಡೆಯುತ್ತಿತ್ತು' ಎಂದರು.
'ಈ ಹಿಂದೆ ಒಂದು ದೊಡ್ಡ ನಾಯಕನ ದೊಡ್ಡ ಸಿನಿಮಾಕ್ಕೆ ನಮ್ಮನ್ನು ಕರೆದಿದ್ದರು. ನಾವೆಲ್ಲಾ ಸಹ ನಟರಾಗಿದ್ದೇವು. ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾ. ನಮ್ಮದೆಲ್ಲಾ ಅವಶ್ಯಕತೆ ಇದೆ ಅಂತಾ ರಾಮ್ ಚರಣ್ ಫೋನ್ ಮಾಡಿದ್ದರು. ತಂದೆಗೋಸ್ಕರ ಗಿಫ್ಟ್ ಮಾಡಿದ ಸಿನಿಮಾ ಅಂತಾ ನಾವೆಲ್ಲಾ ಹೋದೆವು. ಒಂದು ಊರಿಗೆ ಶೂಟಿಂಗ್‌ಗೆ ಹೋಗಿದ್ದೇವು. ಚಿರಂಜೀವಿ ಸರ್ ನಮ್ಮ ಮುಂದೆ ಇದ್ದರು ಅವರಿಗೂ ವಿಜಯ್ ಸೇತುಪತಿ ಅವರಿಗೂ ಮಾತಾಗುತ್ತಿತ್ತು. ಆ ಶೂಟಿಂಗ್ ಸೀನ್ ವಿವರಿಸಿದ ಕಿಚ್ಚ ಸುದೀಪ್ ಅಂದು ನಾವೆಲ್ಲಾ ಸೆಟ್ ಪ್ರಾಪರ್ಟಿಗಳಾಗಿದ್ದೇವು. ನನ್ನ ಜೊತೆಗೆ ಬಂದ ನಟರು ಅವರ ನಟನೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರು. ಆದರೆ ನನಗೆ ಕ್ಯಾಮರಾ ನೋಡಿನೇ ಗೊತ್ತಾಗಿತ್ತು ನಾವೆಲ್ಲಾ ಔಟ್ ಆಫ್ ಫೋಕಸ್ ಇದ್ದೇವೆ ಅಂತಾ' ಎಂದು ಆ ದಿನ ನಡೆದ ತಮಾಷೆಯ ಬಗ್ಗೆ ವಿವರಿಸಿದರು.












Click it and Unblock the Notifications