ದ್ವಾರಕೀಶ್‌ ಅವರಿಂದ ಖರೀದಿಸಿದ ಮನೆಗೆ ರಿಷಬ್‌ ಶೆಟ್ಟಿ ಈವರೆಗೂ ಕಾಲಿಟ್ಟಿಲ್ಲ ಯಾಕೆ..?

ಬೆಂಗಳೂರು, ಆಗಸ್ಟ್‌ 10: ಕಳೆದ ಮೂರು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ಅವರ ಮನೆಯನ್ನು ಖರೀದಿಸಿದ್ದರು. ಸಾಲದ ಸುಳಿಯಲ್ಲಿ ಸಿಲುಕಿದ್ದ ದ್ವಾರಕೀಶ್‌ ಅವರು ತಮ್ಮ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಮನೆಯನ್ನು ನಟ ರಿಷಬ್‌ ಶೆಟ್ಟಿಗೆ ಮಾರಾಟ ಮಾಡಿದ್ದರು ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ರಿಷಬ್‌ ಶೆಟ್ಟಿ, ದ್ವಾರಕೀಶ್‌ ಅವರ ಮನೆ ಖರೀದಿಸಿರುವುದು ಸತ್ಯವಾದರೂ ಈವರೆಗೂ ಅವರು ಆ ಮನೆಗೆ ಕಾಲಿಟ್ಟಿಲ್ಲವಂತೆ, ಬದಲಿಗೆ ಬಾಡಿಗೆ ಮನೆಯಲ್ಲೇ ಇದ್ದಾರಂತೆ.

ಈ ಬಗ್ಗೆ ರಿಷಬ್‌ ಶೆಟ್ಟಿ ಆಪ್ತ ನಟ ಪ್ರಮೋದ್‌ ಶೆಟ್ಟಿ ಮಾತನಾಡಿದ್ದಾರೆ. ನ್ಯಾಷನಲ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಮೋದ್‌ ಶೆಟ್ಟಿ, 'ಅವನೆಲ್ಲಿಯೂ ಹೇಳಿಕೊಳಲ್ಲ ಆದರೆ ರಿಷಬ್‌ ಶೆಟ್ಟಿ ಬೆಂಗಳೂರಿನಲ್ಲಿ ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾನೆ. ಡುಡ್ಡಿಲ್ಲ ಅಂತಲ್ಲ. ಬಂದಿರುವ ದುಡ್ಡನ್ನು ಅಷ್ಟನ್ನೂ ವಾಪಸ್‌ ಸಿನಿಮಾಗೆ ಹಾಕಿದ್ದಾನೆ. ಅವನಿಗೆ ಬೇರೆ ಯಾವುದೇ ಚಟ ಇಲ್ಲ. ಖರ್ಚುಗಳಿಲ್ಲ ಹೀಗಾಗಿ ಸಿನಿಮಾದಿಂದ ಬಂದಿರುವ ಅಷ್ಟು ಹಣವನ್ನು ಸಿನಿಮಾಗೆ ಹಾಕಿದ್ದಾನೆ. ನಾಲ್ಕು ಸಿನಿಮಾಗಳು ಈಗಾಗಲೇ ಬ್ಯಾನರ್‌ನಲ್ಲಿ ರೆಡಿ ಇದೆ. ಹೀಗಾಗಿ ಸಿನಿಮಾ ದುಡ್ಡನ್ನು ಸಿನಿಮಾಗೆ ಹಾಕಿದ್ದಾನೆ ಎಂದರು.

Why Has Rishabh Shetty Not Gone To The House He Bought From Dwarakish Till Now

ಕಲಾವಿದರಾದ ನಮಗೊಂದು ಹುಚ್ಚು ಇದೆ. ನಾವೇನು ಗಳಿಸುತ್ತೇವೆ, ವಾಪಸ್‌ ಅದನ್ನು ಅದಕ್ಕೆ ಹಾಕುತ್ತೇವೆ. ಮತ್ತೆ ಅದರಿಂದನೇ ವಾಪಸ್‌ ತೆಗೆಯಬೇಕು ಎನ್ನುವ ಹುಚ್ಚಿದೆ. ಯಾಕೆಂದರೆ ಬೇರೆ ನಿರ್ಮಾಪಕರನ್ನು ಹುಡುಕಿಕೊಂಡು ಹೋಗಿ, ಅವರಿಗೆ ಕಥೆ ಹೇಳಿ ಅವರನ್ನು ಒಪ್ಪಿಸಿ, ಹಣ ಹಾಕಿಸುವುದಕ್ಕಿಂತ, ಕಥೆ ತುಂಬಾ ಚೆನ್ನಾಗಿದೆ ನಾನೇ ಮಾಡುತ್ತೇನೆ ಬಾ ಅಂತಾ ಹೇಳಿ, ಈಗ ಎಲ್ಲಾ ದುಡ್ಡು ಅಲ್ಲೇ ಇದೆ. ಸಿನಿಮಾದೊಳಗೆ ಇದೆ. ಅದು ಮುಂದೆ ವಾಪಸ್ ಬರುತ್ತದೆ ಎಂದು ಹೇಳಿದರು.

ಹಿರಿಯ ನಟ ದ್ವಾರಕೀಶ್ ಅವರ ಮನೆಯನ್ನು ರಿಷಬ್‌ ಶೆಟ್ಟಿ ಖರೀದಿ ಮಾಡಿದ ಬಗ್ಗೆ ಸ್ಪಷ್ಟನೆ ಕೊಟ್ಟ ಪ್ರಮೋದ್ ಶೆಟ್ಟಿ, ಮನೆಯನ್ನೇ ಕೊಂಡುಕೊಂಡಾಗ ಅದು ಸ್ವಂತದ್ದು ಆಗುವುದಿಲ್ಲ. ಬೇರೆಯವರು ಇದ್ದಂತಹ ಮನೆ ಅದು. ಅದನ್ನು ಉಳಿದುಕೊಳ್ಳಬೇಕು ಅಂತಾ ತೆಗೆದುಕೊಂಡಿರಲಿಲ್ಲ. ಅವನು ಆ ಮನೆ ತೆಗೆದುಕೊಂಡಿದ್ದೇ ಅನಿವಾರ್ಯ ಕಾರಣಕ್ಕೆ. ಆ ಸಮಯದಲ್ಲಿ ಒಂದಿಷ್ಟು ಗೆಳೆತನ ಅದರಲ್ಲಿ ಯಾರಿಗೋ ಅನಿವಾರ್ಯತೆ. ಆ ಕಮಿಟ್‌ಮೆಂಟ್‌ಗೋಸ್ಕರ ತೆಗೆದುಕೊಂಡ ಮನೆ ಅದು.

Why Has Rishabh Shetty Not Gone To The House He Bought From Dwarakish Till Now

ಆ ಮನೆಗೆ ಇವತ್ತಿನವರೆಗೂ ಅವನು ಹೋಗಿಲ್ಲ. ಅಲ್ಲಿ ಇಲ್ಲ. ಅಲ್ಲಿ ಒಂದು ರಾತ್ರಿನೂ ಉಳಿದುಕೊಂಡಿಲ್ಲ. ಆ ಮನೆ ಇವತ್ತಿನ ವರೆಗೂ ಹಾಗೇ ಖಾಲಿ ಇದೆ. ಅವನು ಆ ಮನೆಯನ್ನು ಉಳಿದುಕೊಳ್ಳಲು ತೆಗೆದುಕೊಂಡಿಲ್ಲ. ಅವನು ಬೆಂಗಳೂರಿನಲ್ಲಿ ಇಂದಿಗೂ ಜಾಗನೂ ತೆಗೆದುಕೊಂಡಿಲ್ಲ. ಮನೆಯನ್ನೂ ಕಟ್ಟಿಲ್ಲ. ಸದ್ಯಕ್ಕೆ ಬಾಡಿಗೆ ಮನೆಯಲ್ಲೇ ಇದ್ದಾನೆ. ಇಷ್ಟು ವರ್ಷನೂ ಬಾಡಿಗೆ ಮನೆಯಲ್ಲೇ ಇದ್ದ. ಈಗ ಸದ್ಯಕ್ಕೆ ಕಾಂತಾರ ಕೆಲಸ ನಡೆಯುತ್ತಿರುವುದರಿಂದ ಕುಂದಾಪುರಕ್ಕೆ ಶಿಫ್ಟ್‌ ಆಗಿದ್ದಾನೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+