Get Updates
Get notified of breaking news, exclusive insights, and must-see stories!

Actress Amulya: ಚಿಕ್ಕ ವಯಸ್ಸಿನಲ್ಲಿಯೇ ನಟಿ ಅಮೂಲ್ಯ ಅಣ್ಣ ಸಾವನ್ನಪ್ಪಿದ್ದೇಕೆ..?

ಸ್ಯಾಂಡಲ್‌ವುಡ್‌ನ ಯುವ ನಿರ್ದೇಶಕ ಹಾಗೂ ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅಸರ್ ವಿಧಿವಶರಾಗಿದ್ದಾರೆ. 42 ವರ್ಷದ ದೀಪಕ್‌ ಅರಸ್‌ ಬಹುಕಾಲದ ಅನಾರೋಗ್ಯದಿಂದ ಮೃತರಾಗಿದ್ದಾರೆ. ಮನಸಾಲಜಿ ಹಾಗೂ ಶುಗರ್ ಫ್ಯಾಕ್ಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದ ದೀಪಕ್‌ ಅರಸ್‌ ಚಿಕ್ಕ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.

ನಿರ್ದೇಶಕ ದೀಪಕ್ ಅಸರ್ ಅವರಿಗೆ ಏನಾಗಿತ್ತು ಎನ್ನುವುದರ ಬಗ್ಗೆ ನಟಿ ಅಮೂಲ್ಯ ಪತಿ ಜಗದೀಶ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

'ಶುಗರ್‌ ಫ್ಯಾಕ್ಟರಿ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಬೇಕು ಎಂದು ಆಸೆ ಪಟ್ಟಿದ್ದರು. ತುಂಬಾ ಶ್ರಮ ವಹಿಸಿ ಆರೋಗ್ಯವನ್ನು ಲೆಕ್ಕಿಸದೇ ಕೆಲಸ ಮಾಡಿದ್ದರು. ಆ ಸಮಯದಲ್ಲೇ ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಮೊದಲಿನಿಂದಲೂ ಸ್ವಲ್ಪ ಕಿಡ್ನಿ ಸಮಸ್ಯೆ ಇತ್ತು. ಇತ್ತೀಚಿಗೆ ಅವರ ಎರಡ ಕಿಡ್ನಿ ಕೂಡ ಫೈಲ್ಯೂರ್ ಆಗಿತ್ತು. ಡಯಾಲಿಸಿಸ್‌ನಲ್ಲಿದ್ದರು' ಎಂದು ಜಗದೀಶ್‌ ವಿವರಿಸಿದ್ದಾರೆ.

Why Actress Amulya Brother Deepak Aras Died At A Young Age

'ಅವರಿಗೆ ಆರೋಗ್ಯದ ಅದೃಷ್ಟ ಕೈ ಹಿಡಿಯಲಿಲ್ಲ. ಡಯಾಲಿಸಿಸ್‌ ಸಮಯದಲ್ಲಿ ಬ್ರೈನ್‌ನಲ್ಲಿ ರಕ್ತಸ್ರಾವವಾಗಿ ಕೋಮಕ್ಕೆ ಜಾರಿದ್ದರು. ಕಳೆದ ಎರಡು ದಿನಗಳಿಂದ ಕೋಮದಲ್ಲಿದ್ದರು. ದುರಾದೃಷ್ಟವಶಾತ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ' ಎಂದರು.

'ಕಿಡ್ನಿ ಟ್ರಾನ್ಸ್‌ಫರ್‌ಮೇಶನ್‌ಗೆ ನೊಂದಣಿ ಮಾಡಲಾಗಿತ್ತು. ಲೈನ್‌ನಲ್ಲಿದ್ದರು. ಆರೋಗ್ಯದ ಅದೃಷ್ಟ ಕೈ ಹಿಡಿದಿದ್ದರೆ ಒಂದೂವರೆ ವರ್ಷದಲ್ಲಿ ಅವರಿಗೆ ಕಿಡ್ನಿ ಟ್ರಾನ್ಸ್‌ಫರ್‌ಮೇಶನ್ ಆಗುತ್ತಿತ್ತೇನೋ. ಒಂದೊಳ್ಳೆ ಸಿನಿಮಾ ಮಾಡಬೇಕು ಅಂತಾ ಯಾವಾಗಲೂ ಹೇಳುತ್ತಿದ್ದರು. ಮುಂದೆ ಇನ್ನೊಂದು ಕಥೆ ನೋಡಬೇಕು ಎಂದು ಹೇಳುತ್ತಿದ್ದರು. ಆಗ ನಾನೇ ಮೊದಲು ಹುಷಾರಾಗಿ ಆರೋಗ್ಯದ ಕಡೆ ಗಮನ ಕೊಡಿ ಅಂತಾ ಹೇಳುತ್ತಿದ್ದೆ.

Why Actress Amulya Brother Deepak Aras Died At A Young Age

ಜೀವನ ಹಾಗೂ ಸಿನಿಮಾ ಬಗ್ಗೆ ಮಹಾತ್ವಾಕಾಂಕ್ಷೆ ಇಟ್ಟುಕೊಂಡಿದ್ದರು. ಅದು ಆಗಲಿಲ್ಲ ಅಂತಾ ತುಂಬಾ ಬೇಜಾರಾಗುತ್ತದೆ. ಅಮೂಲ್ಯ ಮಾತ್ರವಲ್ಲ ಕುಟುಂಬದಲ್ಲಿ ಎಲ್ಲಿರೂ ಇದನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಮನೆಗೆ ಹಿರಿಯ ಮಗ ಅವರು, ಚಿಕ್ಕ ಮಕ್ಕಳಿದ್ದಾರೆ. ಯಾರಿಗಾದರೂ ತುಂಬಾ ಬೇಜಾರು ಆಗಿಯೇ ಆಗುತ್ತದೆ. ಕುಟುಂಬದ ಪ್ರತಿಯೊಬ್ಬರು ಕೂಡ ತುಂಬಾ ನೋವಿನಲ್ಲಿ ಇದ್ದಾರೆ' ಎಂದರು.

'ಅಮೂಲ್ಯ ಅವರು ಚಿತ್ರರಂಗದಲ್ಲಿ ಯಶಸ್ಸು ಕಾಣಲು ಅವರ ತಾಯಿ ಮತ್ತು ಅಣ್ಣ ದೀಪಕ್‌ ಅವರೇ ಹೆಚ್ಚು ಶ್ರಮವಹಿಸಿರುವುದು. ಅವರಿಬ್ಬರ ಮಧ್ಯೆ ಒಳ್ಳೆ ಬಾಂಧವ್ಯ ಇತ್ತು. ಅಮೂಲ್ಯ ಅವರಿಗೆ ತುಂಬಾ ನೋವಾಗಿದೆ. ಡಯಾಲಿಸಿಸ್‌ ತೆಗೆದುಕೊಳ್ಳುವಾಗಲೇ ಅವರ ನೋವನ್ನು ದೀಪಕ್ ಅಮೂಲ್ಯ ಅವರ ಬಳಿ ಹಂಚಿಕೊಳ್ಳುತ್ತಿದ್ದರು. ಅದನ್ನು ಅಮೂಲ್ಯ ನನ್ನ ಬಳಿ ಹೇಳಿಕೊಂಡು ಬೇಜಾರು ಮಾಡಿಕೊಳ್ಳುತ್ತಿದ್ದರು. ಇದನ್ನು ನಾವ್ಯಾರೂ ಊಹಿಸಿರಲಿಲ್ಲ.

ಡಯಾಲಿಸಿಸ್‌ ಅಲ್ಲೇ ಇದ್ದು ಜೀವನ ನಡೆಸುವವರನ್ನು ನಾವು ನೋಡಿದ್ದೇವೆ. ಹೀಗಾಗಿ ಇನ್ನೂ ಹತ್ತು ವರ್ಷ ಇರುತ್ತಾರೆ ಅಂತಾ ಎಂದುಕೊಂಡಿದ್ದೇವು. ಆದರೆ ದೇವರು ಅವರಿಗೆ ಒಂದು ಅವಕಾಶ ಕೊಡಬೇಕಿತ್ತು ಅಂತಾ ಅನಿಸುತ್ತದೆ' ಎಂದು ನಟಿ ಅಮೂಲ್ಯ ಪತಿ ಜಗದೀಶ್‌ ದೀಪಕ್‌ ಅರಸು ಅವರ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+