Bigg Boss: ಈ ಬಾರಿ ಬಿಗ್‌ಬಾಸ್ ಮನೆಗೆ ಸಿಂಗಲ್ಲಾಗಿ ಹೋಗಿ ಮಿಂಗಲ್ಲಾದ ಜೋಡಿ ಯಾವುದು?
ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಸ್ಪರ್ಧಿಗಳ ಸಂಖ್ಯೆ ಮಾತ್ರ ಕಡಿಮೆ ಆಗುತ್ತಲೇ ಇಲ್ಲ. ಪ್ರಸ್ತುತ ಬಿಗ್‌ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಮತ್ತೆ ಬಿಗ್‌ಬಾಸ್ ಮನೆಗೆ ವಾಪಸ್ ಬಂದಿದ್ದಾರೆ ಎನ್ನಲಾಗುತ್ತಿದೆ. ಆದರೆ ವಿಚಾರ ಅದಲ್ಲ. ಪ್ರತೀ ಬಾರಿ ಬಿಗ್‌ಬಾಸ್ ಮನೆ ಒಳಗೆ ಹೋಗುವಾಗ ಸಿಂಗಲ್ಲಾಗಿ ಹೋದ ಸ್ಪರ್ಧಿಗಳು ಬಿಗ್‌ಬಾಸ್ ಮನೆಯಿಂದ ಹೊರ ಬರುವಾಗ ಒಂದಾಗಿ ಅಂದರೆ ಪ್ರೇಮಿಗಳಾಗಿ ಹೊರಬಂದಿರುವ ಸೀಸನ್‌ಗಳು ಸಾಕಷ್ಟು ಇವೆ. ಹಾಗಾದರೆ ಈ ಬಾರಿ ಬಿಗ್‌ಬಾಸ್ ಮನೆಯ ಲವ್ ಬರ್ಡ್ಸ್ ಯಾರು? ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಜೋಡಿ ಹಕ್ಕಿ ಯಾರಾಗಲಿದ್ದಾರೆ?
ಈ ಒಂದು ಪ್ರಶ್ನೆ ಬಿಗ್‌ಬಾಸ್ ಆರಂಭವಾದಾಗಿನಿಂದಲೂ ಇದೆ. ಆದರೆ ಈವರೆಗೂ ಇದಕ್ಕೆ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ಯಾಕೆಂದರೆ ಬಿಗ್‌ಬಾಸ್ ಮನೆಯಲ್ಲಿ ಇನ್ನೇನು ಈ ಇಬ್ಬರು ಸ್ಪರ್ಧಿಗಳ ನಡುವೆ ಪ್ರೀತಿ ಹುಟ್ಟುತ್ತದೆ ಅಂದುಕೊಳ್ಳುವ ಹೊತ್ತಿಗೆ ಆ ಸ್ಪರ್ಧಿ ಎಲಿಮಿನೇಟ್ ಆಗಿ ಮನೆ ಬಿಟ್ಟು ತೆರಳುವಂತಾಗಿದೆ. ಹಾಗಂತ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಪ್ರೀತಿಸುವ ಜೋಡಿ ಇಲ್ಲ ಎಂದು ಹೇಳುವುದು ಕಷ್ಟ. ಯಾಕೆಂದರೆ ಪ್ರಸ್ತುತ ಉಳಿದುಕೊಂಡಿರುವ ಸ್ಪರ್ಧಿಗಳ ಪೈಕಿ ಇಬ್ಬರು ಸ್ಪರ್ಧಿಗಳ ನಡುವೆ ಪ್ರೀತಿ ಚಿಗುರಿದೆ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಆ ಜೋಡಿ ಯಾವುದು? ಬಿಬಿಕೆ-11ರಲ್ಲಿ ಈ ಹಿಂದೆ ಇದ್ದ ಪ್ರೇಮ ಪಕ್ಷಿಗಳ ಕಥೆ ಏನಾಯ್ತು? ಎಲ್ಲವನ್ನೂ ಈಗ ತಿಳಿಯೋಣ.

ರಂಜಿತ್ ಮತ್ತು ಐಶ್ವರ್ಯ ನಡುವೆ ಕುಚ್ ಕುಚ್
ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದ ದಿನಗಳಲ್ಲಿ ರಂಜಿತ್ ಅವರಿಗೆ ಐಶ್ವರ್ಯ ಅವರ ಮೇಲೆ ಕುಚ್ ಕುಚ್ ಶುರುವಾಗಿತ್ತು. ಇಬ್ಬರ ನಡುವೆ ಕಣ್ ಕಣ್ ಸಲಿಗೆ ಆರಂಭವಾಗಿತ್ತು. ಇನ್ನೇನು ಇವರಿಬ್ಬರು ಒಂದಾಗುತ್ತಾರೆ ಎನ್ನುವಷ್ಟರಲ್ಲಿ ಲಾಯರ್ ಜಗದೀಶ್ ಹಾಗೂ ರಂಜತ್ ನಡುವೆ ಗಲಾಟೆಯಾಗಿ ರಂಜತ್ ಬಿಗ್‌ಬಾಸ್ ಮನೆಯಿಂದ ಹೊರಬಂದರು. ಅಲ್ಲಿಗೆ ರಂಜತ್ ಅವರ ಈ ಒನ್ ಸೈಡ್ ಲವ್, ಟೂ ಸೈಡ್ ಆಗುವುದಕ್ಕೆ ಬ್ರೇಕ್ ಬಿತ್ತು. ನಂತರದಲ್ಲಿ ಬಿಗ್‌ಬಾಸ್ ಮನೆಯಲ್ಲಿ ಶುರುವಾಗಿದ್ದು ತ್ರಿಕೋನ ಪ್ರೇಮ ಕತೆ. ಅದು ಯಾರ ನಡುವೆ ಗೊತ್ತಾ?
ಬಿಗ್‌ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮಕಥೆ
ರಂಜಿತ್ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಬಿಗ್‌ಬಾಸ್ ಮನೆಯಲ್ಲಿ ಶುರುವಾಗಿದ್ದು ತ್ರಿಕೋನ ಲವ್ ಸ್ಟೋರಿ. ಬಿಗ್‌ಬಾಸ್ ಸ್ಪರ್ಧಿ ಧರ್ಮ ಕೀರ್ತಿರಾಜ್ ಹಾಗೂ ಐಶ್ವರ್ಯ ಸಿಂಧೋಗಿ ತುಂಬಾ ಕ್ಲೋಸ್ ಆಗಿದ್ದರು. ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಧರ್ಮ ಇದ್ದಲ್ಲೆಲ್ಲಾ ಐಶ್ವರ್ಯ ಇರ್ತಾಯಿದ್ದರು.

ಆದರೆ ಧರ್ಮ ಅವರು ಅನುಷಾ ಜೊತೆ ಮಾತನಾಡುವುದು ಐಶ್ವರ್ಯಗೆ ಇಷ್ಟವಾಗುತ್ತಿರಲಿಲ್ಲ. ಆದರೆ ಧರ್ಮ ಅವರಿಗೆ ಅನುಷಾ ಜೊತೆಗೆ ಮಾತನಾಡಲು ಹೆಚ್ಚು ಆಸಕ್ತಿ ಇರುತ್ತಿತ್ತು. ಅನುಷಾ ಅವರೊಂದಿಗೆ ಹೆಚ್ಚು ಕಾಲ ಮಾತನಾಡಿಕೊಂಡು ಕಾಲ ಕಳೆಯುತ್ತಿದ್ದರು ಧರ್ಮ. ಇದರಿಂದ ಮನೆ ಮಂದಿ ಎಲ್ಲಾ ಧರ್ಮಾ ಅವರ ಕಾಲೆಳೆಯುತ್ತಿದ್ದರು.
ಧರ್ಮಾ ಅವರಿಗೆ ಐಶ್ವರ್ಯ ಅವರಿಗಿಂತ ಅನುಷಾ ಅವರೊಂದಿಗಿನ ಸ್ನೇಹ ಹೆಚ್ಚು ಇಷ್ಟವಾಗಿತ್ತು. ಧರ್ಮಾ ಹಾಗೂ ಅನುಷಾ ಇವರಿಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಇದೆ ಅಂತ ಇತರ ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿದ್ದರು. ಆದರೆ ಅನುಷಾ ಪ್ರೀತಿ ಪ್ರೇಮ ಏನೂ ಇಲ್ಲ ಅಂದುಕೊಂಡು ಬಿಗ್‌ಬಾಸ್ ಮನೆಯಿಂದ ಹೊರಬಂದರು. ಜೊತೆಗೊಂದು ದಿನ ಧರ್ಮಾ ಕೂಡ ಬಿಗ್‌ಬಾಸ್ ಮನೆಯಿಂದ ಹೊರಬಂದರು. ಹೀಗಾಗಿ ಈ ಲವ್ ಕೂಡ ಸಕ್ಸಸ್ ಆಗಲಿಲ್ಲ. ಹಾಗಂತ ಬಿಗ್‌ಬಾಸ್ ಮನೆಯಲ್ಲಿ ಲವ್ ಸ್ಟೋರಿ ಇಲ್ಲಿಗೆ ಮುಗಿತು ಅಂದುಕೊಳ್ಳಬೇಡಿ. ಪಿಚ್ಶರ್ ಇನ್ನೂ ಬಾಕಿ ಇದೆ.
ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ ಪ್ರೇಮ ಕತೆ
ಧರ್ಮಾ ಹಾಗೂ ಅನುಷಾ ಹೊರಬಂದ ಬಳಿಕ ಬಿಗ್‌ಬಾಸ್ ಮನೆಯಲ್ಲಿ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ತುಂಬಾನೇ ಕ್ಲೋಸ್ ಆದರು. ಅವರು ಒಟ್ಟಿಗೆ ಅಂದರೆ ಒಂದೇ ಕಪ್‌ನಲ್ಲಿ ಕಾಫಿ ಕುಡಿಯುವ ದೃಶ್ಯ ಭಾರೀ ವೈರಲ್ ಆಗಿತ್ತು. ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂದು ಮನೆಯ ಮಂದಿ ಅಂದುಕೊಂಡಿದ್ದರು. ಆದರೆ ಈ ಜೋಡಿ ಕೂಡ ತಾವು ಪ್ರೀತಿಸುತ್ತಿರುವ ಬಗ್ಗೆ ಬಾಯಿ ಬಿಟ್ಟಿಲ್ಲ. ಅಲ್ಲದೆ ಶಿಶಿರ್ ಶಾಸ್ತ್ರಿ ಕೂಡ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಹೀಗಾಗಿ ಪ್ರಸ್ತುತ ಐಶ್ವರ್ಯ ಅವರು ಬಿಗ್‌ಬಾಸ್ ಮನೆಯಲ್ಲಿ ಒಂಟಿಯಾಗಿದ್ದಾರೆ. ಹಾಗಾದರೆ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಪ್ರೀತಿಸುವ ಜೋಡಿ ಇಲ್ವಾ?

ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ನಡುವೆ ಪ್ರೀತಿ ಇದಿಯಾ?
ಪ್ರಸ್ತುತ ಬಿಗ್‌ಬಾಸ್ ಮನೆಯಲ್ಲಿ ಪ್ರೀತಿಸುತ್ತಾರೆ ಎನ್ನುವ ಅನುಮಾನ ಉಳಿಸಿಕೊಂಡಿರುವ ಸ್ಪರ್ಧಿಗಳೆಂದರೆ ಅದು ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ. ಈ ಅನುಮಾನ ಹುಟ್ಟಲು ಕಾರಣ ಅಂದರೆ, ಭವ್ಯಾ ಗೌಡ ಹೇಳಿದಂತೆ ತ್ರಿವಿಕ್ರಮ್ ಕೇಳುವುದು. ತ್ರಿವಿಕ್ರಮ್ ಹೇಳಿದಂತೆ ಭವ್ಯಾ ಕೇಳುವುದನ್ನು ನೋಡಿದರೆ ಮಿಂಗಲ್ಲಾಗಿ ಹೊರಬರುವ ಲಕ್ಷಣಗಳು ಇವೆ.

ಹೌದು.. ಭವ್ಯಾ ಬಿಗ್‌ಬಾಸ್ ಮನೆಯಲ್ಲಿ ನನಗೆ ತುಂಬಾ ಆತ್ಮೀಯ ಗೆಳೆಯ ಅಂದರೆ ತ್ರವಿಕ್ರಮ್ ಎಂದು ಹೇಳಿಕೊಂಡಿದ್ದಾರೆ. ತ್ರಿವಿಕ್ರಮ್ ಅವರು ಯಾವಾಗಲೂ ಭವ್ಯಾ ಅವರೊಂದಿಗೇ ಇರುತ್ತಾರೆ. ಮನೆಯ ಯಾವ ಸದಸ್ಯರ ಜೊತೆಗೆ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ ತ್ರಿವಿಕ್ರಮ್ ಹಾಗೂ ಭವ್ಯಾ. ಹೀಗಾಗಿ ಅವರಿಬ್ಬರು ಒಟ್ಟಿಗೆ ಇರುವುದು, ಒಟ್ಟಿಗೆ ಆಡುವುದು ಹಾಗೂ ಒಬ್ಬರನ್ನೊಬ್ಬರು ಬಿಟ್ಟುಕೊಡದೇ ಇರುವುದನ್ನು ಕಂಡರೆ ಅವರು ಬಿಗ್‌ಬಾಸ್ ಈ ಸೀಸನ್‌ನ ಲವ್ ಬರ್ಡ್ಸ್ ಆಗಬಹುದು ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಕಳೆದ ಸೀಸನ್‌ಗಳಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ, ಅರವಿಂದ ಹಾಗೂ ದಿವ್ಯಾ ಉರುಡುಗ ಸಿಂಗಲ್ಲಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟು ಪ್ರೇಮಿಗಳಾಗಿ ಹೊರಬಂದಿದ್ದರು. ಈ ಬಾರಿ ಬಿಗ್‌ಬಾಸ್ ಮನೆಯಿಂದ ಜೋಡಿಯಾಗಿ ಯಾರು ಹೊರಬರುತ್ತಾರೆ? ಅಥವಾ ಹೊರಬಂದ ಬಳಿಕ ಯಾರು ಜೋಡಿಯಾಗುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
photo courtesy:Filmibeat kannada












Click it and Unblock the Notifications