'DC ಮಾಡಲು ಸಹ ಆಗ್ತಿರ್ಲಿಲ್ಲ'; ಸ್ನೇಹಾ ಪಾತ್ರ ಅಂತ್ಯದ ಬಗ್ಗೆ ನಿರ್ದೇಶಕರು ಹೇಳಿದ್ದೇನು..?
ಕಿರುತೆರೆಯ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನೇ ಅಂತ್ಯಗೊಳಿಸಲಾಗಿದೆ. ಸದ್ಯ ಜಿಲ್ಲಾಧಿಕಾರಿ ಸ್ನೇಹಾ ಪಾತ್ರವನ್ನು ಸದ್ಯ ಅಂತ್ಯಗೊಳಿಸಲಾಗಿದ್ದು, ಸ್ನೇಹಾ ಎನ್ನುವ ಹೆಸರಿನ ಹೊಸ ಪಾತ್ರವನ್ನೇ ಪರಿಚಯಿಸಲಾಗಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಎರಡನೇ ಮಗಳು ಸ್ನೇಹಾ ಪಾತ್ರದಲ್ಲಿ ಅಭಿನಯಿಸುತ್ತಿರುವ ಸಂಜನಾ ಬುರ್ಲಿ ಇದೀಗ ಕಾರಣಾಂತರಗಳಿಂದ ಧಾರಾವಾಹಿ ಪಾತ್ರದಿಂದ ಹೊರಬಂದಿದ್ದಾರೆ.
ಸ್ನೇಹಾ ಪಾತ್ರ ಅಂತ್ಯಗೊಂಡ ಬಗ್ಗೆ ಹಾಗೂ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮುಂದಿನ ಕಥೆಯೇನು ಎನ್ನುವುದರ ಬಗ್ಗೆ ಗ್ಗೆ ನಿರ್ದೇಶಕ ಆರೂರೂ ಜಗದೀಶ್ ಮಾತನಾಡಿದ್ದಾರೆ. ಸಂಜನಾ ಬುರ್ಲಿ ನಮಗೆ ಕೊಟ್ಟ ಡೇಟ್ ಪ್ರಕಾರ ಸ್ನೇಹಾ ಪಾತ್ರವನ್ನು ಡಿಸಿ ಮಾಡಲು ಸಹ ಆಗುತ್ತಿರಲಿಲ್ಲ.

ಅವರು ನಿರ್ಧಾರ ಮಾಡಿ ಆಗಿತ್ತು. ಕೊನೆಗೆ ನಾವೇ ಕಥೆಯನ್ನು ಬೇಗ ಬೇಗ ಮಾಡಿ ಆಕೆಯನ್ನು ಜಿಲ್ಲಾಧಿಕಾರಿ ಖುರ್ಚಿ ಮೇಲೆ ಕೂರಿಸಿ ಸಾಯಿಸೋಣ ಎಂದು ಕಥೆಯನ್ನು ಬೇಗ ಮುಂದುವರಿಸಿದೆವು. ಒಂದು ವೇಳೆ ಮುಂಚೆನೇ ಸಾಯಿಸಿದರೆ ಆ ಸ್ನೇಹಾ ಪಾತ್ರಕ್ಕೆ ನ್ಯಾಯ ಕೊಡಿಸಿದಂತೆ ಆಗುತ್ತಿರಲಿಲ್ಲ ಎಂದರು.
ಸಂಜನಾ ಬುರ್ಲಿ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದಾಳೆ. ದೆಹಲಿಗೆ ಹೋಗಿ ಸೆಟೆಲ್ ಆಗುತ್ತಿದ್ದಾಳೆ ಎನ್ನುವ ಕಾರಣಕ್ಕೆ ಕಥೆಯನ್ನು ಹೀಗೆ ಮಾಡಬೇಕಾಯಿತು ಎಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಎರಡನೇ ಮಗಳು ಸ್ನೇಹಾ ಪಾತ್ರವನ್ನು ಅಂತ್ಯಗೊಳಿಸಿದ ಬಗ್ಗೆ ನಿರ್ದೇಶಕ ಆರೂರೂ ಜಗದೀಶ್ ಪಂಚಮಿ ಟಾಕ್ಸ್ ಸಂದರ್ಶನದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ಸ್ನೇಹಾ ಪಾತ್ರ ಅಂತ್ಯ ಮಾಡಿರುವುದರಿಂದ ಸಾಮಾನ್ಯವಾಗಿ ಪ್ರೇಕ್ಷಕರಿಗೆ ಬೇಸರ ಆಗಿದೆ. ಆದರೆ ಕಥೆಯಲ್ಲೇ ಅವರಿಗೆ ಖುಷಿಕೊಡುವಂತಹದ್ದು ಏನಾದರೂ ಮಾಡಬೇಕು ಎಂದುಕೊಂಡಿದ್ದೇವೆ. ಮುಂದೆ ಖಂಡಿತಾ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ಯಾಕೆಂದರೆ ಪುಟ್ಟಕ್ಕ ಎನ್ನುವ ಪಾತ್ರ ಇದೆ.
ಪುಟ್ಟಕ್ಕನ ದೊಡ್ಡ ಮಗಳು, ಚಿಕ್ಕ ಮಗಳು ಇದ್ದಾಳೆ. ಕಂಠಿ ಪಾತ್ರವಿದೆ, ಬಂಗಾರಮ್ಮ ಇದ್ದಾರೆ. ಎಲ್ಲಾ ಧಾರಾವಾಹಿಗಳಲ್ಲಿ ಹಿರೋ ಹಿರೋಯಿನ್ ಮೇಲೆ ಕಥೆ ಹೋಗುತ್ತದೆ. ಆದರೆ ನಮ್ಮ ಧಾರಾವಾಹಿ ಹೀರೋ- ಹೀರೋಯಿನ್ ಮೇಲೆ ಹೋಗುತ್ತಿಲ್ಲ. ಕಥೆಯಲ್ಲಿ ಕಥೆಯಾಗಿ ಹೋಗುತ್ತಿದೆ ಎಂದರು.

ಇನ್ನು ಕಂಠಿ ಇಲ್ಲಿಯವರೆಗೆ ಸುಮ್ಮನೆ ಅಲ್ಲಿ-ಇಲ್ಲಿ ಓಡಾಡಿಕೊಂಡಿದ್ದ. ಆದರೆ ಇನ್ನುಮುಂದೆ ಕಂಠಿ ಧಾರಾವಾಹಿಯನ್ನು ಲೀಡ್ ಮಾಡುತ್ತಾನೆ. ಪ್ರೇಕ್ಷಕರು ಕಂಠಿ ಪಾತ್ರವನ್ನು ತುಂಬಾ ಇಷ್ಟಪಡುತ್ತಿದ್ದರು. ಆದರೆ ಎಲ್ಲಾ ಟ್ರಾಕ್‌ನಲ್ಲೂ ಹೋಗುತ್ತಿತ್ತು.
ಅಂದರೆ ಪುಟ್ಟಕ್ಕ, ಸ್ನೇಹಾ, ಬಂಗಾರಮ್ಮನಿಗೆ ಸಹಾಯ ಮಾಡುವುದರಲ್ಲೇ ಹೋಗುತ್ತಿತ್ತು. ಆದರೆ ಇನ್ನುಮುಂದೆ ಕಂಠಿ ನಿಲ್ಲುತ್ತಾನೆ. ಪುಟ್ಟಕ್ಕನ ಮಕ್ಕಳು ಬೇರೆ ರೀತಿ ಕಥೆ ಮಾಡಿದ್ದೇವೆ ಎಂದು ಆರೂರೂ ಜಗದೀಶ್ ಪ್ರೇಕ್ಷಕರಿಗೆ ಭರವಸೆ ನೀಡಿದ್ದಾರೆ.












Click it and Unblock the Notifications