ದರ್ಶನ್ ತೂಗುದೀಪ್ ಮತ್ತೆ ಪೊಲೀಸರ ವಶಕ್ಕೆ: ಮತ್ತಷ್ಟು ಬಿಗಿಯಾಗುತ್ತಾ ಉರುಳು?

ದರ್ಶನ್ ತೂಗುದೀಪ್ ಕೊಲೆ ಆರೋಪದಲ್ಲಿ ಅರೆಸ್ಟ್ ಆಗಿದ್ದು, ಎ2 ಆರೋಪಿ ಆಗಿರುವ ಈ ನಟನಿಗೆ ಮತ್ತೊಮ್ಮೆ ದೊಡ್ಡ ಆಘಾತ ಸಿಕ್ಕಿದೆ. ಅದು ಏನೆಂದರೆ ಇಂದಿಗೆ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ನ್ಯಾಯಾಲಯದ ಎದುರು ಪೊಲೀಸರು ಆರೋಪಿ ದರ್ಶನ್ & ಗ್ಯಾಂಗ್‌ನ ಹಾಜರುಪಡಿಸಿದ್ರು. ಹೀಗಿದ್ದಾಗ ಮತ್ತಷ್ಟು ದಿನ ಕಾಲ ಕಸ್ಟಡಿಗೆ ಬೇಕು ಎಂದಿದ್ದರು ಪೊಲೀಸರು. ಪೊಲೀಸರ ಮನವಿಯನ್ನ ನ್ಯಾಯಾಲಯ ಸ್ವೀಕರಿಸಿ, ದರ್ಶನ್‌ನ ಖಾಕಿ ವಶಕ್ಕೆ ನೀಡಲಾಗಿದೆ.

ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಮಾಡಿದೆ ಅಂತಾ ಗಂಭೀರ ಆರೋಪವು ಕೇಳಿಬಂದ ನಂತರದಲ್ಲಿ ಇಡೀ ಗ್ಯಾಂಗ್‌ನ ಜೀಪ್‌ಗೆ ಎತ್ತಾಕಿ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ಕಳೆದ 10 ದಿನದಿಂದ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್ ನೇರವಾಗಿ ರೇಣುಕಾಸ್ವಾಮಿಯ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪಗಳ ನಡುವೆ, ಈಗಾಗಲೇ ಎರಡು ಬಾರಿ ದರ್ಶನ್ & ಗ್ಯಾಂಗ್‌ನ ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಇದೀಗ ಮತ್ತೊಮ್ಮೆ, ದರ್ಶನ್ ಮತ್ತು ಸಹಚರರ ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಕೋರ್ಟ್ ಕೂಡ ಪೊಲೀಸರ ಮನವಿ ಪುರಸ್ಕರಿಸಿ, ದರ್ಶನ್ & ಗ್ಯಾಂಗ್‌ನ ಪೊಲೀಸರ ವಶಕ್ಕೆ ನೀಡಲಾಗಿದೆ.

What Is The Reason For Police Taken Darshan Thoogudeepa To The Custody Again

ದರ್ಶನ್ ಜೊತೆಗೆ ಯಾರಿಗೆಲ್ಲಾ ಸಂಕಷ್ಟ?

ಪೊಲೀಸರು ಈಗ ದರ್ಶನ್, ವಿನಯ್, ಪ್ರದೂಶ್, ಲಕ್ಷ್ಮಣ್, ಧನರಾಜ್, ನಾಗರಾಜ್‌ನ ಕಸ್ಟಡಿಗೆ ಕೊಡಿ ಎಂದು ಕೋರಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಈ 6 ಜನರದ್ದೇ ದೊಡ್ಡ ಪಾತ್ರ ಇದೆ ಎಂದು ಆರೋಪ ಮಾಡಲಾಗಿತ್ತು. ಹೀಗಾಗಿ ಇವರನ್ನ ಪೊಲೀಸರ ವಶಕ್ಕೆ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು ಪೊಲೀಸರು. ಪೊಲೀಸರ ಮನವಿಯನ್ನು ಕೋರ್ಟ್ ಪುರಸ್ಕರಿಸಿ ಆರೋಪಿಗಳನ್ನ ವಶಕ್ಕೆ ನೀಡಿದೆ. ಈ ಮೂಲಕ ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಮತ್ತಷ್ಟು ತಿರುವು ಸಿಗುವ ವಾತಾವರಣ ಸೃಷ್ಟಿಯಾಗಿದೆ.

118 ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು?

ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಖಡಕ್ ತನಿಖೆ ನಡೆಸುತ್ತಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಕರ್ನಾಟಕದ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದು, ಯಾವುದೇ ರೀತಿಯ ಒತ್ತಡಗಳಿಗೆ ಮಣಿಯಬೇಡಿ ಎಂದಿದ್ದಾರೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ. ಅದರಲ್ಲೂ ದರ್ಶನ್ & ಗ್ಯಾಂಗ್ ವಿರುದ್ಧ ಈವರೆಗೂ ಸುಮಾರು 118 ಸಾಕ್ಷ್ಯ ಸಂಗ್ರಹವಾಗಿದೆ ಎಂಬ ಸುದ್ದಿ ತಿಳಿದುಬಂದಿದೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ.

ದರ್ಶನ್ ಅಲಿಯಾಸ್ ರೌಡಿ ದರ್ಶನ್?

2011ರ ಸಮಯದಲ್ಲಿ ತನ್ನ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಿನಲ್ಲಿ ತನ್ನ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಹಾಗೂ ಹಲವು ನಿರ್ಮಾಪಕ, ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಇದೀಗ, ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಕನ್ನಡ ನಾಡಿನ ಪೊಲೀಸರು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆ ಎಲ್ಲಾ ದಾಖಲೆಗಳನ್ನ ಸಂಗ್ರಹಿಸುವ ಮೂಲಕ, ದರ್ಶನ್ & ಗ್ಯಾಂಗ್‌ಗೆ ಶಾಕ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ'?

ಕಲಾಸಿಪಾಳ್ಯ, ಮೆಜೆಸ್ಟಿಕ್ ಅಂತಾ ಬೆಂಗಳೂರಿನ ಏರಿಯಾಗಳ ಹೆಸರನ್ನು ಇಟ್ಟುಕೊಂಡೇ ಭಾರಿ ಭರ್ಜರಿ ಸಿನಿಮಾ ನೀಡಿದ್ದ ದರ್ಶನ್, ಈಗ 'ಪರಪ್ಪನ ಅಗ್ರಹಾರ' ಸೇರಿದ್ದಾರೆ. ದರ್ಶನ್ ತಾನೇ ಮಾಡಿಕೊಂಡ ಎಡವಟ್ಟಿಗೆ & ದುರಹಂಕಾರಕ್ಕೆ ಇಂದು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ ಅಂತಾರೆ ಅವರ ಸ್ನೇಹಿತರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗೆ ದರ್ಶನ್ ಕೊಲೆ ಆರೋಪದಲ್ಲಿ ಸೆಂಟ್ರಲ್ ಜೈಲ್ 'ಪರಪ್ಪನ ಅಗ್ರಹಾರ'ಕ್ಕೆ ಹೋಗಿದ್ದು, ಕೊಲೆ ಆರೋಪಿ ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ' ಆಗಿರಲಿದೆ ಅಂತಿದ್ದಾರೆ ದರ್ಶನ್ ವಿರೋಧಿಗಳು. ಹೀಗಾಗಿ ದರ್ಶನ್ & ಅವರ ವಿರೋಧಿಗಳ ಫೈಟಿಂಗ್‌ಗೆ ಭರ್ಜರಿ ತಿರುವು ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+