‘ಡಂಕಿ’ ಅಂದ್ರೆ ಏನು? ಉತ್ತರ ಕೊಟ್ಟಿದ್ದಾರೆ ನೋಡಿ ಶಾರುಖ್ ಖಾನ್!
ಬಾಲಿವುಡ್ 'ಬಾದ್ ಶಾ' ಅನ್ನೋ ಬಿರುದಾಂಕಿತ ಹಲವು ಸಿನಿಮಾ ಮೂಲಕ ಸಾವಿರ ಸಾವಿರ ಕೋಟಿ ಬಾಕ್ಸ್ ಆಫಿಸ್ ಪೀಸ್ ಪೀಸ್ ಮಾಡಿದ ಶಾರುಖ್ ಖಾನ್ ಈಗ ಮತ್ತೆ ಕಮಾಲ್ ಮಾಡೋಕೆ ಸಜ್ಜಾಗಿದ್ದಾರೆ. 'ಡಂಕಿ' ಮೂಲಕ ಇಡೀ ಭಾರತೀಯ ಸಿನಿ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಲು ಸಿದ್ಧತೆ ನಡೆಸಿದ್ದಾರೆ. ಆದ್ರೆ ಈ ಸಮಯದಲ್ಲಿ 'ಡಂಕಿ' ಅಂದ್ರೆ ಏನು? ಅನ್ನೋ ಪ್ರಶ್ನೆ ಫ್ಯಾನ್ಸ್ ಹಾಗೂ ಭಾರತೀಯರನ್ನು ಕಾಡುತ್ತಿತ್ತು. ಅದಕ್ಕೆ ನಟ ಶಾರುಖ್ ಖಾನ್ ಈಗ ಉತ್ತರಿಸಿದ್ದಾರೆ.
ಶಾರುಖ್ ಖಾನ್ ಏನೇ ಮಾಡಿದ್ರು ಸೂಪರ್ ಅಂತಾರೆ ಅವರ ಫ್ಯಾನ್ಸ್. ಶಾರುಖ್‌ಗೆ ಭಾರತದಲ್ಲಿ ಮಾತ್ರವಲ್ಲ ಅಮೆರಿಕ & ಯುರೋಪ್ ಸೇರಿ ಜಗತ್ತಿನ ಮೂಲೆ ಮೂಲೆಯಲ್ಲಿ ಕೂಡ ಅಭಿಮಾನಿ ಬಳಗವಿದೆ. ಇಂತಿಪ್ಪ ಶಾರುಖ್ ಖಾನ್ ಅವ್ರು ಡಂಕಿ ಕಥೆ ಹೇಳಲು ಬೆಳ್ಳಿತೆರೆ ಮೇಲೆ ಮತ್ತೊಮ್ಮೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಆದರೆ ಈ ಸಮಯದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗು ಉತ್ತರ ನೀಡಿದ್ದಾರೆ. ಹಾಗಾದರೆ 'ಡಂಕಿ'ಯ ಅರ್ಥ ಏನು?

'ಡಂಕಿ' ಅಂದ್ರೆ ಏನು ಗೊತ್ತಾ?
ಅಂದಹಾಗೆ 'ಡಂಕಿ' ಡಿ. 22ಕ್ಕೆ ವರ್ಲ್ಡ್‌ವೈಡ್ ರಿಲೀಸ್ ಆಗುತ್ತಿದೆ. ಶಾರುಖ್ ಖಾನ್ & ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿ ದೊಡ್ಡ ತಾರಾಬಳಗ ಸಿನಿಮಾದಲ್ಲಿ ನಟಿಸಿದೆ. ಇತ್ತೀಚೆಗೆ ರಿಲೀಸ್ ಆದ ಚಿತ್ರದ ಟೀಸರ್ & ಹಾಡು ಗಮನ ಸೆಳೆದಿದೆ. ಅದ್ರಲ್ಲೂ ಶಾರುಖ್ ನಟನೆಯ 'ಪಠಾಣ್' & 'ಜವಾನ್' ಹಿಟ್ ಆದ ಬಳಿಕ 'ಡಂಕಿ' ಬಗ್ಗೆ ಇರುವ ನಿರೀಕ್ಷೆ ಡಬಲ್ ಆಗಿದೆ. ಹೀಗಿದ್ದಾಗಲೇ ಫ್ಯಾನ್ಸ್ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಸ್ವತಃ ಶಾರುಖ್ ಖಾನ್ ಡಂಕಿ ಅರ್ಥ ಹೇಳಿದ್ದಾರೆ.
Dunki is a way of describing an illegal journey across borders. It is pronounced डंकी. It’s pronounced like Funky…Hunky….or yeah Monkey!!! https://t.co/t0Et738SEk
— Shah Rukh Khan (@iamsrk) November 22, 2023
ಫ್ಯಾನ್ಸ್ ಕೇಳಿದ ಪ್ರಶ್ನೆ ಏನು?
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಫ್ಯಾನ್ಸ್ ಬಳಗ ದೊಡ್ಡದಿದ್ದು, ಸಮಯ ಸಿಕ್ಕಾಗ ಶಾರುಖ್ ಸೋಷಿಯಲ್ ಮೀಡಿಯಾ ಮೂಲಕ ಚರ್ಚೆ ಮಾಡುತ್ತಾರೆ. 'X' ಅಂದರೆ ಹಿಂದಿನ ಟ್ವಿಟ್ಟರ್‌ನಲ್ಲಿ ತಮ್ಮ ಅಭಿಮಾನಿಗಳ ಜೊತೆ #AskSRK ಸೆಷನ್ ನಡೆಸುತ್ತಾರೆ. ಆಗ ಫ್ಯಾನ್ಸ್, ತಮ್ಮಿಷ್ಟದ ಪ್ರಶ್ನೆ ಕೇಳಬಹುದು. ಇದಕ್ಕೆಲ್ಲಾ ಶಾರುಖ್ ಖಾನ್ ಅವರು ಉತ್ತರವನ್ನ ನೀಡಲು ಯತ್ನ ಮಾಡುತ್ತಾರೆ. ಅವರಿಗೆ ವೆರೈಟಿ, ವೆರೈಟಿ ಪ್ರಶ್ನೆಗಳು ಕೂಡ ಎದುರಾಗುತ್ತವೆ. ಇದ್ರಲ್ಲಿ 'ಡಂಕಿ' ಸಿನಿಮಾ ಬಗ್ಗೆ ಕೂಡ ಪ್ರಶ್ನೆ ಕೇಳಲಾಗಿತ್ತು.

ಡಂಕಿ.. ಫಂಕಿ.. ಹಂಕಿ..
ಶಾರುಖ್ ಅವರ ಫ್ಯಾನ್ ಒಬ್ಬರು, 'ಡಂಕಿ'ಯ ಅರ್ಥ ಕೇಳಿದ್ದಾರೆ. ಇದಕ್ಕೆ ಶಾರುಖ್ ಖಾನ್‌ರ ಉತ್ತರ ಸಖತ್ ಫನ್ನಿ ಆಗಿತ್ತು. ಅಂದಹಾಗೆ, ಕಾನೂನು ಬಾಹಿರ ಗಡಿ ಪ್ರವೇಶಕ್ಕೆ ಡಂಕಿ ಎಂದು ಕರೆಯಲಾಗಿದೆ. ಅದನ್ನ ಡಂಕಿ ಎಂದು ಉಚ್ಛರಿಸಲಾಗುತ್ತೆ. ಆದ್ರೆ ಫಂಕಿ.. ಹಂಕಿ.. ಅಥವಾ ಮಂಕಿ ಎಂದು ಉಚ್ಚರಿಸಲಾಗುತ್ತಿದೆ ಎಂದು ಫನ್ ಆಗಿ ಉತ್ತರಿಸಿದ್ದಾರೆ ಬಾಲಿವುಡ್ ಬಾದ್ ಶಾ.
ನಿರ್ಮಾಣದ ಹೊಣೆ ಯಾರದ್ದು?
ಶಾರುಖ್ ಖಾನ್ ಜೊತೆ ಸ್ಟಾರ್ಸ್ ದಂಡೇ ಈ ಸಿನಿಮಾಗೆ ಸಾಥ್ ನೀಡಿದೆ. ರಾಜಕುಮಾರ್ ಹಿರಾನಿ ಅವರು ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಗೆ ಹೋಗುವ ಜನರ ಕಥೆಯ ಆಧರಿಸಿ ಡಂಕಿ ಸಿನಿಮಾ ಮಾಡಿದ್ದಾರೆ ಎನ್ನಲಾಗಿದೆ. ಈ ಸಿನ್ಮಾ ಜಿಯೋ ಸ್ಟುಡಿಯೋಸ್ ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್, ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ & ರಾಜ್‌ಕುಮಾರ್ ಹಿರಾನಿ ಅವರಿಂದ ನಿರ್ಮಾಣ ಆಗುತ್ತಿದೆ.
ಒಟ್ನಲ್ಲಿ ಇನ್ನೇನು 'ಡಂಕಿ' ಸಿನಿಮಾ ತೆರೆಗೆ ಬರಲು ಅಂತಿಮ ಹಂತದ ಸಿದ್ಧತೆ ನಡೆಸಿದ್ದು, ಕಮಾಲ್ ಮಾಡಲು ಸಜ್ಜಾಗಿದೆ. ನಾಯಕನಾಗಿ ಶಾರುಖ್ ಖಾನ್ ನಟಿಸಿದ್ದರೆ, ತಾಪ್ಸಿ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್ ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 22 ಕ್ಕೆ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ. ಹೀಗೆ ಅಭಿಮಾನಿಗಳು ಕೂಡ, ಕುತೂಹಲದಿಂದ ಸಿನಿಮಾ ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ.












Click it and Unblock the Notifications