'ಪೆನ್​ಡ್ರೈವ್' ಸಿನಿಮಾದಲ್ಲಿ ತನಿಷಾ ಪಾತ್ರವೇನು..? ಹೊಸ ಲುಕ್‌ನಲ್ಲಿ ಬಿಗ್‌ಬಾಸ್‌ ಬೆಂಕಿ !

ಬೆಂಗಳೂರು, ಜುಲೈ 05: ರಾಜ್ಯದಲ್ಲಿ ಪೆನ್​ಡ್ರೈವ್ ವಿಚಾರ ಚರ್ಚೆಯಲ್ಲಿರುವಾಗಲೇ 'ಪೆನ್​ಡ್ರೈವ್' ಶೀರ್ಷಿಕೆಯಲ್ಲಿ ಸಿನಿಮಾ ಬರಲು ಸಜ್ಜಾಗಿದೆ. ನಿನ್ನೆ ಜುಲೈ 04 ರಂದು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಗಿದೆ. 'ಪೆನ್​ಡ್ರೈವ್' ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ಸೀಜನ್‌ 10ರಲ್ಲಿ ಸ್ಪರ್ಧಿ ತನಿಷಾ ಕುಪ್ಪಂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಪೆನ್​ಡ್ರೈವ್' ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಸ್ವತಃ ತನಿಷಾ ಕುಪ್ಪಂಡ ಮಾತನಾಡಿದ್ದಾರೆ.

ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತನಿಷಾ, 'ಪೆನ್​ಡ್ರೈವ್ ಎಂದ ತಕ್ಷಣ ಎಲ್ಲರಿಗೂ ಯಾವುದೋ ಒಂದು ಲಿಂಕ್‌..ಯಾವುದೋ ಒಂದು ವಿಷಯ..ಏನೋ ಒಂದು ಎನ್ನುವಂತಹ ಒಂದಿಷ್ಟು ಪ್ರಶ್ನೆಗಳು ಇರುತ್ತದೆ. ಆದರೆ ನನ್ನ ಪ್ರಕಾರ 'ಪೆನ್​ಡ್ರೈವ್' ಎನ್ನುವಂತದ್ದು ಹೊಸ ಸುದ್ದಿ ಅಲ್ಲ. 'ಪೆನ್​ಡ್ರೈವ್'ನ ನಾವು ನಮ್ಮ ಜೀವನದ ಒಳ್ಳೆಯ ನೆನಪುಗಳನ್ನು ಅಂದರೆ ಮೆಮೋರಿಸ್‌ಗಳನ್ನು ಸೇವ್‌ ಮಾಡಿಕೊಳ್ಳಲು ಬಹಳ ವರ್ಷಗಳಿಂದ ಬಳಸಿಕೊಂಡು ಬರುತ್ತಿರುವ ವಸ್ತು.

What Is Tanisha Kuppanda s Role In The Pendrive Movie

ಈ ಒಂದು ವಸ್ತು ಒಳಗೆ ಬಹಳ ಹೋರಾಟದಿಂದ ಕೆಲಸ ಮಾಡುವಂತಹ ವ್ಯಕ್ತಿಗಳನ್ನು ತುಂಬಿ ಸಿನಿಮಾ ಮೂಲಕ ನಿಮ್ಮೆರಲ್ಲನ್ನೂ ರಂಜಿಸಲು ಡೆವಿಡ್‌ ಸರ್‌ ಮುಂದೆ ಬಂದಿದ್ದಾರೆ. ಅವರ ಜೊತೆಗೆ ನಾವೆಲ್ಲಾ ಇದ್ದೇವೆ. 'ಪೆನ್​ಡ್ರೈವ್' ಸಿನಿಮಾದಲ್ಲಿ ನನ್ನ ಪಾತ್ರ ಪೊಲೀಸ್‌. ಈ ಸಿನಿಮಾದಲ್ಲಿ ಪೊಲೀಸ್‌ ಪಾತ್ರವನ್ನು ನಾನು ಮಾಡುತ್ತಿದ್ದೇನೆ. ಸದ್ಯ ಇಷ್ಟು ಮಾತ್ರ ಹೇಳಲು ಸಾಧ್ಯ. ಬೇರೆ ಯಾವುದನ್ನೂ ಹೆಚ್ಚಿಗೆ ಹೇಳುವುದಿಲ್ಲ ಯಾಕೆಂದರೆ ಮುಂದೆ ನಾವಿನ್ನು ಶೂಟಿಂಗ್‌ ಶುರು ಮಾಡಿಲ್ಲ ಎಂದು ಹೇಳಿದರು.

ಒಂದು ಪೊಲೀಸ್‌ಗೆ ಕೆಲಸ ಮಾಡಬೇಕು ಅಂದಾಗ ಯಾವ ರೀತಿಯಾದ ಕೇಸ್‌ಗಳು ಬರುತ್ತದೆ. ಯಾವ ಸಂದರ್ಭಗಳನ್ನು ಅವರು ಎದುರಿಸುತ್ತಾರೆ. ಸಮಸ್ಯೆಗಳು ಕೇವಲ ಸಾಮಾನ್ಯ ಜನರಿಗೆ ಮಾತ್ರ ಬರಲ್ಲ. ಪೊಲೀಸ್‌ ಅವರಿಗೂ ಬರುತ್ತದೆ. ಪೊಲೀಸ್‌ ಅವರಿಗೆ ಸಮಸ್ಯೆ ಬಂದಾಗ ಹೇಗೆ ಎದುರಿಸುತ್ತಾರೆ, ಪೊಲೀಸ್‌ಗೆ ಯಾವ ರೀತಿಯ ಸಮಸ್ಯೆಗಳು ಬರುತ್ತದೆ ಎನ್ನುವುದನ್ನು ನೀವು ಸಿನಿಮಾದಲ್ಲಿ ನೋಡಬಹುದು ಎಂದರು.

What Is Tanisha Kuppanda s Role In The Pendrive Movie

ಇನ್ನು ನನ್ನ ಪ್ರಕಾರ ಯಾವುದೇ ಟೈಟಲ್‌ ಇಟ್ಟುಕೊಂಡರೂ ಅದನ್ನು ಜನರಿಗೆ ತಲುಪಿಸುವುದು ಮುಖ್ಯ. ಎಲ್ಲರನ್ನೂ ರಂಜಿಸಬೇಕು ಎನ್ನುವುದನ್ನು ತಲೆಯಲ್ಲಿ ಇಟ್ಟುಕೊಂಡು ಸಿನಿಮಾ ಮಾಡುತ್ತೇವೆ. ನೀವು ಖುಷಿಯಿಂದ ಬಂದು ನಮ್ಮ ಕನ್ನಡ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಬೇಕು ಎಂದು ತನಿಷಾ ಮನವಿ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+