Kiccha Sudeep: ಬ್ರೇಸ್‌ಲೇಟ್‌ ಉಡುಗೊರೆ ಕೊಟ್ಟ ಕಿಚ್ಚ ಸುದೀಪ್‌ ಬಗ್ಗೆ ಬಾಲಕ ಯುವನ್‌ ಹೇಳಿದ್ದೇನು ಗೊತ್ತಾ?

Kiccha Sudeep: ಕಿಚ್ಚ ಸುದೀಪ್‌ ಅವರು ಸಾಮಾನ್ಯವಾಗಿ ಹಲವರಿಗೆ ನಿರೀಕ್ಷೆಗೂ ಮೀರಿ ಹೆಚ್ಚು ದುಬಾರಿ ಬೆಲೆಯ ಉಡುಗೊರೆಗಳನ್ನು ಕೊಟ್ಟಿರುವ ಉದಾಹರಣೆಗಳಿವೆ. ಹಾಗೆಯೇ ಇತ್ತೀಚೆಗಷ್ಟೇ ನಡೆದ ಬಿಗ್‌ ಬಾಸ್‌ 11 ಗ್ರ್ಯಾಂಡ್‌ ಫಿನಾಲೆ ವೇಳೆ ಅಮ್ಮನನ್ನ ನೆನಪಿಸುವ ಹಾಡಿಗೆ ನೃತ್ಯ ಮಾಡಿದ ಯುವನ್‌ ಎಂಬ ಬಾಲಕನಿಗೆ ತಮ್ಮ ಕೈಯಲ್ಲಿದ್ದ ದುಬಾರಿ ಬೆಲೆಯ ಬ್ರೇಸ್‌ಲೇಟ್‌ ಅನ್ನು ನೀಡಿ ಗಮನ ಸೆಳೆದಿದ್ದಾರೆ.

ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ ಸೆಟ್‌ಗೆ ಏರುವ ಮುನ್ನ ತಂದೆ-ತಾಯಿ, ದೇವರ ಫೋಟೋಗೆ ನಮಸ್ಕಾರ ಮಾಡಿ ಬರುತ್ತಿದ್ದರಂತೆ. ಇನ್ನೂ ಇತ್ತೀಚೆಗಷ್ಟೇ ಅವರು ತಮ್ಮ ತಾಯಿ ಕಳೆದುಕೊಂಡಿದ್ದು, ಅದೇ ದುಃಖದಲ್ಲಿದ್ದಾರೆ. ಈಗಲೂ ಸಹ ಅವರು ನನ್ನ ತಾಯಿ ಎಲ್ಲೂ ಹೋಗಿಲ್ಲ, ಎದೆಯಲ್ಲೇ ಅಡಗಿದ್ದಾರೆ ಎಂದು ಯುವನ್‌ ನೃತ್ಯ ಮಾಡಿದಾಗ ಭಾವುಕರಾಗಿ ಹೇಳುತ್ತಾರೆ.

What Did Young Yuvan Say About Kiccha Sudeep Giving Him a Bracelet

ಗ್ರ್ಯಾಂಡ್‌ ಫಿನಾಲೆ ದಿನ ಯೋಗರಾಜ ಭಟ್ರು ಸುದೀಪ್‌ಗಾಗಿ ತಮ್ಮ ತಂಡದ ವತಿಯಿಂದ ಒಂದು ನೃತ್ಯವನ್ನು ಆಯೋಜನೆ ಮಾಡಿದ್ದರು. ಅದುವೇ ಅಮ್ಮ.. ಅಮ್ಮ ಎನ್ನುವ ಹಾಡು. ಈ ಹಾಡಿಗೆ ಮುದ್ದಾಗಿ ನೃತ್ಯ ಮಾಡಿದ ಯುವನ್‌ನನ್ನು ತಬ್ಬಿಕೊಂಡ ಸುದೀಪ್‌ ಆ ಬಾಲಕನಿಗೆ ತಮ್ಮ ಕೈಯಲ್ಲಿದ್ದ ಬ್ರೇಸ್‌ಲೇಟ್‌ ಅನ್ನು ಬಿಚ್ಚಿಕೊಟ್ಟರು. ಬಳಿಕ ನನ್ನ ಪಾತ್ರವಾಗಿ ಇಲ್ಲಿ ಬಂದು ನೃತ್ಯ ಮಾಡಿ ನನ್ನ ಮತ್ತು ತಾಯಿಯನ್ನು ವೇದಿಕೆ ಮೇಲೆ ತಂದಿದ್ದಕ್ಕೆ ತುಂಬಾ ಧನ್ಯವಾದ ಅಂತಾ ಬಾಲಕನ್ನು ತಬ್ಬಿಕೊಂಡು ಭಾವುಕರಾಗಿ ಹೇಳುತ್ತಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕ ಯುವನ್ ಸುದೀಪ್ ಸರ್ ಮುಂದೆ ಫಸ್ಟ್ ಟೈಂ ಡ್ಯಾನ್ಸ್ ಮಾಡಿದ್ದೆ. ಸುದೀಪ್ ಸರ್‌ನ ನೋಡೋಕೆ ಕಾಯುತ್ತಿದ್ದೆ. ನನ್ನ ಬಾಲ್ಯ ನೆನಪಿಸಿದ್ದಕ್ಕೆ ಧನ್ಯವಾದ. ಮುಂದೆ ಚೆನ್ನಾಗಿ ಬೆಳೆಯಿರಿ ಎಂದು ಸುದೀಪ್ ಸರ್ ಆಶೀರ್ವದಿಸಿದರು ಎಂದು ಬಾಕಲ ಹೇಳಿದ್ದಾನೆ. ಅಲ್ಲದೆ, ಅದನ್ನು ಫೋಟೋ ಪ್ರೇಮ್‌ ಹಾಕಿಸಿಕೊಂಡು ಇಟ್ಟುಕೊಳ್ಳುತ್ತೇವೆ ಅಂತಲೂ ಹೇಳಿದ್ದಾನೆ ಅಂತಾ ಪಬ್ಲಿಕ್‌ ಟಿವಿ ವರದಿ ಮಾಡಿದೆ.

ಮೂಲಕಗಳ ಪ್ರಕಾರ, ಯುವನ್‌ಗೆ ಕಿಚ್ಚ ಸುದೀಪ್‌ ಉಡುಗೊರೆಯಗಿ ನೀಡಿದ ಬ್ರೇಸ್‌ಲೇಟ್‌ ದರ 30 ಲಕ್ಷಕ್ಕೂ ಹೆಚ್ಚು ಎಂದು ಹೇಳಲಾಗುತ್ತಿದೆ. ಅದು ಪ್ಲಾಟಿನಂನಲ್ಲಿ ವಜ್ರದ ಹರಳುಗಳನ್ನು ಪೋಣಿಸಿ ಕಟ್ಟಿರುವ ಬ್ರೇಸ್‌ಲೇಟ್‌ ಎಂದು ಹೇಳಾಗುತ್ತಿದೆ. ತನ್ನ ಪ್ರೀತಿ ತೋರಿಸುವಾಗ ಯಾರಿಗಾದರೂ ಗಿಫ್ಟ್ ಕೊಡುವಾಗ ಸುದೀಪ ಅವರು ಎಂದಿಗೂ ಅದರ ಬೆಲೆ, ಆಗುವ ಖರ್ಚಿನ ಬಗ್ಗೆ ಯೋಚಿಸುವುದಿಲ್ಲ. ಇದಕ್ಕಾಗಿಯೇ ಅವರಿಗೆ ಅಭಿಮಾನಿಗಳ ಬಳಗ ಇದೆ. ಅಲ್ಲದೆ, ಜನರು ಇವರ ತೋರುವ ಈ ಪ್ರೀತಿಗೆ ಫಿದಾ ಆಗ್ಬಿಟ್ಟಿದ್ದಾರೆ.

ಇತ್ತೀಚೆಗಷ್ಟೇ ಬಿಗ್‌ ಬಾಸ್ ಸೀಸನ್ 11ರ ಮನೆಯಲ್ಲಿ ರಜತ್‌ ಹಾಗೂ ಚೈತ್ರಾ ಕುಂದಾಪುರ್ ಅವರಿಗೆ ಎರಡು ಕಿವಿಯಲ್ಲಿದ್ದ ಒಂದೊಂದು ರಿಂಗ್‌ ಅನ್ನು ಒಬ್ಬರಿಗೆ ನೀಡಿದ್ದರು. ಅಷ್ಟೇ ಅಲ್ಲದೆ, ಬಿಗ್‌ ಬಾಸ್‌ ಮನೆಯಿಂದ ಉಗ್ರಂ ಮಂಜು ಹೊರಬಂದ ಮೇಲೆ ತಮಗೆ ಬಂದತಂಹ ಗಿಫ್ಟ್‌ ವೋಚರ್‌ಗಳನ್ನು ಬೇರೆಯವರಿಗೆ ನೀಡುವಂತೆ ಹೇಳುತ್ತಾರೆ. ಆಗ ಅವರಿಗೆ ನಾನು ಕೊಡುತ್ತೇನೆ, ನೀನು ಇದನ್ನು ಗೌರವಯುತವಾಗಿ ಸ್ವೀಕರಿಸು ಎಂದು ಹೇಳುವ ಮೂಲಕ ಉಗ್ರಂ ಮಂಜುಗೆ ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+