ಆಡಿಯೋ ಬಗ್ಗೆ ಕ್ಷಮೆ ಕೇಳಿದ ಮಡೆನೂರು ಮನುಗೆ ನಟ ಧ್ರುವ ಸರ್ಜಾ ಹೇಳಿದ್ದೇನು?
ಸ್ಯಾಂಡಲ್‌ವುಡ್ ನಟರಾದ ಶಿವರಾಜ್‌ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಅವರ ಬಗ್ಗೆ ಅವಹೇಳನಕಾರಿ ಆಡಿಯೋ ವೈರಲ್ ಬಗ್ಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಜೈಲಿನಿಂದ ಹೊರಬಂದ ನಂತರ ಸ್ಪಷ್ಟನೆ ನೀಡಿದ್ದರು. ಆ ಆಡಿಯೋ ನನ್ನದಲ್ಲ ಎಂದು ಮನು ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಆ ಆಡಿಯೋ ಕಾರಣಕ್ಕಾಗಿ ಮನು ಅವರನ್ನು ಸಿನಿಮಾಗಳಿಂದ ಬ್ಯಾನ್ ಕೂಡ ಮಾಡಲಾಗಿದೆ. ಆ ಆಡಿಯೋ ವಿಚಾರವಾಗಿ ಮನು ಧ್ರುವ ಸರ್ಜಾಗೆ ಫೋನ್ ಮಾಡಿ ಕ್ಷಮೆ ಕೇಳಿದ್ದಾರೆ. ಇದಕ್ಕೆ ಧ್ರುವ ಸರ್ಜಾ ಹೇಳಿದ್ದೇನು ಗೊತ್ತಾ?
ಅತ್ಯಾ*ಚಾರ ಕೇಸ್‌ನಲ್ಲಿ ಜೈಲು ಸೇರಿದ್ದ ಮಡೆನೂರು ಮನು ಜಾಮೀನಿನ ಮೇಲೆ ಹೊರಬಂದಿದ್ದಾರೆ. ವೈರಲ್ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದ ಮನು ಆ ಆಡಿಯೋ ನಂದಲ್ಲ ಎಂದಿದ್ದರು. ಅಲ್ಲದೆ ಈ ಬಗ್ಗೆ ನಾನು ಏನು ಹೇಳಿದ್ರೂ ನಂಬುವ ಸ್ಥಿತಿಯಲ್ಲಿ ಜನರಿಲ್ಲ. ನಟರ ಬಳಿ ಕ್ಷಮೆ ಕೇಳುವುದಾಗಿ ಹೇಳಿದ್ದರು. ಅದರಂತೆ ಮನು ಧ್ರುವ ಸರ್ಜಾ ಅವರನ್ನ ಸಂಪರ್ಕಿಸಿ ಕ್ಷಮೆ ಕೇಳಿದ್ದಾರೆ.

ʼಅಣ್ಣಾ ನಮಸ್ತೆ, ನಾನು ಮಡೆನೂರು ಮನು ಮಾತನಾಡ್ತಾ ಇದ್ದೀನಿ, ನಾನು ನಿಜವಾಗಲೂ ಉದ್ದೇಶಪೂರ್ವಕವಾಗಿ ನಾನು ಮಾತನಾಡಿಲ್ಲ ಅಣ್ಣ. ನಾನು ತಪ್ಪು ಮಾಡಿಲ್ಲ. ನನ್ನಿಂದ ತಪ್ಪು ಮಾಡಿಸಿದ್ದಾರೆ ಎಂದು ಮನು ಧ್ರುವ ಸರ್ಜಾಗೆ ಹೇಳಿದ್ದಾರೆ. ಒಂದು ಒಳ್ಳೆ ಸಿನಿಮಾವನ್ನ ಎಲ್ಲರೂ ಸೇರಿಕೊಂಡು ಕೊಂದಿದ್ದಾರೆ. ಮುಂದೆ ಏನಾಗುತ್ತೋ ಗೊತ್ತಿಲ್ಲ, ನನ್ನ ಸಿನಿಮಾದಿಂದ ಬ್ಯಾನ್ ಮಾಡಬೇಕು ಅಂತ ಎಲ್ರೂ ಹೇಳ್ತಿದ್ದಾರೆ. ನೀವೆಲ್ಲ ಮನಸು ಮಾಡಿದ್ರೆ ನಾನು ಮತ್ತೆ ಬದುಕು ಕಟ್ಟಿಕೊಳ್ತೀನಿ ಎಂದು ಮನು ಫೋನ್ ಕಾಲ್‌ನಲ್ಲಿ ಧ್ರುವ ಸರ್ಜಾಗೆ ಬೇಡಿಕೊಂಡಿದ್ದಾರೆ.
ನಾನು ಕಲೆಯನ್ನು ನಂಬಿಕೊಂಡು ಇಲ್ಲಿಗೆ ಬಂದಿದ್ದೀನಿ, ನನಗೆ ಬೇರೆ ಏನೂ ಗೊತ್ತಿಲ್ಲ, ಸ್ವಲ್ಪ ಸಂಘ-ಸಹವಾಸ ಮಾಡಿ ಹಾಳಾಗಿದ್ದೆ. ಇನ್ಮುಂದೆ ಯಾರ ಸಹವಾಸಕ್ಕೂ ಹೋಗಲ್ಲ, ದಯವಿಟ್ಟು ನನಗೆ ಒಂದು ಅವಕಾಶ ಕೊಡಿ, ನೀವೆಲ್ಲ ಅವಕಾಶ ಕೊಟ್ರೆ ಜೀವನ ಕಟ್ಟಿಕೊಳ್ತೀನಿ, ನಾನು ತುಂಬಾ ಬದಲಾಗುತ್ತೀನಿ ಅಣ್ಣ, ನನ್ನ ದಯವಿಟ್ಟು ಕ್ಷಮಿಸಿ, ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.
ಧ್ರುವ ಹೇಳಿದ್ದೇನು?
ಮನು ಮಾತಿಗೆ ರಿಪ್ಲೈ ಮಾಡಿರುವ ಧ್ರುವ ಸರ್ಜಾ ಅವರು, ನನಗಿಂತ ಶಿವಣ್ಣ, ದರ್ಶನ್ ಅವರು ಸೀನಿಯರ್‌ಗಳು, ಮೊದಲು ಅವರ ಜೊತೆ ಮಾತನಾಡಿ, ನನ್ನ ಬಗ್ಗೆ ಯೋಚನೆ ಮಾಡಬೇಡಿ, ಡೋಂಟ್ ವರಿ ಎಂದು ಧೈರ್ಯ ತುಂಬಿದ್ದಾರೆ. ಜೊತೆಗೆ ನಿಮ್ಮ ಹೆಂಡತಿ, ಮಗು, ತಾಯಿಯ ಬಗ್ಗೆಯೂ ಕಾಳಜಿ ವಹಿಸಿ ಎಂದು ಧ್ರುವ ಮನುಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೆ ಮತ್ತೆ ಉತ್ತರಿಸಿರುವ ಮಡೆನೂರು ಮನು, ಅಣ್ಣ ನಾನು ನನ್ನ ಕುಟುಂಬದ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ತೀನಿ, ಇನ್ನು ಮುಂದೆ ನಾನು ತುಂಬಾ ಬದಲಾಗುತ್ತೇನೆ. ನನಗೆ ಬದಲಾಗಲು ಅವಕಾಶ ಕೊಟ್ಟಿರುವುದೇ ನನ್ನ ದೊಡ್ಡ ಪುಣ್ಯ, ಜೈಲಿನಿಂದ ಹೊರಬಂದ ಬೇಜಾರಿನಲ್ಲಿದ್ದೆ, ನಿಮ್ಮನ್ನ ಭೇಟಿಯಾಗಿ ಏನು ನಡೆದಿದೆ ಅನ್ನೋದನ್ನ ಹೇಳಬೇಕು ಅಂದುಕೊಂಡಿದ್ದೀನಿ, ನೀವು ಎಲ್ಲಿ ಸಿಗುತ್ತೇನೆ ಅಂದ್ರೆ ಅಲ್ಲಿಗೆ ಬಂದು ನಿಮ್ಮ ಬಳಿ ಕ್ಷಮೆ ಕೇಳ್ತೀನಿ ಎಂದು ಮನು ಕೇಳಿಕೊಂಡಿದ್ದಾರೆ.












Click it and Unblock the Notifications