Bigg Boss Kannada: ಬಿಗ್‌ಬಾಸ್‌ ಮನೆಗೆ ಹೋಗುವ ಬಗ್ಗೆ ನಟಿ ಸುಧಾರಾಣಿ ಹೇಳಿದ್ದೇನು?

Bigg Boss Kannada 12: ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದ್ದು, ಯಾರೆಲ್ಲ ಈ ಬಾರಿಯ ಸ್ಪರ್ಧಿಗಳು ಎಂಬ ಕುತೂಹಲ ಇದೆ. ಕಲರ್ಸ್‌ ವಾಹಿನಿ ಇತ್ತೀಚೆಗೆ ಪ್ರೋಮೋ ಹಂಚಿಕೊಂಡು ಸ್ಪರ್ಧಿಗಳ ಬಗ್ಗೆ ಹಿಂಟ್‌ ಕೊಟ್ಟಿತ್ತು. ಯಾವೆಲ್ಲ ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಿದೆ ಎಂಬ ಸುಳಿವು ನೀಡಿತ್ತು. ಹೀಗಾಗಿ ಸೋಷಿಯಲ್‌ ಮೀಡಿಯಾದಲ್ಲಿ ಈಗಾಗಲೇ ಹಲವರ ಹೆಸರು ಹರಿದಾಡುತ್ತಿದೆ. ಈ ಪೈಕಿ ಹಿರಿಯ ನಟಿ ಸುಧಾರಾಣಿ ಅವರ ಹೆಸರು ಕೂಡ ಸಖತ್‌ ಸೌಂಡ್‌ ಮಾಡ್ತಿದೆ. ಸುಧಾರಾಣಿ ಅವರು ಈ ಬಾರಿ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳುವುದು ಗ್ಯಾರೆಂಟಿ ಎಂದೆಲ್ಲ ತಲೆಮೇಲೆ ಹೊಡೆದಂತೆ ಹೇಳುತ್ತಿದ್ದಾರೆ. ಈ ಬಗ್ಗೆ ಸುಧಾರಾಣಿ ಅವರು ಕೊನೆಗೂ ಮೌನ ಮುರಿದಿದ್ದಾರೆ.

ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮಿಂಚಿರುವ ನಟಿ ಸುಧಾರಾಣಿ ಅವರು ಸದ್ಯ ಕಿರುತೆರೆಯಲ್ಲೂ ಅಬ್ಬರಿಸುತ್ತಿದ್ದಾರೆ. ಕಳೆದ ಹಲವು ಸೀಸನ್‌ಗಳ ಸಂದರ್ಭದಲ್ಲಿಯೂ ಸುಧಾರಾಣಿ ಕಂಟೆಸ್ಟೆಂಟ್‌ ಆಗಿ ಕಾಣಿಸಿಕೊಳ್ತಾರೆ ಎಂದು ಹೇಳಲಾಗುತ್ತಿತ್ತು. ಬಿಗ್‌ಬಾಸ್‌ ಪ್ರೇಕ್ಷಕರು ಕೂಡ ಸುಧಾರಾಣಿ ಅವರನ್ನು ದೊಡ್ಮನೆಯಲ್ಲಿ ನೋಡಬೇಕು ಎಂದು ಕಾತರದಿಂದ ಕಾಯುತ್ತಿದ್ದರು. ಆದರೆ ಶೋ ಶುರುವಾದಾಗ ಇದು ನಿರಾಸೆಯಾಗುತ್ತಿತ್ತು. ಆದರೆ ಈ ಬಾರಿ ಸುಧಾರಾಣಿ ಬಿಗ್‌ಬಾಸ್‌ಗೆ ಹೋಗೋದು ಕನ್ಫರ್ಮ್‌ ಎಂದು ಹೆಚ್ಚು ಸುದ್ದಿಯಾಗುತ್ತಿದೆ.

What Did Actress Sudharani Say About Joining Bigg Boss Kannada Season 12

ಸಾಮಾನ್ಯವಾಗಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಸೆಲೆಬ್ರಿಟಿಗಳೇ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಳ್ತಾರೆ. ಹಾಗಾಗಿ ಸುಧಾರಾಣಿ ಅವರ ಹೆಸರು ಎಲ್ಲೆಡೆ ಹರಿದಾಡುತ್ತಿದೆ. ಈಗ ಅವರು ಕಿರುತೆರೆಯಲ್ಲೂ ಸದ್ದು ಮಾಡುತ್ತಿರುವುದರಿಂದ ಬಿಗ್‌ಬಾಸ್‌ ಹೋಗುವುದು ಮಾತ್ರವಲ್ಲದೆ, ಇವರೇ ಈ ಸೀಸನ್‌ನ ವಿನ್ನರ್‌ ಎಂದೆಲ್ಲ ಹೇಳುತ್ತಿದ್ದಾರೆ. ಈ ವದಂತಿ ಹಬ್ಬಿರುವ ಹಿನ್ನೆಲೆ ಸುಧಾರಾಣಿ ಅವರೇ ಸ್ಪಷ್ಟನೆ ಕೊಡುವ ಕೆಲಸ ಮಾಡಿದ್ದಾರೆ.

ಬಿಗ್‌ಬಾಸ್‌ ಶೋ ಅಧಿಕೃತವಾಗಿ ಶುರುವಾಗುವವರೆಗೆ ಎಲ್ಲೆಡೆ ಗಾಸಿಪ್‌ ಹರಿದಾಡುವುದು ಕಾಮನ್.‌ ಇನ್ನು ಸೋಷಿಯಲ್‌ ಮೀಡಿಯಾದ ಬಂದಾಗಿನಿಂದಲೂ ಸಿಕ್ಕ ಸಿಕ್ಕವರ ಹೆಸರನ್ನೆಲ್ಲ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಲಿಂಕ್‌ ಮಾಡಲಾಗುತ್ತಿದೆ. ಅನೇಕರು ಈ ವದಂತಿಗಳನ್ನೇ ಸತ್ಯ ಎಂದು ನಂಬಿ ಕೊನೆಗೆ ಮೋಸ ಹೋಗುತ್ತಾರೆ. ಆದರೂ ಸೋಷಿಯಲ್‌ ಮೀಡಿಯಾದಲ್ಲಿ ಅವರು ಹೋಗ್ತಾರಂತೆ, ಇವರು ಹೋಗ್ತಾರಂತೆ ಅನ್ನೋ ಸುದ್ದಿ ಹರಿದಾಡುತ್ತಲೇ ಇದೆ.

ಯಾವ್‌ ಬೋ*** ಹೇಳಿದ್ದು?

ನಟಿ ಸುಧಾರಾಣಿ ಅವರು ಸದ್ಯ ಪೋಷಕ ಪಾತ್ರಗಳಲ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸೀರಿಯಲ್‌ನಲ್ಲಿಯೂ ಸುಧಾರಾಣಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಬಿಗ್‌ಬಾಸ್‌ ಶೋ ಮೂಲಕ ಮತ್ತೆ ಕನ್ನಡಿಗರ ಗಮನ ಸೆಳೆಯಲಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ಬಗ್ಗೆ ಸುಧಾರಾಣಿ ಅವರು ಟ್ರೋಲ್‌ ವಿಡಿಯೋ ಮೂಲಕವೇ ತಿರುಗೇಟು ನೀಡಿದ್ದಾರೆ. ತಮ್ಮದೇ ಡೈಲಾಗ್‌ ಮೂಲಕ ಸ್ಪಷ್ಟನೆ ನೀಡಿರುವ ಸುಧಾರಾಣಿ, ಯಾರ್‌ ಹೇಳಿದ್ದು? ಯಾವ್‌ ಬೋ***ಎಂಬ ತಮ್ಮ ಸಿನಿಮಾದ ಕಾಮಿಡಿ ವಿಡಿಯೋ ಶೇರ್‌ ಮಾಡಿದ್ದಾರೆ. ಈ ಮೂಲಕ ಬಿಗ್‌ಬಾಸ್‌ಗೆ ಹೋಗ್ತಿಲ್ಲ ಎಂದು ಸುಧಾರಾಣಿ ಕ್ಲಾರಿಟಿ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+