ರಜನಿಕಾಂತ್ ಮಾಜಿ ಅಳಿಯನ ಜೊತೆ ಡೇಟಿಂಗ್; ಸತ್ಯ ಬಾಯ್ಬಿಟ್ಟ ನಟಿ ಮೃಣಾಲ್
ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರನ್ನು ಮದುವೆಯಾಗಿದ್ದರು. ಇತ್ತೀಚೆಗಷ್ಟೇ ಅವರು ವೈಯಕ್ತಿಕ ಕಾರಣಗಳಿಂದ ಪರಸ್ಪರ ಡಿವೋರ್ಸ್ ಪಡೆದಿದ್ದರು. ಬರೋಬ್ಬರಿ 18 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳಿದ್ದರು. ಇದರ ಬೆನ್ನಲ್ಲೇ ನಟ ಧನುಷ್ ಮತ್ತೊಬ್ಬ ನಟಿಯೊಂದಿಗೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿದೆ. ಅದು ಬೇರೆ ಯಾರೂ ಅಲ್ಲ, ಸೀತಾರಾಮಂ ಹಾಗೂ ಹಾಯ್ ನಾನ್ನ ಸಿನಿಮಾಗಳ ಖ್ಯಾತಿಯ ಮೃಣಾಲ್ ಠಾಕೂರ್. ಇವರಿಬ್ಬರ ಡೇಟಿಂಗ್ ವದಂತಿ ಎಲ್ಲೆಡೆ ಹರಿದಾಡಿದ್ದರಿಂದ ಮೃಣಾಲ್ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ.
ಮೃಣಾಲ್ ಠಾಕೂರ್ ನಟನೆಯ ಸನ್ ಆಫ್ ಸರ್ದಾರ್ 2 ಪ್ರೀಮಿಯರ್‌ನಲ್ಲಿ ನಟ ಧನುಷ್ ಕಾಣಿಸಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಮೃಣಾಲ್ ಧನುಷ್ ಅವರನ್ನು ಸ್ವಾಗತಿಸಲು ಆತುರಪಡುತ್ತಿರುವುದು, ಪಾಪರಾಜಿಗಳಿಂದ ಛಾಯಾಚಿತ್ರ ತೆಗೆಯಲು ರೆಡ್ ಕಾರ್ಪೆಟ್‌ಗೆ ಹೋಗುವ ಮೊದಲು ಅಕ್ಕಪಕ್ಕದಲ್ಲಿ ಅಪ್ಪಿಕೊಳ್ಳುವ ವಿಡಿಯೋ ವೈರಲ್ ಆಗಿತ್ತು. ಸನ್ ಆಫ್ ಸರ್ದಾರ್ 2 ಚಿತ್ರದ ಫಸ್ಟ್ ಶೋಗೆ ಧನುಷ್ ಬಂದಿದ್ದರು. ವಿಶೇಷವಾಗಿ ಮೃಣಾಲ್‌ಗೆ ಹುರಿದುಂಬಿಸಲು ಧನುಷ್ ಬಂದಿದ್ದರು ಎಂದು ಗಾಸಿಪ್ ಶುರುವಾಗಿತ್ತು. ಧನುಷ್ ಈ ಊಹಾಪೋಹಕ್ಕೆ ಪ್ರತಿಕ್ರಿಯಿಸಲಿಲ್ಲ. ನಟನನ್ನು ವಾಸ್ತವವಾಗಿ ಅಜಯ್ ದೇವಗನ್ ಆಹ್ವಾನಿಸಿದ್ದು ಎಂದು ಮೃಣಾಲ್ ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ವೀಡಿಯೊ ವೈರಲ್ ಆದ ನಂತರ ಧನುಷ್ ಜೊತೆಗಿನ ಡೇಟಿಂಗ್ ವದಂತಿಯ ಬಗ್ಗೆಯೂ ನಟಿ ಮಾತನಾಡಿದ್ದಾರೆ. ಧನುಷ್ ನನಗೆ ಒಳ್ಳೆಯ ಸ್ನೇಹಿತ ಅಷ್ಟೇ. ಇತ್ತೀಚೆಗೆ ನಮ್ಮಿಬ್ಬರ ನಡುವೆ ಸಂಬಂಧ ಇದೆ ಎಂಬ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ ಎಂದು ನನಗೆ ತಿಳಿದಿದೆ. ಅದನ್ನು ನೋಡಿದಾಗ ನನಗೆ ತಮಾಷೆ ಎನಿಸಿತು. ಧನುಷ್ ಸನ್ ಆಫ್ ಸರ್ದಾರ್-2 ನೋಡಲು ಬಂದಿದ್ದರು. ಯಾರೂ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಅವರನ್ನು ಆಹ್ವಾನಿಸಿದ್ದೇ ಅಜಯ್ ದೇವಗನ್ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
'ನಮ್ಮಿಬರ ನಡುವೆ ಅದೆಲ್ಲ ಇಲ್ಲ'
ಧನುಷ್ ನನಗೆ ಒಳ್ಳೆಯ ಸ್ನೇಹಿತ. ಈಗಿನ ವದಂತಿಗಳೆಲ್ಲವೂ ಆಧಾರರಹಿತ ಎಂದು ತಳ್ಳಿಹಾಕಿದ್ದಾರೆ. ಮಾಧ್ಯಮಗಳಲ್ಲಿ ಕೇಳಿಬಂದ ಈ ಸುದ್ದಿ ನೋಡಿ ಜೋಕ್ ಎನಿಸಿತು. ನಮ್ಮ ನಡುವೆ ಯಾವುದೇ ಪ್ರಣಯವಿಲ್ಲ ಎಂದೂ ಮೃಣಾಲ್ ಕ್ಲಾರಿಟಿ ಕೊಟ್ಟಿದ್ದಾರೆ. ಧನುಷ್ ಬಂದಿದ್ದು ಅಜಯ್ ದೇವಗನ್ ಆಹ್ವಾನದ ಮೇರೆಗೆ, ನಾನು ಅವರನ್ನು ಅಲ್ಲಿಗೆ ಕರೆದಿರಲಿಲ್ಲ ಎಂದಿದ್ದಾರೆ.
ಸನ್ ಆಫ್ ಸರ್ದಾರ್ 2 ಪ್ರದರ್ಶನಕ್ಕೂ ಮುನ್ನ ಮೃಣಾಲ್ ಠಾಕೂರ್ ಧನುಷ್ ಅವರ ಮುಂಬರುವ ಚಿತ್ರ ತೇರೆ ಇಷ್ಕ್ ಮೇ ಚಿತ್ರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಲ್ಲದೆ ಮೃಣಾಲ್ ಇನ್ಸ್ಟಾಗ್ರಾಮ್‌ನಲ್ಲಿ ಧನುಷ್ ಸಹೋದರಿಯರನ್ನು ಫಾಲೋ ಮಾಡಲು ಶುರುಮಾಡಿದ ನಂತರವೇ ಈ ಗಾಸಿಪ್ ಖಚಿತ ಪಡಿಸಿದ್ದರು. ನಟಿ ಧನುಷ್ ಅವರ ಕುಟುಂಬಕ್ಕೆ ಹತ್ತಿರವಾಗುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಸಹೋದರಿಯನ್ನು ಪರಿಚಯ ಮಾಡಿಕೊಳ್ಳುತ್ತಿದ್ದಾರೆ ಎಂದೆಲ್ಲ ಹೇಳಲಾಗಿತ್ತು.












Click it and Unblock the Notifications