Vickypedia: 'Married Girls.. Married Girls.. ಯಾಕ್ ಆದ್ವೋ ಮದುವೆ...' ವಿಕ್ಕಿಪೀಡಿಯಾ ವಿಕಾಸ್ ನ್ಯೂ ಸಾಂಗ್ ವೈರಲ್...
ವಿಕ್ಕಿಪೀಡಿಯಾ ವಿಕಾಸ್ ಯಾರಿಗೆ ತಾನೆ ಗೊತ್ತಿಲ್ಲಾ ಹೇಳಿ. ದಿನಕ್ಕೊಂದು ಹಾಡುಗಳನ್ನು ಕ್ರೀಯೇಟ್ ಮಾಡ್ತಾ ಸದ್ದಿಲ್ಲದೇ ಸುದ್ದಿಯಾಗಿಬಿಟ್ಟಿದ್ದಾರೆ ವಿಕಾಸ್. ಅಂದಹಾಗೆ ವಿಕ್ಕಿಪೀಡಿಯಾ ವಿಕಾಸ್ ಅಂದ್ರೆ ಕೆಲವರಿಗೆ ಬೇಗ ಗೊತ್ತಾಗೋದಿಲ್ಲ. ಆದರೆ 'ನಾನು ನಂದಿನಿ ಬೆಂಗಳೂರಿಗೆ ಬಂದಿನಿ..' ಈ ಸಾಂಗ್ ಹೇಳಿದರೆ ಸಾಕು ವಿಕ್ಕಿಪೀಡಿಯಾ ವಿಕಾಸ್ ಯಾರು ಅನ್ನೋದು ಗೊತ್ತಾಗೋಗುತ್ತೆ. ಈ ಹಾಡಿನ ಮೂಲಕ ಅಷ್ಟೊಂದು ಹೆಸರು ಮಾಡಿದ್ದಾರೆ ವಿಕ್ಕಿಪೀಡಿಯಾ ವಿಕಾಸ್. ಸದ್ಯ ಅವರು ಮತ್ತೊಂದು ಸಾಂಗ್ ಹಂಚಿಕೊಂಡಿದ್ದು ಸಾಕಷ್ಟು ವೈರಲ್ ಆಗಿದೆ.
ಹೌದು... ಇತ್ತೀಚೆಗೆ Single Girls...Single Girls.. ಹಾಡನ್ನು ಹಂಚಿಕೊಂಡಿದ್ದ ಅವರು ಈಗ Married Girls... Married Girls... ಹಾಡನ್ನು ಹಂಚಿಕೊಂಡಿದ್ದಾರೆ. ಈ ಎರಡೂ ಹಾಡುಗಳು ಪುಟ್ಟ ಮಕ್ಕಳ ರೈಮ್ಸ್‌ನ ರಿಲೀಕ್ಸ್ ಆಗಿದೆ. 'Jingle Bells.. Jingle Bells.. Jingle All The Way..' ಹಾಡನ್ನು 'Married girls... Married girls... ಯಾಕ್ ಆದ್ವೋ ಮದುವೆ' ಹಾಡಾಗಿ ಪರಿವರ್ತನೆ ಮಾಡಿದ್ದಾರೆ.

ಈ ಹಾಡಿನಲ್ಲಿ ಮದುವೆಯಾದ ಮಹಿಳೆಯರ ಕಷ್ಟಗಳನ್ನು ವಿವರಿಸಲಾಗಿದೆ. ಮದುವೆ ಮುಂಚೆ ಹುಡುಗಿಯರು ಹೇಗೆ ಇರ್ತಾರೆ, ಆಮೇಲೆ ಹೇಗೆ ಆಗುತ್ತಾರೆ ಎನ್ನುವುದನ್ನು ಈ ಹಾಡಿನಲ್ಲಿ ವಿವರಿಸಲಾಗಿದೆ. ಇದನ್ನು 'ಜಿಂಗಲ್ ಬೆಲ್ಸ್' ರೈಮ್ಸ್ ರಿಲೀಕ್ಸ್‌ನಲ್ಲಿ ತಮ್ಮದೇ ಆದ ಶೈಲಿಯಲ್ಲಿ ಹಾಡಿದ್ದಾರೆ ವಿಕಾಸ್.
ಹುಡುಗಿಯರ ರೀತಿ ಉಡುಪು ಧರಿಸಿ, ಉದ್ದನೇಯ ಬಣ್ಣ ಬಣ್ಣದ ಕೂದಲಿನ ವಿಗ್ ಹಾಕಿಕೊಂಡು ಸಖತ್ ಕಾಮಿಡಿಯಾಗಿ ಕಾಣುವ ವಿಕಾಸ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಹಾಗಾದರೆ ಈ ಹಾಡಿನಲ್ಲಿ ಏನಿದೆ? ನೀವು ಕೂಡ ವಿಕಾಸ್ ರೀತಿ ಒಮ್ಮೆ ಹಾಡಲು ಟ್ರೈ ಮಾಡಿ...
ವಿಕ್ಕಿಪೀಡಿಯಾ ವಿಕಾಸ್ ನ್ಯೂ ಸಾಂಗ್ ಹೀಗಿದೆ...
married girls... married girls... ಯಾಕ್ ಆದ್ವೋ ಮದುವೆ.. daddy's princess ಆಗಿದ್ದೋರು servant ಆಗೋದ್ವೆ.. hey... married girls... married girls... ಯಾಕ್ ಆದ್ವೋ ಮದುವೆ.. daddy's princess ಆಗಿದ್ದೋರು servant ಆಗೋದ್ವೆ...
ಮಕ್ಳನ್ ನೋಡ್ತೀನಿ.. ಮನೆ ಕೆಲಸ ಮಾಡ್ತೀನಿ.. ಎಷ್ಟೇ ಸುಸ್ತ್ ಇದ್ರುನು 3 times ಅಡುಗೆ ಮಾಡ್ತೀನಿ.... ಗಂಡ ಬೈಕೊಂಡರೂ.. ಅತ್ತೆ ಕಿರಿಕ್ ಮಾಡಿದ್ರೂ.. ಮಕ್ಳ ಮುಖ ನೋಡಿ ನಾನು ಸಹಿಸ್ಕೊಂಡ್ ಇರ್ತೀನಿ... hey...married girls... married girls... ಯಾಕ್ ಆದ್ವೋ ಮದುವೆ.. daddy's princess ಆಗಿದ್ದೋರು servant ಆಗೋದ್ವೆ.. hey... married girls... married girls... ಯಾಕ್ ಆದ್ವೋ ಮದುವೆ.. daddy's princess ಆಗಿದ್ದೋರು servant ಆಗೋದ್ವೆ...
ಅಮ್ಮನ್ ಮನೆ ತವರಂತೆ.. ಕೊಟ್ ಹೆಣ್ ಕುಲಕೆ ಹೊರಗಂತೆ.. ನಂಗ್ ಮಾತ್ರ lifelong ಅಡ್ರೆಸ್ಸ್ care of ಅವ್ರು ಇವರಂತೆ.. ನಾನು job ಮಾಡ್ಬೇಕಂತೆ.. double income ಬೇಕಂತೆ.. salary ಮಾತ್ರ ನನ್ husbandಗಿಂತ ಕಡಿಮೆ ಇರಬೇಕಂತೆ.. hey... married girls... married girls... ಯಾಕ್ ಆದ್ವೋ ಮದುವೆ.. daddy's princess ಆಗಿದ್ದೋರು servant ಆಗೋದ್ವೆ... hey...married girls... married girls... ಯಾಕ್ ಆದ್ವೋ ಮದುವೆ.. daddy's princess ಆಗಿದ್ದೋರು servant ಆಗೋದ್ವೆ..
'ನಾನು ನಂದಿನಿ ಬೆಂಗಳೂರಿಗೆ ಬಂದಿನಿ' ಸಾಂಗ್ ಮೂಲಕ ವೈರಲ್
ವಿಕ್ಕಿಪೀಡಿಯಾ ವಿಕಾಸ್ 'ನಾನು ನಂದಿನಿ ಬೆಂಗಳೂರಿಗೆ ಬಂದಿನಿ' ಸಾಂಗ್ ಮೂಲ ರಾತ್ರೋ ರಾತ್ರಿ ಸಾಕಷ್ಟು ವೈರಲ್ ಆದ್ರು. ಆಗಿನಿಂದಲೂ ಅವರು ಇದೇ ರೀತಿಯಾಗಿ ಹಲವಾರು ಹಾಡುಗಳ ರಿಲೀಕ್ಸ್ ಮೂಲಕ ತಮ್ಮದೇ ಆದ ಶೈಲಿಯಲ್ಲಿ ಹಾಡು ಕ್ರೀಯೇಟ್ ಮಾಡಿ ವೀಡಿಯೋ ಮಾಡುತ್ತಲೇ ಇರುತ್ತಾರೆ.
ಜೊತೆಗೆ ಆ ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ವಿಕಾಸ್ ಅವರ ಈ ಹಾಡುಗಳು ಹಾಗೂ ಅವರ ಹಾಡಿನ ಶೈಲಿ ಯುವಪೀಳಿಗೆಗೆ ಇಷ್ಟವಾಗಿದೆ. ಹೀಗಾಗಿ ಇವರು ಕ್ರೀಯೆಟ್ ಮಾಡಿದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತೇ ಇರುತ್ತವೆ. ನೀವು ಈ ಹಾಡನ್ನು ಒಮ್ಮೆ ಹಾಡಲು ಟ್ರೈ ಮಾಡಿ... ಸಿಕ್ಕಾಪಟ್ಟೆ ನಗೋದು ಗ್ಯಾರಂಟಿ...












Click it and Unblock the Notifications