Monalisa: ಮೊನಾಲಿಸಾ ಈಗ ಗರ್ಭಿಣಿ, ಪೊಲೀಸ್‌ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ: ಆರೋಗ್ಯದ ಕಾರಣ ಕೊಟ್ಟ ಪತಿ ಫರ್ಮಾನ್‌

ಕುಂಭಮೇಳದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ವೈರಲ್ ಆಗಿದ್ದ ಮೊನಾಲಿಸಾ ಇತ್ತೀಚಿಗೆ ಮದುವೆಯಾದ ಬಳಿಕ ವಿವಾದಗಳ ಸುಳಿಯಲ್ಲಿ ಸಿಲುಕಿದ್ದಾರೆ. ಈ ನಡುವೆ ಮೊನಾಲಿಸಾ ಪತಿ ಫರ್ಮಾನ್‌, ತಮ್ಮ ಪತ್ನಿಯ ಆರೋಗ್ಯದ ಸ್ಥಿತಿಯ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ನಿ ಮೊನಾಲಿಸಾ ಈಗ ಗರ್ಭಿಣಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪೋಲೀಸರ ಮುಂದೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಮದುವೆ ಬಳಿಕ ವಿವಾದ

ಕುಂಭಮೇಳದ ವಿಡಿಯೋವೊಂದು ವೈರಲ್ ಆದ ನಂತರ ಮೊನಾಲಿಸಾ ಸಾರ್ವಜನಿಕವಾಗಿ ಸುದ್ದಿಯಾಗಿದ್ದರು. ಇತ್ತೀಚೆಗೆ ಕೇರಳದಲ್ಲಿ ಫರ್ಮಾನ್‌ ಜೊತೆಗೆ ಮೊನಾಲಿಸಾ ಮದುವೆಯಾಗಿತ್ತು. ನಂತರ ಮೊನಾಲಿಸಾ ಅಪ್ರಾಪ್ತೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಬೆಳವಣಿಗೆಯ ನಂತರ ಅವರ ವೈಯಕ್ತಿಕ ಜೀವನ ಮತ್ತು ಧಾರ್ಮಿಕ ಹಿನ್ನೆಲೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿದ್ದವು. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ವಿಚಾರಣೆಗಳಿಗಾಗಿ ಪೋಲೀಸರು ದಂಪತಿಗೆ ಸಮನ್ಸ್ ನೀಡಿದ್ದರು.

Monalisa

ಮಧ್ಯಪ್ರದೇಶದ ಖಾರ್ಗೋನ್ ಮೂಲದವರಾದ ಫರ್ಮಾನ್‌, ತಮ್ಮ ಪತ್ನಿಯ ಸದ್ಯದ ದೈಹಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ತನಿಖಾಧಿಕಾರಿಗಳ ಮುಂದೆ ಬರಲು ಕಾಲಾವಕಾಶ ಕೋರಿದ್ದಾರೆ. ಗರ್ಭಾವಸ್ಥೆಯ ಕಾರಣದಿಂದಾಗಿ ಅವರಿಗೆ ಪ್ರಯಾಣ ಮಾಡುವುದು ಮತ್ತು ಮಾನಸಿಕ ಒತ್ತಡ ಎದುರಿಸುವುದು ಕಷ್ಟವಾಗಬಹುದು ಎಂಬ ಕಾರಣವನ್ನು ಅವರು ನೀಡಿದ್ದಾರೆ. ಪೋಲೀಸರು ಈ ವಿಷಯವನ್ನು ಪರಿಶೀಲಿಸುತ್ತಿದ್ದು, ಮುಂದಿನ ಕಾನೂನು ಕ್ರಮಗಳ ಬಗ್ಗೆ ನಿರ್ಧರಿಸಲಿದ್ದಾರೆ.

ಕುಂಭಮೇಳದ ವಿಡಿಯೋ ಮೂಲಕ ವೈರಲ್ ಆಗಿದ್ದ ಮೊನಾಲಿಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೋಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮಹಿಳೆಯ ವಯಸ್ಸು ಮತ್ತು ವಿವಾಹದ ಸಮ್ಮತಿಗೆ ಸಂಬಂಧಿಸಿದಂತೆ ನಡೆಸಿರುವ ತನಿಖೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮೊನಾಲಿಸಾ ಕೇರಳದ ತಿರುವನಂತಪುರಂನ ತಂಬಾನೂರು ಪೋಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದ್ದರು. ತನ್ನ ಇಚ್ಛೆಗೆ ವಿರುದ್ಧವಾಗಿ ತಂದೆ ಬೇರೆ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಕೇರಳ ಪೋಲೀಸರು, ಅಧಿಕೃತ ದಾಖಲೆಗಳ ಪ್ರಕಾರ ಯುವತಿಗೆ ಘಟನೆ ನಡೆದ ಸಮಯದಲ್ಲಿ 18 ವರ್ಷ 3 ತಿಂಗಳು ತುಂಬಿರುವುದನ್ನು ಖಚಿತಪಡಿಸಿದ್ದಾರೆ. ಈ ಮೂಲಕ ಆಕೆ ವಯಸ್ಕಳಾಗಿದ್ದು, ತನ್ನ ನಿರ್ಧಾರವನ್ನು ಸ್ವತಃ ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಅಲ್ಲದೆ, ವಿವಾಹದ ಪ್ರಕ್ರಿಯೆಯಲ್ಲಿ ಯಾವುದೇ ನಕಲಿ ದಾಖಲೆಗಳನ್ನು ಬಳಸಿರುವುದಕ್ಕೆ ಸಾಕ್ಷ್ಯಗಳಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಹೈಕೋರ್ಟ್ ರಕ್ಷಣೆ

ಈ ನಡುವೆ ದಂಪತಿಗೆ ನ್ಯಾಯಾಲಯ ಕೂಡ ದೊಡ್ಡ ಮಟ್ಟದ ರಿಲೀಫ್ ನೀಡಿದೆ. ಬರುವ ಮೇ 20ರವರೆಗೆ ಇಬ್ಬರನ್ನೂ ಬಂಧಿಸದಂತೆ ನ್ಯಾಯಾಲಯ ರಕ್ಷಣೆ ನೀಡಿದೆ. ಖಾರ್ಗೋನ್‌ನ ಮಹಿಳಾ ಸಬ್ ಇನ್ಸ್‌ಪೆಕ್ಟರ್‌ಗೆ ಮಾಹಿತಿ ನೀಡಿರುವ ಪತಿ ಫರ್ಮಾನ್‌, "ನನ್ನ ಪತ್ನಿ ಗರ್ಭಿಣಿಯಾಗಿದ್ದು, ಸದ್ಯದ ದೈಹಿಕ ಸ್ಥಿತಿಯಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ" ಎಂದು ವೈದ್ಯಕೀಯ ದಾಖಲೆಗಳೊಂದಿಗೆ ತಿಳಿಸಿದ್ದಾರೆ.

ಪೋಲೀಸರ ಸಮನ್ಸ್‌ಗೆ ಪ್ರತಿಕ್ರಿಯಿಸಿರುವ ಫರ್ಮಾನ್‌, ಕೇವಲ ವೈದ್ಯಕೀಯ ಕಾರಣಗಳ ಮೇಲೆ ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದಾರೆ. ಕೇರಳ ಪೋಲೀಸರು ನೀಡಿರುವ ಕ್ಲೀನ್ ಚಿಟ್ ಈ ದಂಪತಿಯ ಪರವಾಗಿದ್ದರೂ, ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿವೆ ಎಂಬುದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+