Vineesh Darshan: ನಟ ಶಿವಣ್ಣನ ಭೇಟಿಯಾದ ದರ್ಶನ್ ಪುತ್ರ ವಿನೀಶ್, ಯಾವ ವಿಚಾರದ ಬಗ್ಗೆ ಚರ್ಚೆ?
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಪುತ್ರ ವಿನೀಶ್ ಕೂಡ ಸದ್ಯದಲ್ಲೇ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಡಲಿದ್ದಾರೆ. ಈ ಮಾತನ್ನು ದರ್ಶನ್ ಈ ಹಿಂದೆಯೇ ಹೇಳಿದ್ದರು. ಅಲ್ಲದೆ ತನ್ನದೇ ಗರಡಿಯಲ್ಲಿ ಪುತ್ರ ವಿನೀಶ್‌ನನ್ನ ಚಿತ್ರರಂಗಕ್ಕೆ ಸಜ್ಜುಗೊಳಿಸುತ್ತಿದ್ದರು. ಆದರೆ ನಟ ದರ್ಶನ್ ಅವರು ಈಗ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇತ್ತ ದೊಡ್ಮನೆಯ ನಟ ಶಿವರಾಜ್‌ಕುಮಾರ್ ಅವರನ್ನು ದರ್ಶನ್ ಪುತ್ರ ವಿನೀಶ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿನೀಶ್ ಸಾಮಾನ್ಯವಾಗಿ ದರ್ಶನ್ ಅವರೊಂದಿಗೆ ಹಲವು ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಅಪ್ಪ ತನ್ನ ಜೊತೆಯಲ್ಲಿ ಇಲ್ಲ. ತಂದೆ ದರ್ಶನ್ ಯಾವಾಗ ಜೈಲಿನಿಂದ ಹೊರಗೆ ಬರ್ತಾರೋ ಎನ್ನುವ ಚಿಂತೆಯಲ್ಲಿದ್ದಾರೆ ವಿನೀಶ್. ಇನ್ನು ಇತ್ತೀಚೆಗೆ ವಿನೀಶ್ ಶಿವಣ್ಣನನ್ನು ಭೇಟಿಯಾಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರೂ ಕೆಲಕಾಲ ಆಪ್ತವಾಗಿ ಮಾತನಾಡಿದ್ದಾರೆ.

ಶಿವಣ್ಣ-ವಿನೀಶ್ ಮಾತನಾಡಿದ್ದೇನು?
ಶೂಟಿಂಗ್ ಸೆಟ್‌ವೊಂದರಲ್ಲಿ ವಿನೀಶ್-ಶಿವಣ್ಣ ಭೇಟಿಯಾಗಿದ್ದಾರೆ. ವೈರಲ್ ವಿಡಿಯೋದಲ್ಲಿ, 'ಶಿವಣ್ಣ ಇಲ್ಲೇನಾ ಓದುತ್ತಿರೋದು' ಎಂದು ವಿನೀಶ್‌ಗೆ ಕೇಳಿದ್ದಾರೆ. ಇದಕ್ಕೆ ವಿನೀಶ್ ಹೌದು ಎಂದಿದ್ದಾರೆ. 'ಹತ್ತನೇ ಕ್ಲಾಸ್ ಮುಗೀತು, ಇಲ್ಲೇ ಓದುತ್ತಿದ್ದೇನೆ' ಎಂದು ವಿನೀಶ್ ಹೇಳಿದ್ದಾರೆ. ಬಳಿಕ ಶಿವಣ್ಣನಿಗೆ 'ನೀವು ಚೆನ್ನಾಗಿದ್ದೀರಾ?' ಎಂದು ಕೇಳಿದ್ದು, 'ಶಿವಣ್ಣ ನಾನ್ ಚೆನ್ನಾಗಿದ್ದೀನಿ, ಮನೆಯಲ್ಲಿ ಎಲ್ರೂ ಚೆನ್ನಾಗಿದ್ದಾರಾ?' ಎಂದು ಕುಶಲೋಪರಿ ವಿಚಾರಿಸಿದ್ದಾರೆ. ಬಳಿಕ ಇಬ್ಬರೂ ಶೇಕ್ ಹ್ಯಾಂಡ್ ಮಾಡಿದ್ದಾರೆ, ಕೊನೆಗೆ ವಿನೀಶ್ ಥ್ಯಾಂಕ್ಯೂ ಹೇಳಿದ್ದಾರೆ.
ಕೆಂಗೇರಿ ಬಳಿಯ ಬಿಜಿಎಸ್ ಕಾಲೇಜ್ ಬಳಿ ಇವರಿಬ್ಬರ ಭೇಟಿಯಾಗಿದೆ. ಈ ಕಾಲೇಜು ಬಳಿಯೇ ಶಿವಣ್ಣನ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಬಿಜಿಎಸ್ ಕಾಲೇಜಿನಲ್ಲೇ ವಿನೀಶ್ ಕೂಡ ಓದುತ್ತಿದ್ದು, ಶಿವಣ್ಣ ಬಂದಿರುವುದು ತಿಳಿದು ಭೇಟಿಯಾಗಿದ್ದಾರೆ. ಡ್ಯಾಡ್ ಸಿನಿಮಾದ ಶೂಟಿಂಗ್ ವೇಳೆ ದರ್ಶನ್ ಪುತ್ರ ವಿನೀಶ್ ಅವರನ್ನು ಶಿವರಾಜ್ ಕುಮಾರ್ ಭೇಟಿಯಾಗಿ ವಿನೀಶ್ ಅವರ ಕೈಕುಲುಕಿ, ಭುಜ ತಟ್ಟಿ ಮಾತನಾಡಿಸಿದ್ದಾರೆ.
ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕಳೆದ ವರ್ಷ ಅರೆಸ್ಟ್ ಆಗಿದ್ದರು. ಹಲವು ತಿಂಗಳ ಕಾಲ ಜೈಲುವಾಸದ ನಂತರ ಅವರಿಗೆ ಜಾಮೀನು ಸಿಕ್ಕಿತ್ತು. ನಂತರ ಅವರು ಕುಟುಂಬದೊಂದಿಗೆ ವಿಶ್ರಾಂತಿ ಪಡೆದು, ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಇನ್ನೇನು ಡೆವಿಲ್ ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಮಾಡಬೇಕು ಎನ್ನುವಷ್ಟರಲ್ಲಿ ಸುಪ್ರೀಂಕೋರ್ಟ್ ದರ್ಶನ್ ಅವರ ಜಾಮೀನು ರದ್ದು ಮಾಡಿತ್ತು. ಈ ಹಿನ್ನೆಲೆ ದರ್ಶನ್ ಅವರು ಮತ್ತೆ ಜೈಲಿಗೆ ಮರಳಬೇಕಾಯಿತು.












Click it and Unblock the Notifications