ದರ್ಶನ್‌ ಸ್ಟೈಲ್‌ ಫಾಲೋ ಮಾಡಿದ ವಿನೀಶ್ ದರ್ಶನ್‌, ಫೋಟೋ ವೈರಲ್‌!

ರೇಣುಕಾಸ್ವಾಮಿ ಕೊಲೆ ಕೇಸ್‌ ಪ್ರಕರಣದಲ್ಲಿ ಜೈಲು ಸೇರಿ ಸಂಕಷ್ಟ ಅನುಭವಿಸಿದ್ದ ನಟ & ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಅವರು ಇದೀಗ ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅವರಿಗೆ ವಿದೇಶಿ ಪ್ರವಾಸಕ್ಕೂ ಅವಕಾಶ ಸಿಕ್ಕಿದೆ. ಇದೀಗ ಅವರು ಡೆವಿಲ್‌ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಇದರೊಂದಿಗೆ ಅವರ ಕುಟುಂಬದವರೂ ಸಂತೋಷದಿಂದ ಕಾಲ ಕಳೆಯುತ್ತಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ನಟ ದರ್ಶನ್‌ ಅವರಂತೆಯೇ ಅವರ ಮಗ ವಿನೀಶ್‌ಗೂ ಪ್ರಾಣಿಗಳ ಮೇಲೆ ಅಪಾರವಾದ ಪ್ರೀತಿ ಇದೆ. ಇದೀಗ ದರ್ಶನ್‌ ಅವರಂತೆಯೇ ವಿನೀಶ್‌ ಸಹ ಭರ್ಜರಿ ಕುದುರೆ ಸವಾರಿ ಮಾಡಿದ್ದು, ಈ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗಳಿಗೆ ಜನ ಏನಂದ್ರು, ಯಾವೆಲ್ಲಾ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ನಟ ದರ್ಶನ್‌ ಅವರಿಗೆ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಇದೆ. ಕೋವಿಡ್‌ ಸಂದರ್ಭದಲ್ಲಿ ಅವರು ಪ್ರಾಣಿ ಪ್ರೀತಿಯನ್ನು ಪ್ರದರ್ಶಿಸಿದ್ದರು. ಇದಕ್ಕೂ ಮೊದಲು ಹಾಗೂ ಇದಾದ ಮೇಲೂ ಫಾರ್ಮ್‌ ಹೌಸ್‌ಗಳಲ್ಲಿ ಪ್ರಾಣಿಗಳನ್ನು ಅವರು ಸಾಕುವುದನ್ನು ಮುಂದುವರಿಸಿದ್ದಾರೆ. ಇದರೊಂದಿಗೆ ಕುದುರೆ ಸವಾರಿ ಎಂದರೆ ದರ್ಶನ್‌ ಅವರಿಗೆ ಪ್ರೀತಿ ಇದೇ ಫ್ಯಾಷನ್‌ ಅನ್ನು ಅವರ ಮಗ ವಿನೀಶ್‌ ದರ್ಶನ್‌ ಅವರು ಸಹ ಮುಂದುವರಿಸುತ್ತಿದ್ದಾರೆ. ಆ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

Vineesh Darshan follows Darshan s style photo goes viral

ದರ್ಶನ್ ಅವರು ಫಾರ್ಮ್‌ಹೌಸ್‌ನಲ್ಲಿ ಕುದುರೆ ಸೇರಿದಂತೆ ಕೆಲ ಪ್ರಾಣಿ, ಪಕ್ಷಿಗಳನ್ನು ಸಾಕುತ್ತಿದ್ದಾರೆ. ಕುದುರೆ ಸವಾರಿ ಮಾಡುವುದು ಖುಷಿ ಕೊಡುತ್ತದೆ ಎನ್ನುವ ವಿಚಾರವನ್ನು ಅವರು ಹಲವು ಇಂಟರ್‌ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ ಅವರು ಸಮಯ ಸಿಕ್ಕಾಗೆಲ್ಲಾವೂ ಎತ್ತಿನ ಗಾಡಿ ಓಡಿಸೋದು, ಕುದುರೆ ಸವಾರಿ ಮಾಡೋದು ಇದೆ.

ವಿನೀಶ್ ದರ್ಶನ್‌: ಇನ್ನು ವಿನೇಶ್‌ ದರ್ಶನ್‌ ಅವರು ಸಹ ಕುದುರೆ ಸವಾರಿ ಮಾಡಿರುವ ಫೋಟೋಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಇದನ್ನು ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ದರ್ಶನ್‌ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಫ್ಯಾನ್ಸ್‌ ಹೇಳಿದ್ದೇನು ?

ದರ್ಶನ್‌ ಅವರು ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿರುವುದನ್ನು ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ದರ್ಶನ್‌ ಹಾಗೂ ಅವರ ಕುಟುಂಬದವರು ಸಂತೋಷವಾಗಿರಲಿ. ಅವರ ಕುಟುಂಬದವರ ಮೇಲೆ ಯಾರ ಕಣ್ಣೂ ಬೀಳದಿರಲಿ ಅಂತ ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+