'ಟಾಕ್ಸಿಕ್‌' ಸೀನ್‌ ಗೇಲಿ ಮಾಡುವವರ ಗೂಗಲ್‌ ಹಿಸ್ಟರಿ ನೋಡಿದ್ರೆ ಎಷ್ಟು ಒಳ್ಳೆಯವ್ರೋ ತಿಳಿಯುತ್ತೆ: ವಿನಯ್‌ ಗೌಡ

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' (Toxic) ಚಿತ್ರದ ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲವರು ಟೀಸರ್‌ನ ತಾಂತ್ರಿಕ ಗುಣಮಟ್ಟ, ಪ್ರಸ್ತುತಿ ಹಾಗೂ ವಿಸುಯಲ್ ಸ್ಟೈಲ್‌ನ್ನು ಹೊಗಳುತ್ತಿದ್ದರೆ, ಇನ್ನೊಂದು ಕಡೆ ಕೆಲವರು ಟೀಸರ್‌ನಲ್ಲಿರುವ ಹಸಿಬಿಸಿ ದೃಶ್ಯಗಳ ಬಗ್ಗೆ ಗೇಲಿ ಮಾಡುತ್ತಿರುವುದೂ ಇದೆ. ಈ ಹಿನ್ನಲೆಯಲ್ಲಿ ಬಿಗ್‌ಬಾಸ್ ಖ್ಯಾತಿಯ ನಟ ವಿನಯ್ ಗೌಡ ಅವರು ಟೀಸರ್ ಪರವಾಗಿ ಪರವಾಗಿ ಮಾತನಾಡಿದ್ದು, ಗೇಲಿ ಮಾಡುವವರು ಅವರ ಜೀವನದಲ್ಲಿ ಇದೆಲ್ಲ ಮಾಡಿಲ್ವಾ? ಇದನ್ನೆಲ್ಲ ನೋಡೇ ಇಲ್ವಾ? ಎಂದು ಕೇಳಿದ್ದಾರೆ.

"ಟಾಕ್ಸಿಕ್ ಟೀಸರ್ ಅಮೇಜಿಂಗ್ ಆಗಿದೆ. ನಮ್ಮ ಕನ್ನಡ ಸಿನಿಮಾ ಹಾಲಿವುಡ್ ಮಟ್ಟಕ್ಕೆ ಹೋಗುತ್ತಿದೆ. ಇದು ಹೆಮ್ಮೆಯ ವಿಷಯ. ಕನ್ನಡ ಚಿತ್ರರಂಗ ಇತ್ತೀಚಿನ ವರ್ಷಗಳಲ್ಲಿ ತಾಂತ್ರಿಕವಾಗಿ ಸಾಕಷ್ಟು ಬೆಳವಣಿಗೆ ಕಂಡಿದ್ದು, 'ಟಾಕ್ಸಿಕ್' ಟೀಸರ್ ಅದರ ಮುಂದಿನ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈಗ ಮಾತನಾಡುತ್ತಿರುವವರು ಏನಾದರೂ ಅಂತಹ ಪ್ರಯೋಗ ಮಾಡಿದ್ದಾರಾ? ಇಲ್ಲವೇ ಆ ರೀತಿಯ ಸಿನಿಮಾಗಳನ್ನು ನೋಡೇ ಇಲ್ಲವಾ?" ಎಂದು ಪ್ರಶ್ನಿಸಿದ್ದಾರೆ.

Vinay Gowda Yash Toxic Teaser Controversy Google Search History Reveals Truth

ಟೀಕೆ ಮಾಡುವವರಿಗೆ ಟಾಂಗ್

́́'ಮಾತನಾಡುವವರು ಅವರ ಜೀವನದಲ್ಲಿ ಅದೆಲ್ಲ ಮಾಡಿಲ್ವಾ? ಇದನ್ನೆಲ್ಲ ನೋಡಿಲ್ವಾ? ಅವರ ಮೊಬೈಲ್‌ ತೆಗೆದು ಗೂಗಲ್‌ ಹಿಸ್ಟರಿ ನೋಡಿದ್ರೆ ಯಾರು ಎಷ್ಟು ಒಳ್ಳೆಯವರು ಅನ್ನೋದು ತಿಳಿಯುತ್ತೆ ಎಂದು ಕೌಂಟರ್‌ ನೀಡಿದ್ದಾರೆ. ಇಂತಹ ಹೇಳಿಕೆ ಮೂಲಕ, ಅಂತರರಾಷ್ಟ್ರೀಯ ಸಿನಿಮಾಗಳ ಶೈಲಿ, ಕಥನ ಹಾಗೂ ಪ್ರಸ್ತುತಿಯನ್ನು ಅರ್ಥ ಮಾಡಿಕೊಳ್ಳದೆ ಕೆಲವರು ಟೀಕೆ ಮಾಡುತ್ತಿದ್ದಾರೆ' ಎಂದಿದ್ದಾರೆ.

'ಅವರ ಮೊಬೈಲ್‌ನಲ್ಲಿ ಗೂಗಲ್ ಸರ್ಚ್ ಹಿಸ್ಟರಿ ನೋಡಿದರೆ ಎಲ್ಲವೂ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿರುವ ಅವರು ಕನ್ನಡ ಚಿತ್ರತಂಡಕ್ಕೆ ನಾವೇ ಸಪೋರ್ಟ್ ನೀಡಬೇಕು ಎಂದಿದ್ದಾರೆ. ಟಾಕ್ಸಿಕ್ ಚಿತ್ರತಂಡಕ್ಕೆ ನಾವು ಸಪೋರ್ಟ್ ಮಾಡಬೇಕು. ನಮ್ಮ ಕನ್ನಡ ಚಿತ್ರರಂಗವನ್ನು ಅವರು ಹಾಲಿವುಡ್ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಪ್ಯಾನ್ ಇಂಡಿಯಾ ಹಾಗೂ ಜಾಗತಿಕ ಮಟ್ಟಕ್ಕೆ ಕನ್ನಡ ಸಿನಿಮಾಗಳು ತಲುಪಬೇಕಾದರೆ, ಹೊಸ ಪ್ರಯೋಗಗಳಿಗೆ ಬೆಂಬಲ ನೀಡಬೇಕೇ ಹೊರತು, ಮೊದಲೇ ಗೇಲಿ ಮಾಡುವುದು ಸರಿಯಲ್ಲ. ನಮ್ಮವರೇ ನಮ್ಮ ಚಿತ್ರರಂಗವನ್ನು ಹಾಳು ಮಾಡಬಾರದು' ಎಂದಿದ್ದಾರೆ.

ಯಶ್ ಮೇಲೆ ವಿಶ್ವಾಸ

'ಕೆಜಿಎಫ್' ಸರಣಿಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಗುರುತು ಪಡೆದ ಯಶ್, ಈಗ 'ಟಾಕ್ಸಿಕ್' ಮೂಲಕ ಮತ್ತೊಂದು ವಿಭಿನ್ನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆ, ಯಶ್ ಅವರ ಆಯ್ಕೆ ಮತ್ತು ದೃಷ್ಟಿಕೋನದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂಬುದನ್ನು ವಿನಯ್ ಗೌಡ ಅವರ ಮಾತಿನ ಅರ್ಥ. ವಿನಯ್ ಗೌಡ ಅವರ ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಅವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಪ್ರಯೋಗವಿಲ್ಲದೆ ಬೆಳವಣಿಗೆ ಸಾಧ್ಯವಿಲ್ಲ, ಕನ್ನಡ ಸಿನಿಮಾಗಳು ಜಾಗತಿಕ ಮಟ್ಟಕ್ಕೆ ಹೋಗಬೇಕಾದರೆ ಇಂತಹ ಟೀಸರ್‌ಗಳು ಅಗತ್ಯ ಎಂದು ಯಶ್‌ ಪರ ಮಾತನಾಡುತ್ತಿದ್ದಾರೆ.

'ಟಾಕ್ಸಿಕ್' ಟೀಸರ್ ಕುರಿತಾಗಿ ಉಂಟಾಗಿರುವ ಪರ-ವಿರೋಧ ಚರ್ಚೆಗಳ ಮಧ್ಯೆ, ವಿನಯ್ ಗೌಡ ಅವರ ಧ್ವನಿ ಕನ್ನಡ ಚಿತ್ರರಂಗದ ಪರವಾದ ಬಲವಾದ ಸಂದೇಶವಾಗಿ ಕೇಳಿಬಂದಿದೆ. ಪ್ರಯೋಗಾತ್ಮಕ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರಸ್ತುತಿಗೆ ಬೆಂಬಲ ನೀಡುವುದೇ ಕನ್ನಡ ಸಿನಿಮಾಗಳ ಭವಿಷ್ಯಕ್ಕೆ ಸಹಕಾರಿ ಎಂಬ ಸಂದೇಶವನ್ನು ಅವರು ಸ್ಪಷ್ಟವಾಗಿ ನೀಡಿದ್ದಾರೆ. ಅನೇಕ ಅಭಿಮಾನಿಗಳು ಹಾಗೂ ವೀಕ್ಷಕರು ಅವರ ಅಭಿಪ್ರಾಯಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಕನ್ನಡ ಸಿನಿಮಾಗಳ ಬೆಳವಣಿಗೆಗೆ ಹೊಸ ಪ್ರಯೋಗಗಳು ಅಗತ್ಯವೆಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+