2ನೇ ಮದುವೆ ಚರ್ಚೆ ನಡುವೆಯೇ ನಟ ವಿಜಯ್ ರಾಘವೇಂದ್ರ ಮಹತ್ವದ ಪೋಸ್ಟ್, ಅಭಿಮಾನಿಗಳ ಕಣ್ಣೀರು... Vijay Raghavendra
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೊರೊನಾ ನಂತರ ಸಾಲು ಸಾಲು ಸಾವುಗಳು ಆಘಾತವನ್ನೇ ನೀಡಿವೆ. ಅದರಲ್ಲೂ ಪ್ರೀತಿಸಿ ಮದುವೆ ಆಗಿದ್ದ ಹಲವು ಜೋಡಿಗಳು ವಿಧಿಯ ಆಟಕ್ಕೆ ಈಗ ನರಳುವ ಪರಿಸ್ಥಿತಿ ಬಂದಿದೆ. ಅಭಿಮಾನಿಗಳು ಕೂಡ, ತಮ್ಮ ನೆಚ್ಚಿನ ನಟ & ನಟಿಯರು ಗಂಡ & ಹೆಂಡತಿ ಕಳೆದುಕೊಂಡು ಪರದಾಡುತ್ತಿರುವ ರೀತಿ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಇದೇ ರೀತಿ ನಟ ವಿಜಯ್ ರಾಘವೇಂದ್ರ ಅವರು ಕೂಡ ತಮ್ಮ ಹೆಂಡತಿ ಅವರನ್ನು ಕಳೆದುಕೊಂಡು ನೋವಿನಲ್ಲಿ ಇದ್ದಾರೆ. ಇಂತಹ ಸಮಯದಲ್ಲೇ...
ವಿಜಯ್ ರಾಘವೇಂದ್ರ ಅವರ ಹೆಂಡತಿ ಅಕಾಲಿಕ ಅಕಾಲಿಕ ಮರಣ ಹೊಂದಿದರು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಹೆಂಡತಿಯ ಸಾವು ನಟ ವಿಜಯ್ ರಾಘವೇಂದ್ರ ಅವರ ಜೀವನಕ್ಕೆ ತಡೆಯಲು ಆಗದಷ್ಟು ನೋವು ನೀಡಿದೆ. 2007 ಆಗಸ್ಟ್ 26 ಭಾನುವಾರದಂದು ನಟ ವಿಜಯ್ ರಾಘವೇಂದ್ರ ಅವರು ಸ್ಪಂದನಾ ಅವರ ಜೊತೆಗೆ ಮದುವೆ ಆಗಿ, ಸಪ್ತಪದಿ ತುಳಿದಿದ್ದರು. ಈ ಮೂಲಕ ತಾವು ಇಷ್ಟಪಟ್ಟ ಹುಡುಗಿಯ ಜೊತೆಯಲ್ಲೇ ಜೀವನದ ಹೊಸ ಪಯಣ ಆರಂಭ ಮಾಡಿದ್ದರು. ಹೀಗಿದ್ದಾಗಲೇ, 2023 ಆಗಸ್ಟ್ 7 ಸೋಮವಾರ ನಟ ವಿಜಯ್ ರಾಘವೇಂದ್ರರ ಬಾಳಲ್ಲಿ ಘೋರ ದುರಂತ ಸಂಭವಿಸಿತ್ತು....

2ನೇ ಮದುವೆ ಚರ್ಚೆ ನಡುವೆಯೇ ನಟ ವಿಜಯ್...
ಹೌದು, 2023 ಆಗಸ್ಟ್ 7 ಸೋಮವಾರ ನಟ ವಿಜಯ್ ರಾಘವೇಂದ್ರ ಅವರ ಹೆಂಡತಿ ಸ್ಪಂದನಾ ಅವರು ಮೃತಪಟ್ಟಿದ್ದರು. ಹೀಗೆ ಪತ್ನಿಯ ಸಾವಿನ ನಂತರ ನೋವಿನಲ್ಲೇ ದಿನ ದೂಡುತ್ತಿರುವ ನಟ ವಿಜಯ್ ರಾಘವೇಂದ್ರ ತಮ್ಮ ಒಬ್ಬನೇ ಮಗನ ಭವಿಷ್ಯಕ್ಕೆ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಹೀಗಿದ್ದಾಗಲೇ, 2ನೇ ಮದುವೆ ಚರ್ಚೆ ನಡುವೆಯೇ ನಟ ವಿಜಯ್ ರಾಘವೇಂದ್ರ ಮಹತ್ವದ ಪೋಸ್ಟ್, ಅಭಿಮಾನಿಗಳ ಕಣ್ಣೀರು...
ಒಬ್ಬ ಮಗನ ಜೊತೆಗೆ ವಿಜಯ್ ರಾಘವೇಂದ್ರ ಅವರು ಜೀವನದ ಪಯಣ ಮುಂದುವರಿಸಿದ್ದಾರೆ. ಹೀಗೆ ಕನ್ನಡ ಸಿನಿಮಾ ರಂಗದ ದೊಡ್ಡ ಕಲಾವಿದನ ಬಾಳಲ್ಲಿ ವಿಧಿ ಆಟ ಆಡಿದೆ. ಒಂದು ಕಡೆ ಮಗನ ಭವಿಷ್ಯ & ಇನ್ನೊಂದು ಕಡೆ ಪತ್ನಿ ಇಲ್ಲದ ನೋವಿನ ನಡುವೆ ಕೂಡ ನಮ್ಮ ಕನ್ನಡಿಗ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರು ಸಾಲು ಸಾಲು ಸಿನಿಮಾಗಳನ್ನ ಕೂಡ ಇದೀಗ ಮಾಡುತ್ತಿದ್ದಾರೆ. ಹೀಗಿದ್ದರೂ ವಿಜಯ್ ರಾಘವೇಂದ್ರ ಅವರ 2ನೇ ಮದುವೆ ವಿಚಾರ ಎಲ್ಲೆಲ್ಲೂ ದೊಡ್ಡ ಸೌಂಡ್ ಮಾಡುತ್ತಿದೆ. ಆದರೆ ನಟ ವಿಜಯ್ ರಾಘವೇಂದ್ರ ಅವರ ಹೊಸ ಪೋಸ್ಟ್ ಇಡೀ ಜಗತ್ತಿಗೇ 2ನೇ ಮದುವೆ ಬಗ್ಗೆ ಉತ್ತರ ನೀಡುತ್ತಿದೆ...
ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ...
ಹೌದು, ಇವತ್ತು ಮೇ 26... ಬಾಲ ನಟನಾಗಿ ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟಿದ್ದ ನಮ್ಮ ವಿಜಯ್ ರಾಘವೇಂದ್ರ ಅವರು ಹುಟ್ಟಿದ ದಿನ. ಹೀಗೆ ತಮ್ಮ ಹುಟ್ಟು ಹಬ್ಬದ ದಿನವೇ ನಟ ವಿಜಯ್ ರಾಘವೇಂದ್ರ ಅವರು ತುಂಬಾ ಸ್ಪೆಷಲ್ ಆಗಿರುವ ಪೋಸ್ಟ್ ಒಂದನ್ನ ಶೇರ್ ಮಾಡಿ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದ್ದಾರೆ. 1979 ಮೇ 26 ವಿಜಯ್ ರಾಘವೇಂದ್ರ ಅವರು ಹುಟ್ಟಿದ ದಿನ, ಇದೀಗ 46 ತುಂಬಿ 47ನೇ ವರ್ಷ ಕನ್ನಡಿಗರ ಪ್ರೀತಿಯ ನಟ ರಾಘು ಬಾಳಲ್ಲಿ ಶುರುವಾಗಿದೆ.
ಇಂತಹ ಶುಭ ಸಂದರ್ಭದಲ್ಲಿ ತಮ್ಮ ಹೆಂಡತಿ ನೆನಪು ಮಾಡಿಕೊಂಡು, 'ಪ್ರತೀ ಜನುಮದಿನ... ಪ್ರತೀ ದಿನ... ನಿನ್ನ ನೆನೆಸಿದೆ ಮನ You made my birth special... I love you Chinna!' ಅಂತಾ ಪೋಸ್ಟ್ ಹಾಕುವ ಮೂಲಕ ವಿಜಯ್ ರಾಘವೇಂದ್ರ ಅವರು ಹೆಂಡತಿಯ ನೆನಪನ್ನು ಮಾಡಿಕೊಂಡಿದ್ದಾರೆ. ಅಲ್ಲದೆ, ವಿಜಯ್ ರಾಘವೇಂದ್ರ ಅವರ 2ನೇ ಮದುವೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ & ಸೋಷಿಯಲ್ ಮೀಡಿಯಾದಲ್ಲಿ 2ನೇ ಮದುವೆ ಬಗ್ಗೆ ಚರ್ಚೆ ಮಾಡುವ ಜನರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ಹಾಗೇ ಸದಾ ಪತ್ನಿಯ ನೆನಪಿನಲ್ಲೇ ಇರುವ ವಿಚಾರ ಇಡೀ ಜಗತ್ತಿಗೇ ತಿಳಿಸಿದ್ದಾರೆ, ಹೀಗಾಗಿ ವಿಜಯ್ ರಾಘವೇಂದ್ರ ಅವರ ಅಭಿಮಾನಿಗಳು ಇದೀಗ ಭಾವುಕರಾಗಿದ್ದಾರೆ...












Click it and Unblock the Notifications