ಎದ್ದು ನಡೆಯಲು ಕಷ್ಟವಾಗುತ್ತಿದ್ದಾಗ ಸ್ನಾನ ಮಾಡಿಸಿದ್ದೀರಿ: ನಟ ಶ್ರೀಮುರಳಿ ಪತ್ನಿ ಪೋಸ್ಟ್‌

ಯಾರಿಂದಲೂ ಕಲಿಯದ ವಿದ್ಯೆ ಎಂದರೇ ಅದು ಪ್ರೀತಿ. ಪ್ರೀತಿ ಎನ್ನುವ ಒಂದು ಉತ್ತಮ ಭಾವನೆ ಯಶಸ್ಸನ್ನು ಪಡೆದುಕೊಳ್ಳಲು ಪ್ರೇರೇಪಿಸುತ್ತೆ. ಇದಕ್ಕೆ ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಅವರ ಪತ್ನಿ ವಿದ್ಯಾ ಅತ್ಯುತ್ತಮ ಉದಾಹರಣೆ.

ಕಾಲೇಜ್ ನಲ್ಲಿ ಓದುತ್ತಾ ಪ್ರೀತಿಯಲ್ಲಿ ಬಿದ್ದ ಶ್ರೀಮುರಳಿ ಸರಿಯಾಗಿ 25 ವರ್ಷಗಳ ಹಿಂದೆ ಅಂದರೆ ಡಿಸೆಂಬರ್ 30-1999ರಂದು ತಮಗಿಂತ ಒಂದು ವರ್ಷ ಜೂನಿಯರ್ ಆಗಿದ್ದ ವಿದ್ಯಾ ಅವರಿಗೆ ಪ್ರಪೋಸ್ ಮಾಡಿದ್ದರು. ನಾನು ನಿನ್ನ ಪ್ರೀತಿಸುತ್ತಿದ್ದೇನೆ, ಮದ್ವೆ ಕೂಡ ಆಗಬೇಕೆಂದುಕೊಂಡಿದ್ದೇನೆ. ಹೊಸ ವರ್ಷ ಶುರುವಾಗೋಕೆ ಇನ್ನೂ ಸಮಯ ಇದೆ. ಮನೆಗೆ ಹೋಗಿ ಕಾಲ್ ಮಾಡ್ತೀನಿ ನೀನು ನನ್ನ ಕರೆ ಸ್ವೀಕರಿಸಿದರೆ ನಿನ್ನ ಒಪ್ಪಿಗೆ ಇದೆ ಎಂದರ್ಥ ಎಂದು ಹೇಳಿ ಅಲ್ಲಿಂದ ಹೋಗಿದ್ದರು. ಇದೀಗ ಪ್ರೀತಿಯಿಂದ ವಿದ್ಯಾ ಅವರು ಲವ್ ಆನಿವರ್ಸರಿ ದಿನ ಹಾಕಿದ ಪೋಸ್ಟ್ ವೈರಲ್‌ ಆಗುತ್ತಿದೆ.

Vidya Wrote A Thank You Note To Srimurali For Their 25th Wedding Anniversary

1999ರಲ್ಲಿ ಮುರಳಿ ಪ್ರಪೋಸ್ ಮಾಡಿದ್ದು, ಡಿಸೆಂಬರ್ 30, 2024ಕ್ಕೆ ವರ್ಷಗಳು ಕಳೆಯುತ್ತದೆ. ಈ ಖುಷಿಯಲ್ಲಿ ಪತ್ನಿ ವಿದ್ಯಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರೀತಿಯ ಪತಿ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. 'ಹ್ಯಾಪಿ 25ನೇ ವರ್ಷ ಕಂದಾ. 30 ಡಿಸೆಂಬರ್ 1999ರಿಂದ ನನ್ನನ್ನು ಪ್ರೀತಿಸುತ್ತಿರುವೆ ಎಂದು ಹೇಳುತ್ತಿರುವುದಕ್ಕೆ ಥ್ಯಾಂಕ್ಸ್‌. ಥ್ಯಾಂಕ್‌ ಯು ನನ್ನನ್ನು ಖುಷಿ ಪಡಿಸಿರುವುದಕ್ಕೆ, ಥ್ಯಾಂಕ್‌ ಯು ನನ್ನ ಮೇಲೆ ಯಾವುದೇ ದೊಡ್ಡ ಭಾರ ಹಾಕದೇ ಇರುವುದಕ್ಕೆ, ಥ್ಯಾಂಕ್ಸ್‌ ಯು ರಸ್ತೆ ದಾಟುವಾಟ ನನ್ನ ಕೈ ಹಿಡಿದು ನಡೆದಿರುವುದಕ್ಕೆ, ಥ್ಯಾಂಕ್‌ ಯು.

ನನ್ನ ಇಷ್ಟವಾದ ಚಿಕನ್ ಮತ್ತು ಕೇಕ್‌ ಕೊನೆ ಪೀಸ್‌ ಉಳಿಸಿರುವುದಕ್ಕೆ,ಥ್ಯಾಂಕ್ ಯು ಪ್ರತಿದಿನ ರಾತ್ರಿ ನನ್ನ ರಾತ್ರಿ ಸ್ಟ್ಯಾಂಡ್‌ನಲ್ಲಿ ನನ್ನ ನೀರಿನ ಬಾಟಲ್ ಇಡುವುದಕ್ಕೆ, ನನ್ನ ಔಷದಿಗಳನ್ನು ತೆಗೆದುಕೊಳ್ಳಲು ನೆನಪು ಮಾಡುವುದಕ್ಕೆ ಥ್ಯಾಂಕ್ ಯು, ನನ್ನ ಕೂದಲು ಕೆದರಿದಾಗ ಅದನ್ನು ಸರಿ ಮಾಡಿರುವುದಕ್ಕೆ ಥ್ಯಾಂಕ್ ಯು, ನನ್ನ ಕಷ್ಟಗಳಲ್ಲಿ ಜೊತೆಯಾಗಿರುವುದಕ್ಕೆ ಥ್ಯಾಂಕ್ ಯು, ಹೊಟ್ಟೆ ನೋವು ಬರುವಷ್ಟು ನಗಿಸುವುದಕ್ಕೆ ಥ್ಯಾಂಕ್ ಯು, ನಮ್ಮ ಜಗಳಗಳನ್ನು ಆದಷ್ಟು ಬೇಗ ನಿಲ್ಲಿಸುವುದಕ್ಕೆ ಥ್ಯಾಂಕ್‌ ಯು, ದೆವ್ವ ಸಿನಿಮಾ ನೋಡಿದ ದಿನ ರಾತ್ರಿ ಇಡೀ ನನ್ನ ಜೊತೆ ಎದ್ದಿರುವುದಕ್ಕೆ ಥ್ಯಾಂಕ್ ಯು, ನಾನು ಮೊದಲು ಬಂದು ಗೌರವಿಸುವುದನ್ನು ಹೇಳಿಕೊಟ್ಟೆ ಎಂದು ನಮ್ಮ ಮಕ್ಕಳಿಗೆ ಹೇಳುವುದಕ್ಕೆ ಥ್ಯಾಂಕ್ ಯು, ನನಗೆಂದು ನೀನು ಮಾಡುವ ಸಣ್ಣ ಪುಟ್ಟ ಕೆಲಸಗಳಿಗೆ ಥ್ಯಾಂಕ್ ಯು ಎಂದು ವಿದ್ಯಾ ಅವರು ಬರೆದುಕೊಂಡಿದ್ದಾರೆ.
'ತಾಯಿ ಮಕ್ಕಳನ್ನು ಪ್ರೀತಿಸುವಂತೆ ನನ್ನನ್ನು ಪ್ರೀತಿಸಿ ಮುದ್ದು ಮಾಡುವುದಕ್ಕೆ ಥ್ಯಾಂಕ್ ಯು. ನಾನು ಹುಷಾರಿಲ್ಲದೆ ಮಲಗಿದ್ದಾಗ ಯಾವುದೇ ನರ್ಸ್‌ ಇಟ್ಟಿಕೊಳ್ಳದೆ ನೀವೇ ನನ್ನನ್ನು ನೋಡಿಕೊಂಡಿರುವುದಕ್ಕೆ ಥ್ಯಾಂಕ್‌ ಯು. ನಡೆಯಲು ಕಷ್ಟ ಪಡುತ್ತಿದ್ದ ನನಗೆ ಸ್ನಾನ ಕೂಡ ಮಾಡಿಸಿರುವುದಕ್ಕೆ ಥ್ಯಾಂಕ್ ಯು, ನಾನು ಬಾತ್‌ರೂಮ್‌ಗೆ ಹೋಗಲು ಸಹಾಯ ಮಾಡುತ್ತಿದ್ರಿ ಅಲ್ಲದೆ ನನ್ನನ್ನು ಕ್ಲೀನ್ ಮಾಡುತ್ತಿದ್ರೆ....ಯಾವುದೇ ಮುಜುಗರವಿಲ್ಲದೆ ಇದನ್ನು ಹಂಚಿಕೊಳ್ಳುತ್ತಿರುವುದು ಯಾಕೆ ಅಂದರೆ ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಿಮ್ಮಂತ ಕೈಂಡ್, ನೈಸ್ ಆಂಡ್ ಲಕ್ಕಿ ವ್ಯಕ್ತಿಯನ್ನು ಪಡೆದಿರುವುದಕ್ಕೆ ಪುಣ್ಯ ಮಾಡಿರುವೆ' ಎಂದು ವಿದ್ಯಾ ಹೇಳಿದ್ದಾರೆ.

'ಲ್ಯಾಂಡ್‌ಲೈನ್‌ ಫೋನ್‌, ಪತ್ರ ಬರೆಯುವುದು, ಟ್ರಂಕ್ ಕಾಲ್ ಮಾಡುವುದರಿಂದ ಹಿಡಿದು ವಾಟ್ಸಪ್‌ ಇಂಟರ್ನೆಟ್‌ ಕಾಲಕ್ಕೆ ಕಾಲಿಟ್ಟಿದ್ದೀವಿ. ಪ್ರೀತಿಯಲ್ಲಿ ಬಿದ್ದಾಗ ನಾವು ಟೀ-ನೇಜರ್‌ಗಳು ಆಗಿದ್ವಿ...ಈಗ ನೋಡಿ ನಮ್ಮನ್ನು. ಬೆಸ್ಟ್‌ ಲವ್ ಸ್ಟೋರಿ ಕೊಟ್ಟಿರುವುದಕ್ಕೆ ಥ್ಯಾಂಕ್ ಯು. ಐ ಲವ್ ಯು ಕಂದಾ ಎಂದು ವಿದ್ಯಾ ಅವರು ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+