Shyam Benegal: ಬಾಲಿವುಡ್ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ

1970 ಮತ್ತು 1980ರ ದಶಕದಲ್ಲಿ ಭಾರತೀಯ ಸಿನಿಮಾ ರಂಗದಲ್ಲಿ ಹೊಸತನದ ಸಿನಿಮಾಗಳಿಗೆ ನಾಂದಿ ಹಾಡಿದ ಜನಪ್ರಿಯ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನರಾಗಿದ್ದಾರೆ. ಡಿಸೆಂಬರ್ 23ರಂದು ಸಂಜೆ ಮುಂಬೈ ಸೆಂಟ್ರಲ್ ವೊಕಾರ್ಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಶ್ಯಾಮ್ ಬೆನಗಲ್ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ನೀರಾ ಬೆನಗಲ್ ಮತ್ತು ಪುತ್ರಿ ಪಿಯಾ ಬೆನಗಲ್ ಅವರನ್ನು ಅಗಲಿದ್ದಾರೆ.

ಡಿಸೆಂಬರ್ 14ರಂದು 90ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಅವರು ಕೆಲವು ದಿನಗಳ ಬಳಿಕ ಮುಂಬೈನ ವೊಕಾರ್ಡ್ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

Veteran director shyam benegal dies at 90

ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ಪಿಯಾ ಬೆನಗಲ್, ತಮ್ಮ ತಂದೆ ಧೀರ್ಘಕಾಲದಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ. "ಸೋಮವಾರ ಸಂಜೆ ಸಂಜೆ 6.38 ಕ್ಕೆ ನಿಧನರಾಗಿದ್ದಾರೆ. ಮೂತ್ರಪಿಂಡ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು" ಎಂದು ಪಿಯಾ ತಿಳಿಸಿದ್ದಾರೆ.

90 ವರ್ಷವಾದರೂ ಕಡಿಮೆಯಾಗಿರಲಿಲ್ಲ ಉತ್ಸಾಹ

ಶ್ಯಾಮ್ ಬೆನಗಲ್ 90 ವರ್ಷ ವಯಸ್ಸಾದರೂ ಲವಲವಿಕೆಯಿಂದ ಇದ್ದರು. ಈ ವಯಸ್ಸಿನಲ್ಲೂ ಅವರು ಎರಡು ಮೂರು ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

"ನಮಗೆಲ್ಲರಿಗೂ ವಯಸ್ಸಾಗುತ್ತದೆ, ನಾನು ಏನೂ ದೊಡ್ಡದಾಗಿ ಆಚರಣೆ ಮಾಡುವುದಿಲ್ಲ. ಇದು ವಿಶೇಷ ದಿನವಾದರೂ ನಾನು ಆಚರಿಸುವುದಿಲ್ಲ, ನನ್ನ ತಂಡದ ಜೊತೆ ಕಚೇರಿಯಲ್ಲಿ ಕೇಕ್ ಕತ್ತರಿಸಿದ್ದೇನೆ" ಎಂದು ಶ್ಯಾಮ್ ಬೆನಗಲ್ ತಮ್ಮ ಹುಟ್ಟುಹಬ್ಬದ ದಿನ ತಿಳಿಸಿದ್ದರು.

ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ವಾರಕ್ಕೆ ಮೂರು ಡಯಾಲಿಸಿಸ್‌ಗಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ದೇಹ ಸಹಕರಿಸದೇ ಇದ್ದರೂ ಸಿನಿಮಾ ಮೇಲಿನ ಉತ್ಸಾಹ ಕಡಿಮೆಯಾಗಿರಲಿಲ್ಲ. ಕೊನೆಯವರೆಗೂ ಸಿನಿಮಾ ನಿರ್ಮಾಣ ಮಾಡುವ ಉತ್ಸಾಹ ಅವರಲ್ಲಿತ್ತು.

"ಎರಡರಿಂದ ಮೂರು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿದೆ. ಯಾವ ಪ್ರಾಜೆಕ್ಟ್ ಎಂದು ಹೇಳುವುದು ಕಷ್ಟ, ಆದರೆ ಎಲ್ಲವೂ ದೊಡ್ಡ ಬಜೆಟ್ ಸಿನಿಮಾಗಳು" ಎಂದು ಹೇಳಿದ್ದರು. ಅವರು ಇತ್ತೀಚೆಗೆ 'ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್' ಸಿನಿಮಾ ನಿರ್ಮಾಣ ಮಾಡಿದ್ದರು. 2023ರಲ್ಲಿ ಅದು ತೆರೆ ಕಂಡಿತ್ತು.

ಶ್ಯಾಮ್‌ ಬೆನಗಲ್ ಶ್ರೇಷ್ಠ ನಿರ್ದೇಶಕ, ಬರಹಗಾರ

ಶ್ಯಾಮ್ ಬೆನಗಲ್ ಪ್ರಸಿದ್ಧ ಛಾಯಾಗ್ರಾಹಕ ಶ್ರೀಧರ್ ಬಿ ಬೆನಗಲ್ ಅವರ ಮಗ. ಪ್ರಸಿದ್ಧ ಭಾರತೀಯ ಲೇಖಕ ಗುರುದತ್ ಅವರ ಎರಡನೇ ಸೋದರಸಂಬಂಧಿ ಕೂಡ ಹೌದು. ಹೈದರಾಬಾದ್‌ನಲ್ಲಿ ಜನಿಸಿದ ಶ್ಯಾಮ್ ಬೆನಗಲ್ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡರು.

ಕಾಪಿರೈಟರ್ ಆಗಿ ಜೀವನ ಆರಂಭಿಸಿದ ಅವರು 1962ರಲ್ಲಿ ಗುಜರಾತಿ ಭಾಷೆಯ 'ಘೇರ್ ಬೇತಾ ಗಂಗಾ' ಸಾಕ್ಷ್ಯಚಿತ್ರ ಮಾಡಿದರು. 1973ರಲ್ಲಿ ತೆರೆಕಂಡ 'ಅಂಕುರ್', 1975ರಲ್ಲಿ ತೆರೆಗೆ ಬಂದ 'ನಿಶಾಂತ್', 1976ರಲ್ಲಿ ಬಿಡುಗಡೆಯಾದ 'ಮಂಥನ್' ಮತ್ತು 1977ರಲ್ಲಿ ಬಿಡುಗಡೆಯಾದ 'ಭೂಮಿಕಾ' ಬಾಲಿವುಡ್‌ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತು. ಐತಿಹಾಸಿಕ, ಪೌರಾಣಿಕ ಸಿನಿಮಾಗಳು ಹೆಚ್ಚಾಗಿ ನಿರ್ಮಾಣವಾಗುತ್ತಿದ್ದ ಕಾಲದಲ್ಲಿ ಶ್ಯಾಮ್ ಬೆನಗಲ್ ಸಾಮಾಜಿಕ ಸಿನಿಮಾಗಳನ್ನು ತೆರೆಗೆ ತಂದರು. ಅಂದಿನ ಸಮಾಜದ ಚಿತ್ರಣವನ್ನು ತೆರೆ ಮೇಲೆ ಕಟ್ಟಿಕೊಟ್ಟರು. ಇದು ಅವರನ್ನು ಶ್ರೇಷ್ಠ ನಿರ್ದೇಶಕರ ಸಾಲಿನಲ್ಲಿ ನಿಲ್ಲಿಸಿತು.

'ಭಾರತ್ ಏಕ್ ಖೋಜ್' ಮತ್ತು 'ಸಂವಿಧಾನ್' ಸೇರಿದಂತೆ ಅನೇಕ ಸಾಕ್ಷ್ಯಚಿತ್ರಗಳನ್ನು ಮಾಡಿದ್ದು ದೂರದರ್ಶನದಲ್ಲಿ ಪ್ರಸಾರ ಮಾಡಲಾಗಿದೆ. ಭೂಮಿಕಾ', 'ಜುನೂನ್', 'ಮಂಡಿ', 'ಸೂರಜ್ ಕಾ ಸತ್ವನ್ ಘೋಡಾ', 'ಮಮ್ಮೋ' ಮತ್ತು 'ಸರ್ದಾರಿ ಬೇಗಂ' ಸಿನಿಮಾಗಳು ಅವರಿಗೆ ಹೆಚ್ಚು ಹೆಸರು ತಂದುಕೊಟ್ಟವು ಈ ಸಿನಿಮಾಗಳನ್ನು ಹಿಂದಿ ಶ್ರೇಷ್ಠ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+