ಬಿಗ್ ಬಾಸ್ ಮನೆಗೆ ದಿಢೀರ್ ಡಿವೋರ್ಸ್ ಲಾಯರ್ ಎಂಟ್ರಿ: ಯಾಕೆ?
ಈವರೆಗೂ ಜಗಳ, ಗಲಾಟೆ, ಕೂಗಾಟ, ನೂಕಾಟ, ಆಟ, ವಾಗ್ವಾದಗಳಿಂದ ತುಂಬಿದ್ದ ಬಿಗ್ ಬಾಸ್ ಮನೆ ಈ ವಾರ ಸ್ವಲ್ಪ ಮಟ್ಟಿಗೆ ಸೈಲೆಂಟ್ ಆಗಿದೆ. ಬಿಗ್ ಬಾಸ್ ಕನ್ನಡ ಸೀಜನ್ 11 ಮೂರು ತಿಂಗಳ ಪಯಣವನ್ನು ಯಶಸ್ವಿಯಾಗಿ ಮುಗಿಸಿ ಕೊನೆಯ ವಾರಕ್ಕೆ ಕಾಲಿಟ್ಟಿದೆ. ಇಪ್ಪತ್ತು ಸ್ಪರ್ಧಿಗಳ ಪೈಕಿ ಕೇವಲ ಆರು ಜನರು ಮನೆಯೊಳಗೆ ಉಳಿದಿದ್ದು, ಬಿಗ್ ಬಾಸ್ ಕನ್ನಡ ಸೀಜನ್ 11ರ ಫಿನಾಲೆ ವಾರಕ್ಕೆ ಕಾಲಿಟ್ಟಿ ಖುಷಿಯಲ್ಲಿದ್ದಾರೆ.
ಅತ್ತ ಗ್ಯಾಂಡ್ ಫಿನಾಲೆಗೆ ಭರ್ಜರಿ ಸಿದ್ಧತೆಯಾಗುತ್ತಿದ್ದರೆ ಇತ್ತ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಕೊನೆಯ ದಿನಗಳನ್ನು ಕಳೆಯುತ್ತಾ ಸಂಭ್ರಮಿಸುತ್ತಿದ್ದಾರೆ. ರಜತ್, ತ್ರಿವಿಕ್ರಮ್, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ ಹಾಗೂ ಭವ್ಯ ಗೌಡ ಫಿನಾಲೆ ತಲುಪಿದ್ದು, ಈ ವಾರ ಯಾವುದೇ ಆಟಗಳಿರದೇ ಬಿಗ್ ಬಾಸ್ ಮನೆ ಕೆಲವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ.

ಫಿನಾಲೆ ವಾರದ ದಿನಗಳನ್ನು ಕಳೆಯುತ್ತಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದಾದ ಮೇಲೊಂದು ಸಪ್ರೈಸ್ ಕೊಡುತ್ತಿದ್ದು, ಬಿಗ್ ಬಾಸ್ ಕನ್ನಡ ಸೀಜನ್ 11 ಮುಗಿದ ಮೇಲೆ ಆರಂಭವಾಗುವ ಮಜಾ ಟಾಕೀಸ್, ಯಜಮಾನ ಹಾಗೂ ವಧು ಧಾರಾವಾಹಿಯ ಕಲಾವಿದರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ.
ಈಗಾಗಲೇ ಮಜಾ ಟಾಕೀಸ್ ಹಾಗೂ ಯಜಮಾನ ಧಾರಾವಾಹಿಯ ಕಲಾವಿದರು ಬಿಗ್ ಬಾಸ್ ಮನೆಗೆ ತಮ್ಮ ಧಾರಾವಾಹಿ ಹಾಗೂ ಕಾರ್ಯಕ್ರಮದ ಬಗ್ಗೆ ಪರಿಚಯ ಮಾಡಿಕೊಂಡಿದ್ದು, ಇದೀಗ ವಧು ಧಾರಾವಾಹಿಯ ನಾಯಕ ಹಾಗೂ ನಾಯಕಿ ಬಿಗ್ ಬಾಸ್ ಮನೆಯೊಳಗೆ ತೆರಳಿದ್ದಾರೆ. ಇಂದಿನ ಸಂಚಿಕೆಯಲ್ಲಿ ಮಜಾ ಟಾಕೀಸ್ ಮತ್ತು ವಧು ಧಾರಾವಾಹಿಯ ಕಲಾವಿದರು ಬಿಗ್ ಬಾಸ್ ಮನೆಯೊಳಗಿರಲಿದ್ದಾರೆ. ಈ ಪೈಕಿ ಮಜಾ ಟಾಕೀಸ್ ತಂಡ ನಗು ಹಂಚಿದರೆ, ವಧು ಧಾರಾವಾಹಿ ನಾಯಕ ಹಾಗೂ ನಾಯಕಿ ಸ್ಫರ್ಧಿಗಳ ನಡುವೆ ಇರುವ ಮನಸ್ತಾಪ ದೂರ ಮಾಡುವ ಕೆಲಸ ಮಾಡಿದ್ದಾರೆ.
ವಧು ಧಾರಾವಾಹಿಯ ನಾಯಕಿ ವಧು ನಾನು ಡಿವೋರ್ಸ್ ಲಾಯರ್ ಎಂದು ಪರಿಚಯ ಮಾಡಿಕೊಂಡಿದ್ದು, ನನ್ನ ಉದ್ದೇಶ ಒಬ್ಬರ ಮೇಲೆ ಒಬ್ಬರಿಗೆ ಮನಸ್ತಾಪ ಇರಬಾರದು ಎಂದು ಹೇಳಿದ್ದಾರೆ. ಈ ವೇಳೆ ರಜತ್, ಉಗ್ರಂ ಮಂಜು ನಡುವಿನ ಮನಸ್ತಾಪದ ಬಗ್ಗೆ ಮಾತನಾಡಿದ್ದು, ಈಗ ಇಲ್ಲಿ ಎಷ್ಟೇ ಬಗೆಹರಿಸಿಕೊಂಡು ಆರಾಮಾಗಿ ಮಾತನಾಡಿದರೂ, ಟಾಸ್ಕ್ ಅಂತಾ ಬಂದಾಗ ಅವನು ಹುಚ್ಚ ಆಗುತ್ತಾನೆ, ನಾನು ಹುಚ್ಚ ಆಗುತ್ತೇನೆ ಎಂದಿದ್ದಾರೆ.

ಇನ್ನು ಮೋಕ್ಷಿತಾ ಜೊತೆಗಿನ ಮನಸ್ತಾಪದ ಬಗ್ಗೆ ಮಾತನಾಡಿದ ತ್ರಿವಿಕ್ರಮ್, ನಾವಿಬ್ಬರು ಈಗಲೂ ಚೆನ್ನಾಗಿಯೇ ಇದ್ದೇವೆ. ನಮ್ಮ ಮಧ್ಯ ಮನಸ್ತಾಪ ಏನಿಲ್ಲ. ಚೆನ್ನಾಗಿರುವ ಹುಡುಗಿಯರ ಜೊತೆ ನಾವು ಜಗಳ ಮಾಡಿಕೊಳ್ಳಲ್ಲ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ರಜತ್ ಮತ್ತೆ ಯಾಕೆ ಭವ್ಯ ಜೊತೆ ಜಗಳ ಮಾಡುತ್ತೀಯಾ ಎಂದು ಕಾಲೆಳೆದಿದ್ದಾರೆ.












Click it and Unblock the Notifications