Salaar 2 Update: ಇನ್ನೇನು ಶುರುವಾಗುತ್ತೆ ಪ್ರಶಾಂತ್ ನೀಲ್- ಪ್ರಭಾಸ್ ಜೋಡಿಯ ಸಲಾರ್ 2 ಶೂಟಿಂಗ್!
ಬೆಂಗಳೂರು, ಮಾರ್ಚ್ 04: 2023 ರ ದೊಡ್ಡ ಹಿಟ್‌ಗಳಲ್ಲಿ ಸಲಾರ್ ಭಾಗ 1: ಕದನ ವಿರಾಮ ಒಂದಾಗಿದೆ. ಥಿಯೇಟರ್‌ಗಳನ್ನು ಸ್ಟೇಡಿಯಂಗಳಾಗಿ ಮಾಡಿದ್ದ ಈ ಸಲಾರ್ ಸಿನಿಮಾ ಕನ್ನಡದ ಉಗ್ರಂ ರಿಮೇಕ್ ಆಗಿದ್ದರೂ ಕೂಡ ಹೊಸತನದಿಂದ ಕೂಡಿತ್ತು. ಪ್ರಶಾಂತ್ ನೀಲ್, ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು.
ಸಲಾರ್ ಭಾಗ ಎರಡು ಶೌರ್ಯಾಂಗ ಪರ್ವ ಸಿನಿಮಾಕ್ಕಾಗಿ ಜನ ಕಾತೂರದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೈ ಚಳಕವನ್ನು ಮತ್ತೆ ನೋಡಲು ಜನ ಹಾತೊರೆಯುತ್ತಿದ್ದಾರೆ. ಇದೇ ವೇಳೆ ಸಲಾರ್ ಭಾಗ 2 ರ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ.

ಸಲಾರ್ ಭಾಗ 2 ರ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭ
ಸಲಾರ್ ಭಾಗ ಒಂದರಲ್ಲಿ ನಟ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಬಾಬಿ ಸಿಂಹ ಮತ್ತು ಜಗಪತಿ ಬಾಬು ಅವರಂತಹ ದೈತ್ಯ ಪ್ರತಿಭೆಗಳಿದ್ದರು. ಈ ಸಿನಿಮಾ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ನಿರ್ದೇಶಿಸಿದ ಶಾರುಖ್ ಖಾನ್‌ರ 'ಡಂಕಿ' ಸಿನಿಮಾದೊಂದಿಗೆ ಥಿಯೇಟರ್‌ಗಳಿಗೆ ಬಿಡುಗಡೆಯಾಗಿತ್ತು.
ಸಲಾರ್ : ಶೌರ್ಯಂಗ ಪರ್ವಂ ಚಿತ್ರೀಕರಣದ ಬಗ್ಗೆ ನಟ ಬಾಬಿ ಸಿಂಗ ಮಾತನಾಡಿದ್ದಾರೆ. IDreamMedia ಗೆ ನೀಡಿದ ಸಂದರ್ಶನದಲ್ಲಿ, ಸಲಾರ್ ಭಾಗ 2 ರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿರುವ ಖ್ಯಾತ ನಟ ಬಾಬಿ ಸಿಂಹ ಅವರು ಸಲಾರ್ ತಂಡವು ಏಪ್ರಿಲ್ 2024 ರಿಂದ ಚಿತ್ರೀಕರಣವನ್ನು ಪ್ರಾರಂಭಿಸಲು ಪ್ಲ್ಯಾನ್ ಮಾಡಿದೆ ಎಂದು ಬಹಿರಂಗಪಡಿಸಿದ್ದಾರೆ.
ಬಾಹುಬಲಿ ಸಿನಿಮಾ ಬಳಿಕ ಸಲಾರ್ ಭಾಗ 1: ಕದನ ವಿರಾಮವು ಪ್ರಭಾಸ್‌ಗೆ ದೊಡ್ಡ ಬ್ಲಾಕ್‌ಬಸ್ಟರ್ ಹಿಟ್ ನೀಡಿದೆ ಈ ಸಿನಿಮಾ. ಚಿತ್ರದ ಮುಂದಿನ ಭಾಗಕ್ಕಾಗಿ ಅವರ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ ಎಂದು ಬಾಬಿ ಸಿಂಹ ಉಲ್ಲೇಖಿಸಿದ್ದಾರೆ. ತಮಿಳು ನಟ ಬಾಬಿ ಸಿಂಹ ಸಲಾರ್ ಭಾಗ 1: ಕದನ ವಿರಾಮದಲ್ಲಿ ಭಾರವ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.

ಸಲಾರ್ ಬಗ್ಗೆ ಮತ್ತಷ್ಟು ಮಾಹಿತಿ
ಆಕ್ಷನ್ ಡ್ರಾಮಾ ಸಲಾರ್, ಕಾಲ್ಪನಿಕ ನಗರವಾದ ಖಾನ್ಸಾರ್‌ನಲ್ಲಿ ನಡೆಯುತ್ತದೆ. ಈ ಸಿನಿಮಾ ದೇವಾ ಮತ್ತು ವರದ ನಡುವಿನ ಗಾಡ ಸ್ನೇಹದ ಬಗ್ಗೆ ತಿಳಿಸುತ್ತದೆ. ಖಾನ್ಸಾರ್‌ನಲ್ಲಿರುವ ವರದ ರಾಜ ಮನ್ನಾರ್ ಈ ಪಟ್ಟಣ್ಣದ ಅರಸನಾಗಲು ತನಗೆ ತಡೆಗೋಡೆಯಾಗುವವರ ವಿರುದ್ಧ ದೇವಾನ ಸಹಾಯ ಕೇಳುತ್ತಾನೆ. ಚಿತ್ರದ ಮೊದಲ ಭಾಗದಲ್ಲಿ ಸ್ನೇಹಿತರಾಗಿರುವ ಇಬ್ಬರು ನಂತರ ಶತೃಗಳಾಗುವುದೇ ಕಥೆ ಎನ್ನಲಾಗಿದೆ.
ಚಿತ್ರದಲ್ಲಿ ನಟಿ ಶ್ರುತಿ ಹಾಸನ್, ಜಗಪತಿ ಬಾಬು, ಬಾಬಿ ಸಿಂಹ, ತಿನ್ನು ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶಿಸಿದ್ದಾರೆ.
ನಟ ಪ್ರಭಾಸ್
ನಟ ಪ್ರಭಾಸ್ ಅವರು ನಾಗ್ ಅಶ್ವಿನ್ ಅವರ ಮುಂಬರುವ ಚಿತ್ರ ಕಲ್ಕಿ 2898 AD ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಕಮಲ್ ಹಾಸನ್, ದೀಪಿಕಾ ಪಡುಕೋಣೆ , ಅಮಿತಾಬ್ ಬಚ್ಚನ್, ದಿಶಾ ಪಟಾನಿ ಸೇರಿದಂತೆ ದೊಡ್ಡ ತಾರಾ ಬಳಗವಿರಲಿದೆ. ಇದರ ಜೊತೆಗೆ ಪ್ರಭಾಸ್ ನಿರ್ದೇಶಕ ಮಾರುತಿ ಅವರ ಮುಂದಿನ ಹಾರರ್-ಕಾಮಿಡಿ ಚಿತ್ರ 'ದಿ ರಾಜಾ ಸಾಬ್' ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.












Click it and Unblock the Notifications