Ugram Manju: ಗೌತಮಿ ಜಾದವ್ ಜೊತೆಗಿನ ಸ್ನೇಹದ ಬಗ್ಗೆ ಉಗ್ರಂ ಮಂಜು ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆದು ಹೋಗಿದ್ದು, ಉತ್ತರ ಕರ್ನಾಟಕದ ಹುಲಿ ಖ್ಯಾತಿಯ ಹಾಡುಗಾರ ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ಗೆಲ್ಲಬಹುದಾಗಿದ ಸ್ಪರ್ಧಿಯಾಗಿದ್ದ ಉಗ್ರಂ ಮಂಜು ಫಿನಾಲೆ ಸ್ಪರ್ಧಿಯಾಗಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಉತ್ತಮ ಗೆಳತನಕ್ಕೆ ಸಾಕ್ಷಿಯಾಗಿದ್ದು, ಉಗ್ರಂ ಮಂಜು ಹಾಗೂ ಗೌತಮಿ ಅವರ ಸ್ನೇಹ. ಈ ಸ್ನೇಹದ ಬಗ್ಗೆ ಇದೀಗ ಮೊದಲ ಬಾರಿಗೆ ಉಗ್ರಂ ಮಂಜು ಮಾತನಾಡಿದ್ದಾರೆ.
' ಬಿಗ್ ಬಾಸ್ ಮನೆಯೊಳಗೆ ನನಗೆ ಆತ್ಮೀಯರು, ಒಬ್ಬ ಗೆಳತಿ ಅಂದರೆ ಅದು ಗೌತಮಿ ಅವರು. ಅವರನ್ನು ಬಿಟ್ಟು ಮತ್ಯಾರು ಇರಲಿಲ್ಲ. ಉಳಿದವರೆಲ್ಲಾ ಪರಿಚಯಸ್ಥರು. ಮೋಕ್ಷಿತಾ ಅಣ್ಣ ಎಂದು ಗೌರವ ಕೊಡುತ್ತಿದ್ದರು. ಅಲ್ಲಿ ಎಲ್ಲರನ್ನೂ ತೂಕ ಹಾಕಿದರೆ ನನಗೆ ತುಂಬಾ ಆತ್ಮೀಯರು ಅಂದರು ಅದು ಗೌತಮಿ ಅವರು' ಎಂದು ಉಗ್ರಂ ಮಂಜು ಹೇಳಿದ್ದಾರೆ.

ಗೌತಮಿಯಿಂದ ನಿಮ್ಮ ಆಟದ ವೈಖರಿ ಬದಲಾಯ್ತಾ? ಮೊದಲು ಮೂರು ವಾರ ಇದ್ದ ಮಂಜು ಸಂಪೂರ್ಣ ಬದಲಾಗಿದ್ದೇಗೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಂಜು, 'ಮೊದಲು ಎರಡು ವಾರ ಜಗದೀಶ್ ಅವರು ಇದ್ದರು. ಅವರಿಂದ ಆ್ಯಕ್ಷನ್ ಬರುತ್ತಿತ್ತು. ನಾನು ರಿಯ್ಯಾಕ್ಟ್ ಆಗುತ್ತಿದೆ. ಅದಾದ ಮೇಲೆ ಯಾರೂ ನನ್ನ ಜೊತೆ ಆ ರೀತಿ ಮಾತನಾಡಲು ಬರಲಿಲ್ಲ. ನಾನು ಬೇಕಂತಲೇ ಜಗಳಕ್ಕೆ ಹೋಗಬೇಕಾದ ಪರಿಸ್ಥಿತಿ ಕೂಡ ಇರಲಿಲ್ಲ. ಆ ಮನೆಯಲ್ಲಿ ಎಲ್ಲರ ಜೊತೆಗೂ ಜಗಳ ಆಡಿದ್ದೇನೆ. ಗೌತಮಿ ಅವರ ಜೊತೆಗೂ ಜಗಳ ಆಡಿದ್ದೇನು' ಎಂದರು.
'ಮಂಜು ವ್ಯಕ್ತಿತ್ವ ಹೇಗೆ ಎಂದರೆ ಚಿಕ್ಕವರಿರಲಿ, ದೊಡ್ಡವರಿರಲಿ, ನನಗೆ ಒಳ್ಳೆಯದು ಬಯಸಿದೆ ಅವರ ಮಾತನ್ನು ಕೇಳುವವನು ನಾನು. ಹೀಗಾಗಿ ಅವರಿಂದ ನನ್ನ ಆಟ ಕುಗ್ಗಿತು, ಬದಲಾಯಿತು ಎನ್ನುವುದು ತಪ್ಪಾಗುತ್ತದೆ. ವೀಕೆಂಡ್‌ನಲ್ಲಿ ಸುದೀಪ್ ಸರ್ ಹೇಳುತ್ತಿದ್ದದ್ದು ಅರ್ಥ ಆಗುತ್ತಿತ್ತು. ಆದರೆ ಅವರು ಹೇಳಿದ ಕೂಡಲೇ ಬಿಡುವ ವ್ಯಕ್ತಿತ್ವ ನನ್ನದಲ್ಲ. ಆಟ, ಕಳಪೆ, ನಾಮಿನೇಷನ್ ಏನೇ ಸಂದರ್ಭದಲ್ಲಿಯೂ ನಾನು ಯಾರ ಬಗ್ಗೆ ನೆಗೆಟಿವ್ ಆಗಿ ಮಾತನಾಡಿಲ್ಲ' ಎಂದರು.

'ಇನ್ನು ಒಬ್ಬ ಮನುಷ್ಯನಿಗೆ ಮಾರಲ್ ಸಪೋರ್ಟ್ ಎನ್ನುವುದು ಬೇಕು. ಗೌತಮಿ ಅವರು ನನಗೆ ಹಾಗೆ ಇದ್ದರು. ಊಟದ ವಿಚಾರದಲ್ಲಿ ಇರಲಿ. ನನ್ನನ್ನು ನೋಡಿಕೊಳ್ಳುವುದರಲ್ಲಿ ಇರಲಿ, ಏನೇ ಚಿಕ್ಕ ವಿಚಾರಗಳಿರಲಿ, ಆ ಮನೆಯಲ್ಲಿ ನೂರು ಇಪ್ಪತ್ತು ದಿನ ಬದುಕಬೇಕಾದರೆ ಸಪೋರ್ಟ್ ಬೇಕು. ಆ ಮನೆಯಲ್ಲಿ ನಮಗೆ ಅಂತಾ ಯಾರೋ ಒಬ್ಬರು ಒಳ್ಳೆಯದನ್ನು ಬಯಸುತ್ತಿದ್ದಾರೆ ಅಂದರೆ ದೈಹಿಕವಾಗಿ, ಮಾನಸಿಕವಾಗಿ ಸಪೋರ್ಟ್ ಆಗಿ ನಿಂತಿದ್ದಾರೆ ಅಂದರೆ ಖುಷಿ ಆಗುತ್ತದೆ' ಎಂದು ಗೌತಮಿ ಜಾದವ್ ಬಗ್ಗೆ ಉಗ್ರಂ ಮಂಜು ಟಿವಿ 9ಗೆ ನೀಡಿದ ಸಂದರ್ಶನದಲ್ಲಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.












Click it and Unblock the Notifications