Gauthami Jadav: ಗೌತಮಿ ಜೊತೆಗಿನ ಸ್ನೇಹಕ್ಕೆ ಕುಟುಂಬಸ್ಥರೇ ಅಡ್ಡಿಯಾದ್ರಾ?: ಸ್ಪಷ್ಟನೆ ಕೊಟ್ಟ ಉಗ್ರಂ ಮಂಜು

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಗೆಲ್ಲಬಹುದಾದ ಸ್ಪರ್ಧಿಯಾಗಿದ್ದ ಉಗ್ರಂ ಮಂಜು ಗ್ರ್ಯಾಂಡ್‌ ಫಿನಾಲೆಯಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಬಿಗ್ ಬಾಸ್ ಮನೆಯೊಳಗೆ ಉಗ್ರಂ ಮಂಜು ಹಾಗೂ ಗೌತಮಿ ಗೆಳೆತನವೇ ಮಂಜು ಸೋಲಿಗೆ ಕಾರಣವಾಯ್ತು ಎನ್ನುವ ಆರೋಪ ಕೂಡ ಇದೆ. ಇದೇ ವಿಚಾರವನ್ನು ಕುಟುಂಬಸ್ಥರು ಮನೆಯೊಳಗೆ ತೆರಳಿದ್ದಾಗ ಎಚ್ಚರಿಸಿದ್ದರು. ಅಲ್ಲದೇ ಈ ಸ್ನೇಹದಿಂದ ದೂರ ಇರುವಂತೆ ಹೇಳಿದ್ದರು. ಈ ಬಗ್ಗೆ ಇದೀಗ ಉಗ್ರಂ ಮಂಜು ಮಾತನಾಡಿದ್ದಾರೆ.

'ಗೌತಮಿ ಅವರ ಗಂಡ ಬಂದು ಹೇಳಿದ್ದು ಅದೇ ಮಾತು. ನೀನೇಕೆ ಬೇರೆಯವರ ವಿಚಾರಕ್ಕೆ ತಲೆಕೆಡಿಸಿಕೊಳ್ಳುತ್ತಿದ್ದೀಯಾ. ಮಂಜು ಅವರ ವಿಚಾರಕ್ಕೆ ನೀನ್ಯಾಕೆ ತಲೆ ಹಾಕುತ್ತಿದ್ದೀಯಾ. ಮಂಜು ಈ ರೀತಿ ಮಾತನಾಡುತ್ತಾರೆ ಅಂದರೆ ಬಹುಶಃ ಅವರ ಆಟವನ್ನು ಅವರು ಆಡುತ್ತಿದ್ದಾರೆ. ಹೊರಗಡೆ ಈ ರೀತಿ ಕಾಣಿಸುತ್ತಿದೆ ಅಂತಾ ನಮಗೆ ಗೊತ್ತಿಲ್ಲ. ಒಂದೂವರೆ ಗಂಟೆ ಹೇಗೆ ತೋರಿಸಿದ್ದಾರೆ ಅಂತಾ ನಮಗೆ ಗೊತ್ತಿಲ್ಲ. ಹೀಗಾಗಿ ಅವರು ಅವಳ ಆಟ ಅವಳು ಆಡಲಿ ಅಂತಾ ಹೇಳಿ ಹೋದರು ಅಷ್ಟೇ' ಎಂದರು.

Ugram Manju Clarifies Family Sentiment Regarding Gautami Jadav Friendship

'ನನ್ನ ಕುಟುಂಬ ಹೇಗೆ ಅಂತಾ ನನಗೆ ಚೆನ್ನಾಗಿ ಗೊತ್ತು. ಕುಟುಂಬದವರು ಮಾತನಾಡಿ ಹೋದ ವಿಚಾರವನ್ನು ನಾನು ಗೌತಮಿ ಜೊತೆ ಚರ್ಚೆ ಕೂಡ ಮಾಡಿದ್ದೇನೆ. ನನ್ನ ತಂಗಿ ನನ್ನ ಕುಟುಂಬದವರು ಹಾಗೆ ಅಲ್ಲ ನನಗೆ ಗೊತ್ತು. ಆಟದ ವಿಚಾರವಾಗಿ ಅವಳು ಬಂದು ಹೇಳಿದ್ದಾಳೆ. ಅದನ್ನೂ ಸಹ ಯಾರಾದರೂ ಹೇಳಿಕೊಟ್ಟಿರುತ್ತಾರೆ. ಈ ರೀತಿ ಆಣೆ ಮಾಡಿಸಿಕೋ ಅಂತಾ ಯಾರಾದರೂ ಹೇಳಿ ಕೊಟ್ಟಿರುತ್ತಾರೆ'.

'ಮಂಜು ಫ್ಯಾಮಿಲಿ ಸೆಂಟಿಮೆಂಟಿಗೆ ಕರಗುತ್ತಾನೆ. ಹೀಗಾಗಿ ಈ ರೀತಿ ಮಾಡು ಅಂತಾ ಯಾರೋ ಹೇಳಿ ಕೊಟ್ಟು ಮಾಡಿಸಿರುತ್ತಾರೆ. ಯಾಕೆಂದರೆ ಅವಳು ಹಾಗೆ ಅಲ್ಲ. ನನ್ನ ತಂಗಿಯರು ಯಾರೂ ಹಾಗೆ ಅಲ್ಲ. ನನ್ನ ಕೊನೆಯ ತಂಗಿ ಫೋನ್‌ ಮಾಡಿ ಯೋಗ ಹೋಗಬೇಕು, ಏಕಾಗ್ರತೆ ಬೆಳೆಸಿಕೊಳ್ಳಬೇಕು ಅಂದಾಗ ಏನೂ ಬೇಡ ನೀನು ಗೌತಮಿ ಜೊತೆ ಫ್ರೆಂಡ್‌ಶಿಪ್‌ನಲ್ಲಿರುವ ಆಗ ನೀನು ಶಾಂತವಾಗಿ ಇರುತ್ತೀಯಾ ಅಂತಾ ಚಿಕ್ಕ ತಂಗಿನೇ ಹೇಳಿದಳು' ಎಂದು ಹೇಳಿದರು.

Ugram Manju Clarifies Family Sentiment Regarding Gautami Jadav Friendship

'ಇನ್ನೊಬ್ಬಳು ತಂಗೀನು ಹೇಳಿದರು ಆಟ ಅಂದ ಮೇಲೆ ಚಿಕ್ಕಪುಟ್ಟ ವಿಚಾರಗಳು, ನೆಗೆಟಿವ್‌, ಪಾಸಿಟಿವ್‌ ಎಲ್ಲಾ ಇರುತ್ತದೆ. ಅದನೆಲ್ಲಾ ಮೀರಿ ನೀವು ಗೆದ್ದಿದ್ದೀರಾ. ತುಂಬಾ ಶ್ರದ್ಧೆಯಿಂದ ಆಡಿದ್ದೀರಾ ಅಂತಾ ಹೇಳಿದಳು. ಈ ಎಲ್ಲಾ ವಿಚಾರಗಳು ಆಟದಲ್ಲಿ ಅಷ್ಟೇ. ನನ್ನ ಕುಟುಂಬದವರು ಬಂದಾಗ ಗೌತಮಿ ಅವರ ಜೊತೆ ಚೆನ್ನಾಗಿ ಮಾತನಾಡಿದ್ದಾರೆ. ಆಟದ ವಿಚಾರದಲ್ಲಿ ಹಾಗೆ ಹೇಳಿದೆ ಎಂದು ಗೌತಮಿಗೆ ನನ್ನ ತಂಗಿ ಸ್ವಾರಿ ಕೂಡ ಕೇಳಿದ್ದಾಳೆ' ಎಂದು ಉಗ್ರಂ ಮಂಜು ಫಿಲ್ಮಿ ಫಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+