Bigg Boss: ಬಿಗ್ ಬಾಸ್ ಮನೆ ಮುಖ್ಯದ್ವಾರದ ಮೂಲಕ ಹೊರಗಡೆ ಬಂದ ಗೆಲ್ಲಬೇಕಿದ್ದ ಸ್ಪರ್ಧಿ
Bigg Boss: ಬಿಗ್ ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕುತ್ತಿದೆ. ಯಾಕೆಂದರೆ ಕಳೆದ ವಾರವಷ್ಟೇ ಗೆಲ್ಲಬೇಕಿದ್ದ ಸ್ಪರ್ಧಿಯೇ ಮನೆಯಿಂದ ಹೊರಗಡೆ ಬಂದಿದ್ದರು. ಇದೀಗ ಮತ್ತೊಬ್ಬ ಅಂತಹ ಸ್ಪರ್ಧಿಯೇ ಸೂಟ್‌ಕೇಸ್ ಸಹಿತ ಬಿಗ್ ಬಾಸ್ ಮನೆ ಮುಖ್ಯ ದ್ವಾರದ ಬಾಗಿಲಿನ ಮೂಲಕ ಹೊರಗಡೆ ಬಂದಿದ್ದಾರೆ. ಈ ವಿಚಾರ ಇದೀಗ ಭಾರೀ ಗೊಂದಲಕ್ಕೀಡು ಮಾಡಿದೆ.
ಕಳೆದ ವಾರ ಗೆಲ್ಲಬೇಕಿದ್ದ ಸ್ಪರ್ಧಿ ಶಿಶಿರ್ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದರು. ಇದು ಅಲ್ಲಿದ್ದ ಇತರ ಸ್ಪರ್ಧಿಗಳು ಸೇರಿದಂತೆ ಪ್ರೇಕ್ಷಕರಿಗೆ ಶಾಕ್ ಉಂಟು ಮಾಡಿತ್ತು. ಇದೀಗ ತ್ರಿವಿಕ್ರಂ ಅವರನ್ನು ಬಿಗ್ ಬಾಸ್ ಮುಖ್ಯದ್ವಾರದಿಂದ ಹೊರಗಡೆ ಕಳುಹಿಸಲಾಗಿದ್ದು, ಇದರಿಂದ ಮನೆಯ ಬಹುತೇಕ ಸ್ಪರ್ಧಿಗಳು ಸೇರಿದಂತೆ ಪ್ರೇಕ್ಷಕರು ಆಶ್ಚರ್ಯಗೊಂಡಿದ್ದಾರೆ. ಹಾಗಾದರೆ ಅಸಲಿ ಸತ್ಯ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬಿಗ್ ಬಾಸ್ ಕನ್ನಡದಲ್ಲಿ ತ್ರಿವಿಕ್ರಂ ಅವರನ್ನು ವಾರದ ಕಥೆ ಕಿಚ್ಚನ ಜೊತೆ ಭಾನುವಾರದ ಎಪಿಸೋಡ್‌ನಲ್ಲಿ ಮನೆಯಿಂದ ಹೊರಗಡೆ ಕಳುಹಿಸಲಾಗಿದೆ. ಇದು ಎಲ್ಲರನ್ನೂ ಆಶಶ್ಚರ್ಯಕ್ಕೊಳಗಾಗುವಂತೆ ಮಾಡಿದೆ. ಇನ್ನು ತ್ರಿವಿಕ್ರಂ ಬಿಗ್ ಬಾಸ್ ಮನೆಯ ಪ್ರವೇಶ ದ್ವಾರದಿಂದ ಹೊರಗಡೆ ಹೋದ ವೇಳೆ ಭವ್ಯಾ ಗೌಡ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನುಳಿದ ಬಹುತೇಕ ಸ್ಪರ್ಧಿಗಳು ಕೂಡ ಶಾಕ್ ಆಗಿದ್ದಾರೆ. ಅದರಲ್ಲೂ ಐಶ್ವರ್ಯ ಸೇಫ್ ಆಗಿದ್ದು ಇನ್ನೂ ಶಾಕ್ ಆಗಿದೆ ಅಂತಲೂ ಹೇಳಿದ್ದಾರೆ.
ಇನ್ನು ತಮ್ಮ ತಂಡವನ್ನು ಉಳಿಸಲು ತ್ರಿವಿಕ್ರಂ ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದರು. ಈ ಘಟನೆಯು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಇದಕ್ಕೆ ಒಂದು ಟ್ವಿಸ್ಟ್ ಇರಲಿದೆ. ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ ಅವರು ಫಿನಾಲೆ ಸ್ಪರ್ಧಿಯಂತಲೇ ಗುರುತಿಸಿಕೊಂಡಿದ್ದಾರೆ. ಅವರು ಉತ್ತಮವಾಗಿ ಗೇಮ್‌ಗಳನ್ನು ಆಡುತ್ತಿದ್ದಾರೆ. ಅವರ ಆಟ ಬಹುತೇಕರಿಗೆ ಇಷ್ಟವಾಗಿದೆ. ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಆದರೆ, ಈಗ ಅವರು ಬಿಗ್ ಬಾಸ್ ಮುಖ್ಯದ್ವಾರದ ಬಾಗಿಲನ್ನು ದಾಟಿ ಹೊರ ಬಂದಿದ್ದಾರೆ.
ಆದರೆ, ಅವರು ಎಲಿಮಿನೇಟ್ ಆದರು ಎಂದಲ್ಲ. ಈ ವಾರ ಎಲಿಮಿನೇಷನ್ ಡ್ರಾಮಾ ನಡೆದಿದೆ. ಅದರ ಭಾಗವಾಗಿ ಈ ಪ್ರಕ್ರಿಯೆ ನಡೆದಿದೆ. ತ್ರಿವಿಕ್ರಂ ನಿಜಕ್ಕೂ ಎಲಿಮಿನೇಟ್ ಆದರು ಎಂದು ಭಾವಿಸಿದ ಭವ್ಯಾ ಅವರು ಕಣ್ಣೀರಿಟ್ಟರು. ಈ ವಾರ ತ್ರಿವಿಕ್ರಂ ಅವರನ್ನು ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದರು. ತಮ್ಮ ತಂಡದವರನ್ನು ಉಳಿಸಲು ಹೋಗಿ ಅವರು ಈ ರೀತಿ ಮಾಡಿದ್ದರು.
ಈ ಬಗ್ಗೆ ಸುದೀಪ್ ಅವರು ಎಚ್ಚರಿಕೆಯನ್ನೂ ಸಹ ನೀಡಿದ್ದರು. ಆದರೆ, ತ್ರಿವಿಕ್ರಂಗೆ ತಾವು ಇದ್ದೇ ಇರುತ್ತೇವೆ ಎನ್ನುವ ಬಲವಾದ ನಂಬಿಕೆ ಇತ್ತು. ಅದನ್ನು ಬ್ರೇಕ್ ಮಾಡಬೇಕೆನ್ನುವ ಕಾರಣಕ್ಕೆ ಈ ವಾರ ಎಲಿಮಿನೇಷನ್ ಡ್ರಾಮಾ ಮಾಡಲಾಗಿದೆ ಎನ್ನಲಾಗಿದೆ. ಈ ವಾರ ಯಾವುದೇ ವೋಟಿಂಗ್ ಲೈನ್ ತೆರೆದಿರಲಿಲ್ಲ. ಆದರೂ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ.
ತ್ರಿವಿಕ್ರಂ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಿದ್ದಾರೆ ಎಂದು ಸುದೀಪ್ ಘೋಷಣೆ ಮಾಡಿದರು. "ನಿಮಗೆ ನನ್ನ ಜೊತೆ ಬಂದು ಸೇರಲು 5 ನಿಮಿಷ ಕಾಲಾವಕಾಶ ಇದೆ' ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದರು. ಎಲ್ಲರೂ ಇದು ಪ್ರ್ಯಾಂಕ್ ಇರಬಹುದು ಎಂದುಕೊಂಡಿದ್ದರು. ತ್ರಿವಿಕ್ರಂ ಕೂಡ ಹಾಗೆಯೇ ಅಂದುಕೊಂಡಂತೆ ಇತ್ತು. ಆದರೆ, ಹಾಗಾಗಲಿಲ್ಲ. ಬಿಗ್ ಬಾಸ್ ಗಾರ್ಡನ್ ಏರಿಯಾಗೆ ಬರುತ್ತಿದ್ದಂತೆ ಮುಖ್ಯದ್ವಾರ ಓಪನ್ ಆಯಿತು. ಅದರಿಂದ ಅವರು ಹೊರಗಡೆ ಹೋದರು.
ಆಗ ಮನೆಯಲ್ಲಿದ್ದ ಬಹುತೇಕ ಸ್ಪರ್ಧಿಗಳು ಗೆಲ್ಲಬೇಕಿದ್ದ ಸ್ಪರ್ಧಿ ಈ ರೀತಿ ಎಲಿಮಿನೇಟ್ ಆದರಲ್ಲ ಎಂದು ಎಲ್ಲರೂ ಆಶ್ಚರ್ಯಕ್ಕೊಳಗಾಗಿದ್ದಾರೆ. ಈ ಬಗ್ಗೆ ಬಿಗ್ ಬಾಸ್ ಒಳಗೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಇನ್ನು ಇಂದು (ಡಿಸೆಂಬರ್ 23) ತ್ರಿವಿಕ್ರಂ ಮರಳಿ ಮತ್ತೆ ಬಿಗ್ ಬಾಸ್ ಗೂಡಿಗೆ ಸೇರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಒಂದು ಗಮನಿಸುವುದಾದರೆ, ಬಿಗ್ ಬಾಸ್ ಸ್ಪರ್ಧಿಗಳ ಎದುರಿಗೆ ತ್ರಿವಿಕ್ರಂಗೆ ವೇದಿಕೆ ಮೇಲೆ ಬರುವಂತೆ ಕಿಚ್ಚ ಸುದೀಪ್ ಹೇಳಿದ್ದರು. ಆದರೆ ಅಲ್ಲಿ ನಡೆದಿದ್ದೇ ಬೇರೆ. ಕಳೆದ ವಾರ ವೈಯಕ್ತಿಕ ಕಾರಣಗಳಿಂದ ಮನೆಯಿಂದ ಹೊರಗಡೆ ಹೋಗಿದ್ದ ಗೋಲ್ಡ್ ಸುರೇಶ್ ಅವರನ್ನು ವೇದಿಕೆ ಮೇಲೆ ಕರೆದು ಸುದೀಪ್ ಅವರು ಮಾತನಾಡಿಸುತ್ತಾರೆ. ಆದರೆ ಎಪಿಸೋಡ್ ಕೊನೆವರೆಗೂ ತ್ರಿವಿಕ್ರಂ ಮಾತ್ರ ವೇದಿಕೆ ಮೇಲೆ ಬರಲಿಲ್ಲ. ಇಲ್ಲೇ ತಿಳಿದುಕೊಳ್ಳಬಹುದು ಇಂದು ಮತ್ತೆ ಅವರು ಮತ್ತೆ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ ಎಂದು.












Click it and Unblock the Notifications