ನಟರು ಶರ್ಟ್‌ ಧರಿಸದೆ ಬಂದ್ರೆ ಪ್ರಶ್ನಿಸಲ್ಲ, ಮಹಿಳೆ ಬೋಲ್ಡ್‌ ಆಗಿದ್ರೆ ಒಪ್ಪಲ್ಲ: 'ಟಾಕ್ಸಿಕ್‌' ಟೀಸರ್‌ ಪರ ಅನುರಾಗ್‌ ಕಶ್ಯಪ್‌

ನಟ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ 'ಟಾಕ್ಸಿಕ್‌' (Toxic teaser) ಸಿನಿಮಾದ ಟೀಸರ್‌ ಭಾರೀ ಟೀಕೆಗಳಿಗೆ ಗುರಿಯಾಗಿದ್ದು ಗೊತ್ತೇ ಇದೆ. ಟೀಸರ್‌ನಲ್ಲಿದ್ದ ಹಸಿಬಿಸಿ ದೃಶ್ಯಗಳ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಬಾಲಿವುಡ್‌ ನಿರ್ದೇಶಕ ಅನುರಾಗ್ ಕಶ್ಯಪ್‌ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೇರವಾಗಿ ಮಾತನಾಡಿದ್ದಾರೆ. ಸಿನಿಮಾ, ರಾಜಕೀಯ ಹಾಗೂ ತಂತ್ರಜ್ಞಾನ ಕುರಿತಂತೆ ಮಾತನಾಡಿದ ಅನುರಾಗ್, 'ಟಾಕ್ಸಿಕ್' ಟೀಸರ್‌ಗೆ ಎದುರಾದ ವಿರೋಧದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಟಾಕ್ಸಿಕ್' ಅನ್ನು ಅತ್ಯಂತ ಧೈರ್ಯಶಾಲಿ ಪ್ರಯತ್ನ ಎಂದು ಪ್ರಶಂಸಿಸಿದ್ದಾರೆ.

ಇದು ಸಮಾಜದ ದ್ವಂದ್ವ

ನಟ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್' ಟೀಸರ್‌ನಲ್ಲಿ ಕಾಣಿಸಿಕೊಂಡ ಹಸಿಬಿಸಿ ದೃಶ್ಯಗಳು ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಅನುರಾಗ್ ಕಶ್ಯಪ್ ಈ ಟೀಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಟೀಸರ್ ವಿರುದ್ಧ ವ್ಯಕ್ತವಾದ ಆಕ್ರೋಶವನ್ನು ಅವರು ಸಮಾಜದ "ಸಾಂಸ್ಕೃತಿಕ ದ್ವಂದ್ವ ಮತ್ತು ಕಪಟ ನೈತಿಕತೆ" ಎಂದು ಕರೆದಿದ್ದಾರೆ.

Toxic Teaser

"ನಟರು ಪರದೆಯ ಮೇಲೆ ಶರ್ಟ್ ಇಲ್ಲದೆ ಕಾಣಿಸಿಕೊಂಡಾಗ ಅಥವಾ ಅತಿಯಾದ ಪುರುಷತ್ವ ಪ್ರದರ್ಶಿಸಿದಾಗ ಅದನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ಆದರೆ ಮಹಿಳೆ ತನ್ನ ಲೈಂಗಿಕತೆಯನ್ನು ಆಚರಿಸಿದರೆ ಮಾತ್ರ ಅದನ್ನು ಸಮಾಜ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಇದುವೇ ನಮ್ಮ ಸಾಂಸ್ಕೃತಿಕ ದ್ವಂದ್ವವನ್ನು ಬಹಿರಂಗಪಡಿಸುತ್ತದೆ" ಎಂದು ಹೇಳಿದ್ದಾರೆ.

ಟೀಸರ್ ವಿವಾದಕ್ಕೆ ಕಾರಣವೇನು?

'ಟಾಕ್ಸಿಕ್' ಟೀಸರ್‌ನಲ್ಲಿ ಯಶ್ ಪಾತ್ರವನ್ನು ಸ್ಮಶಾನದ ಪ್ರದೇಶದಲ್ಲಿ ಹಸಿಬಿಸಿ ದೃಶ್ಯಗಳ ಮೂಲಕ ಪರಿಚಯಿಸಲಾಗಿದೆ. ಆದರೆ ಅದಕ್ಕೂ ಮೊದಲು, ಕಾರಿನಲ್ಲಿ ಲೈಂಗಿಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಅನೇಕರು ಈ ದೃಶ್ಯ ಅನಾವಶ್ಯಕ ಎಂದು ಕರೆದಿದ್ದರು. ಆದರೆ ಸಿನಿಮಾ ಪ್ರಿಯರು ಮಾತ್ರ ಇದನ್ನು ಕೊಂಡಾಡಿದ್ದರು. ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ವಿದೇಶಿ ನಟಿ ಬಿಯಾಟ್ರಿಸ್ ಟಾಫೆನ್‌ಬಾಚ್ ವಿರುದ್ಧವೂ ಸೋಷಿಯಲ್‌ ಮೀಡಿಯಾಗಳಲ್ಲಿ ಟ್ರೋಲ್‌ ನಡೆದಿತ್ತು. ತೀವ್ರ ವಿರೋಧದ ಹಿನ್ನೆಲೆ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಡಿಲೀಟ್ ಕೂಡ ಮಾಡಿದ್ದರು. ಈ ವಿವಾದಕ್ಕೆ ಮಹಿಳಾ ಆಯೋಗ ಕೂಡ ಟೀಕೆ ವ್ಯಕ್ತಪಡಿಸಿತ್ತು.

'ಟಾಕ್ಸಿಕ್' ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದು, ಕಥೆ ಮತ್ತು ಚಿತ್ರಕಥೆಯನ್ನು ಯಶ್ ಹಾಗೂ ಗೀತು ಮೋಹನ್‌ದಾಸ್ ಒಟ್ಟಾಗಿ ಬರೆದಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣವಾಗಿದ್ದು, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಕನ್ನಡದ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಟಾಕ್ಸಿಕ್' ಸಿನಿಮಾ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+