Toxic Movie: ಯಶ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಡಲು ಮುಂದಾದ ಚಿತ್ರತಂಡ

ಕೆಜಿಎಫ್ 2 ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಪಡೆದ ಬಳಿಕ ನಟ ಯಶ್ ಮುಂದಿನ ಸಿನಿಮಾ ಯಾವುದು, ಯಾರ ಜೊತೆ ಸಿನಿಮಾ ಮಾಡ್ತಾರೆ ಎನ್ನುವ ಕುತೂಹಲ ಹೆಚ್ಚಾಗಿತ್ತು. ಎರಡು ವರ್ಷಗಳ ಬಳಿಕ ಕೊನೆಗೂ ಯಶ್ 2023ರ ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಮುಂದಿನ ಸಿನಿಮಾ ಟೈಟಲ್ ಘೋಷಣೆ ಮಾಡಿದ್ದರು. ಟೈಟಲ್ ಅನೌನ್ಸ್ ಮಾಡಿದ್ದು ಬಿಟ್ಟರೆ ಈವರೆಗೂ ಸಿನಿಮಾ ಬಗ್ಗೆ ಯಾವ ಮಾಹಿತಿಯೂ ಹೊರಬಂದಿಲ್ಲ.

ಒಂದು ವರ್ಷ ಸತತ ಕಾಯುವಿಕೆ ಬಳಿಕ ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸಿನಿಮಾ ನಿರ್ಮಾಣ ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಭರ್ಜರಿ ಸುದ್ದಿ ಕೊಟ್ಟಿದು, ಸಿದ್ದವಾಗಿರಿ ಎಂದು ಸೂಚನೆ ಕೊಟ್ಟಿದೆ. ಈ ಸಿಹಿ ಸುದ್ದಿ ಏನು? ಯಾವಾಗ ಎನ್ನುವ ಬಗ್ಗೆ ಮಾಹಿತಿ ನೀಡದೇ ಇದ್ದರೂ ಶೀಘ್ರದಲ್ಲೇ ಟಾಕ್ಸಿಕ್ ಸಿನಿಮಾ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬೀಳುವ ಸೂಚನೆ ಸಿಕ್ಕಿದೆ.

toxic movie team give happy news to rocking star yash fans

ಹುಟ್ಟುಹಬ್ಬದ ಉಡುಗೊರೆ

ಜನವರಿ 8ರಂದು ನಟ ಯಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಹುಟ್ಟಹಬ್ಬಕ್ಕಾಗಿ ಸಿನಿಮಾ ಬಗ್ಗೆ ದೊಡ್ಡ ಅಪ್‌ಡೇಟ್ ಸಿಗುವ ಸಾಧ್ಯತೆ ಇದೆ. ಸಿನಿಮಾ ಟೀಸರ್ ಬಿಡುಗಡೆಯಾಗುತ್ತಾ ಇಲ್ಲಾ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಲುಕ್‌ ರಿವೀಲ್ ಮಾಡ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.

ನಿರೀಕ್ಷೆ ಹೆಚ್ಚಿಸಿದ ಅಪ್‌ಡೇಟ್‌

ಒಂದು ವರ್ಷದಿಂದ ತಾಳ್ಮೆಯಿಂದ ಕಾದಿರುವ ಅಭಿಮಾನಿಗಳಿಗೆ ಕೊನೆಗೂ ಖುಷಿ ಸುದ್ದಿ ಸಿಕ್ಕಂತಾಗಿದೆ. 2025ರ ಏಪ್ರಿಲ್‌ನಲ್ಲೇ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು, ಆದರೆ ದೊಡ್ಡ ತಾರಾಬಳಗವೇ ಇರುವ ಕಾರಣ ಡೇಟ್ ಸಮಸ್ಯೆಯಿಂದಾಗಿ ಚಿತ್ರೀಕರಣ ತಡವಾಗಿ ಆರಂಭವಾಗಿದ್ದರಿಂದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. 2025ರ ಡಿಸೆಂಬರ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.

ಪ್ಯಾನ್ ಇಂಡಿಯಾ ಅಲ್ಲ..

ಮೊದಲು ಟಾಕ್ಸಿಕ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದೇ ಭಾವಿಸಲಾಗಿತ್ತು. ಆದರೆ ಯಶ್ ಇದನ್ನು ವಿಶ್ವ ದರ್ಜೆಯ ಸಿನಿಮಾ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದು ವಿಶ್ವ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಹಾಲಿವುಡ್‌ನ ಪ್ರಮುಖ ನಿರ್ಮಾಣ ಸಂಸ್ಥೆಯಾದ ಫಾಕ್ಸ್ ಸೆಂಚುರಿ ಜೊತೆ ಯಶ್ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮಾತ್ರವಲ್ಲದೆ ವಿಶ್ವದ ಹಲವು ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ತೆರೆಗೆ ಬರಲಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+