Yash Toxic: ‘ಕೆಜಿಎಫ್’ ಜೊತೆ ಟಾಕ್ಸಿಕ್ ಬೆಸುಗೆ, ಏನಿದು ಅಭಿಮಾನಿಗಳ ಲೆಕ್ಕಾಚಾರ?
ಕನ್ನಡಿಗ ಯಶ್ ಹೆಸರು ಇದೀಗ ಹಾಲಿವುಡ್ ಅಂಗಳದಲ್ಲೂ ಹವಾ ಎಬ್ಬಿಸಿದ್ದು, ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡುತ್ತಿದೆ. ಯಶ್ ಹೆಸರು ಕೇಳಿದರೆ ಸಾಕು ಪಾಶ್ಚಿಮಾತ್ಯರು ಕೂಡ ನಮ್ಮ ಕನ್ನಡ ಸಿನಿಮಾ 'ಕೆಜಿಎಫ್' ಹೆಸರು ಹೇಳುತ್ತಾರೆ. ಯಾಕಂದ್ರೆ 'ಕೆಜಿಎಫ್-1' & 'ಕೆಜಿಎಫ್-2' ಸಿನಿಮಾಗಳು ಸೃಷ್ಟಿಸಿರುವ ದಾಖಲೆಗಳು ಆ ರೀತಿ ಇವೆ. ಕನ್ನಡ ಸಿನಿಮಾ ಇಂಡಸ್ಟ್ರಿಯೇ ಹೆಮ್ಮೆ ಪಡುವಂತೆ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ ಒಂದು 1,000 ಕೋಟಿ ರೂಪಾಯಿ ಕ್ಲಬ್ ಸೇರಿದ್ದು 'ಕೆಜಿಎಫ್-2' ಸಿನಿಮಾ ಮೂಲಕ.
'ಕೆಜಿಎಫ್ ಚಾಪ್ಟರ್ 1' & 'ಕೆಜಿಎಫ್ ಚಾಪ್ಟರ್ 2' ನಂತರ 'ಕೆಜಿಎಫ್ ಚಾಪ್ಟರ್ 3' ಬರೋದು ಗ್ಯಾರಂಟಿ ಆಗಿದೆ. ಹೀಗಿದ್ದಾಗ ಪ್ರಶಾಂತ್ ನೀಲ್ ಅವರು 'ಕೆಜಿಎಫ್ ಚಾಪ್ಟರ್-3' ಸಿನಿಮಾಗಾಗಿ ದೊಡ್ಡದಾಗಿ ಪ್ಲಾನ್ ಮಾಡಿದ್ದಾರೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಆದರೆ ಇದೇ ವೇಳೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಹೊಸ ಲೆಕ್ಕಾಚಾರ ಹಾಕುತ್ತಿದ್ದಾರೆ. ಆ ಲೆಕ್ಕಚಾರದ ಪ್ರಕಾರ 'ಕೆಜಿಎಫ್' ಜೊತೆ 'ಟಾಕ್ಸಿಕ್' ಬೆಸುಗೆ? ಏನಿದು ಅಭಿಮಾನಿಗಳ ಲೆಕ್ಕ? ಮುಂದೆ ಓದಿ.

'ಕೆಜಿಎಫ್' ಜೊತೆ 'ಟಾಕ್ಸಿಕ್' ಬೆಸುಗೆ?
ಹೌದು, ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ ಜನವರಿ 8 ರಂದು ಮುಗಿದು ಹೋಗಿದೆ. ಹೀಗೆ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ ಹಿನ್ನೆಲೆ 'ಟಾಕ್ಸಿಕ್' ಸಿನಿಮಾ ಗ್ಲಿಂಪ್ಸ್ ಅಂದ್ರೆ ಚಿತ್ರದ ಕೆಲವು ಸೀನ್ ರಿಲೀಸ್ ಮಾಡಲಾಗಿದೆ. ಇಂತಹ ಸಮಯದಲ್ಲೇ, ಯಶ್ ಅವರ ಫ್ಯಾನ್ಸ್ ಈ ಸಿನಿಮಾ ಹಾಲಿವುಡ್ ಲೆವೆಲ್ ಪಕ್ಕಾ ಅಂತಿದ್ದಾರೆ. ಮತ್ತೊಂದು ಕಡೆ 'ಕೆಜಿಎಫ್' ಜೊತೆ 'ಟಾಕ್ಸಿಕ್' ಸಿನಿಮಾ ಕೂಡ ಬೆಸುಗೆ ಹಾಕಿಕೊಳ್ಳುತ್ತಾ? ಅನ್ನೋ ಲೆಕ್ಕಾಚಾರ ಕೂಡ ಶುರುವಾಗಿ ಸಂಚಲನ ಸೃಷ್ಟಿ ಮಾಡಿದೆ.
1970ರ ಕಥೆಯಲ್ಲಿ ದೊಡ್ಡ ತಿರುವು?
'ಕೆಜಿಎಫ್' ರೀತಿಯೇ 'ಟಾಕ್ಸಿಕ್' ಕೂಡ 1970 ರ ದಶಕದ ಆಸುಪಾಸಿನಲ್ಲಿ ನಡೆಯುವ ಕಥೆ ಎನ್ನಲಾಗ್ತಿದೆ. ಹೀಗಾಗಿ ಯಾವುದೇ ಹಿಂಟ್ ಕೊಡದೆ ಇದೀಗ ದೊಡ್ಡ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ತಂಡ ಪ್ಲಾನ್ ಮಾಡಿದೆಯಾ? ಎಂಬ ಡೌಟ್ ಕೂಡ ಕಾಡುತ್ತಿದೆ. 'ಕೆಜಿಎಫ್' ಜೊತೆ 'ಟಾಕ್ಸಿಕ್' ಸಿನಿಮಾ ಬೆಸುಗೆ ಹಾಕಿಕೊಳ್ಳುತ್ತಾ? ಎಂಬ ಚರ್ಚೆ ಕೂಡ ಜೋರಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾ ಪೂರ್ತಿ ಮತ್ತೊಮ್ಮೆ 'ಕೆಜಿಎಫ್' ವಿಚಾರ ಟ್ರೆಂಡ್ ಆಗುತ್ತಿದೆ. ಈ ಮೂಲಕ ರಾಕಿಭಾಯ್ ಯಶ್ ಅಬ್ಬರ ಜೋರಾಗಿದೆ.
ಒಟ್ನಲ್ಲಿ ಅಭಿಮಾನಿಗಳಿಗೆ ದೊಡ್ಡದಾಗಿ ಸಿಗ್ನಲ್ ಕೊಟ್ಟಿರುವ ರಾಕಿಭಾಯ್ ಯಶ್ ಸಂಚಲನವೇ ಸೃಷ್ಟಿಸಿ ಹಾಲಿವುಡ್ ಕೂಡ ಶೇಕ್ ಆಗುವಂತೆ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಎಂಬ ಬಿರುದನ್ನು ಪಡೆದಿರುವ ಯಶ್ ಹೊಸ ಸಿನಿಮಾಗಾಗಿ ಹಲವು ವರ್ಷಗಳಿಂದ ಅಭಿಮಾನಿಗಳು ಕಾಯುತ್ತಿದ್ದು, ಈಗ ಭರ್ಜರಿ ಸುದ್ದಿ ಸಿಕ್ಕಿದೆ. ಕನ್ನಡ ಸಿನಿಮಾಗಳ ತಾಕತ್ ಏನು? ಅನ್ನೋದು ಮತ್ತೊಮ್ಮೆ ಇಡೀ ಜಗತ್ತಿಗೇ ಮನವರಿಕೆ ಮಾಡಿಸಲು ಹೊರಟಿದ್ದಾರೆ ರಾಕಿಭಾಯ್ ಯಶ್.












Click it and Unblock the Notifications